IPL 2023: ಐಪಿಎಲ್ ಟೂರ್ನಿಯನ್ನು ಏಕಾಂಗಿಯಾಗಿ ಗೆದ್ದು ಕೊಡುವ ಸಾಮರ್ಥ್ಯ ಇರುವ ಬೆನ್ ಸ್ಟೋಕ್ ರವರನ್ನು ಯಾವ ತಂಡ ಖರೀದಿ ಮಾಡಲಿದೆ ಅಂತೇ ಗೊತ್ತೇ??

IPL 2023: ಐಪಿಎಲ್ ಟೂರ್ನಿಯನ್ನು ಏಕಾಂಗಿಯಾಗಿ ಗೆದ್ದು ಕೊಡುವ ಸಾಮರ್ಥ್ಯ ಇರುವ ಬೆನ್ ಸ್ಟೋಕ್ ರವರನ್ನು ಯಾವ ತಂಡ ಖರೀದಿ ಮಾಡಲಿದೆ ಅಂತೇ ಗೊತ್ತೇ??

IPL 2023: ಐಪಿಎಲ್ ಸೀಸನ್ 16ರ (IPL 16) ಮಿನಿ ಹರಾಜು ಪ್ರಕ್ರಿಯೆಗೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಡಿಸೆಂಬರ್ 23ರಂದು ಹರಾಜು ಪ್ರಕ್ರಿಯೆ ಕೇರಳ ಕೊಚ್ಚಿಯಲ್ಲಿ (Cochin) ನಡೆಯಲಿದೆ. ಇದಕ್ಕೆ ಈಗಾಗಲೇ 991 ಆಟಗಾರರು ಹೆಸರು ನೀಡಿದ್ದಾರೆ. ಎಲ್ಲಾ ಆಟಗಾರರ ಪೈಕಿ ಹೈಲೈಟ್ ಆಗಿರುವ ಹೆಸರು ಬೆನ್ ಸ್ಟೋಕ್ಸ್ (Ben Stokes) ಎಂದು ಹೇಳಬಹುದು. ಏಕೆಂದರೆ ಇಂಗ್ಲೆಂಡ್ (England) ನ ಈ ಶ್ರೇಷ್ಠ ಆಟಗಾರ, ಕೆಲ ವರ್ಷಗಳ ಕಾಲ ಐಪಿಎಲ್ ಇಂದ ದೂರವಿದ್ದರು. ಆದರೆ ಈ ವರ್ಷದಿಂದ ಮತ್ತೆ ಐಪಿಎಲ್ ಗೆ ಕಂಬ್ಯಾಕ್ ಮಾಡುತ್ತಿದ್ದಾರೆ.

ಇವರು ಐಪಿಎಲ್ ಗೆ ರೀಎಂಟ್ರಿ ಕೊಡುತ್ತಾರೆ ಎಂದು ತಿಳಿದ ತಕ್ಷಣವೇ ಎಲ್ಲಾ 10 ಫ್ರಾಂಚೈಸಿಗಳು ಇವರನ್ನು ಖರೀದಿ ಮಾಡಲು ಪ್ಲಾನ್ ಮಾಡಿಕೊಳ್ಳುತ್ತಿವೆ. ಬೆನ್ ಸ್ಟೋಕ್ಸ್ ಅವರು ಯಾವ ತಂಡದ ಪಾಲಾಗಬಹುದು ಎನ್ನುವ ಚರ್ಚೆ ಕೂಡ ನಡೆಯುತ್ತಿದ್ದು, ಇದಕ್ಕೆ ಭಾರತ ತಂಡದ ಸೀನಿಯರ್ ಆಟಗಾರ ರವಿಚಂದ್ರನ್ ಅಶ್ವಿನ್ (Ravichandran Ashwin) ಉತ್ತರ ನೀಡಿದ್ದಾರೆ, ಅಶ್ವಿನ್ ಅವರ ಅಂದಾಜಿನ ಪ್ರಕಾರ, ಬೆನ್ ಸ್ಟೋಕ್ಸ್ ಅವರನ್ನು ಲಕ್ನೌ ಸೂಪರ್ ಜೈಂಟ್ಸ್ (Lucknow Super Giants) ತಂಡ ಖರೀದಿ ಮಾಡಬಹುದು. ಜೊತೆಗೆ, ಆ ತಂಡಕ್ಕೆ ಇವರು ಯಾಕೆ ಆಯ್ಕೆಯಾಗಬಹುದು ಎಂದು ಕಾರಣವನ್ನು ತಿಳಿಸಿದ್ದಾರೆ ಅಶ್ವಿನ್. ಇದನ್ನು ಓದಿ..Cricket News: ಮೊದಲನೇ ಪಂದ್ಯವನ್ನು ಹೀನಾಯವಾಗಿ ಸೋತ ಬೆನ್ನಲ್ಲೇ ಭಾರತ ತಂಡಕ್ಕೆ ಮತ್ತೊಂದು ಶಾಕ್. ಏನಾಗಿದೆ ಗೊತ್ತೇ??

ಲಕ್ನೌ ಸೂಪರ್ ಜೈಂಟ್ಸ್ ತಂಡಕ್ಕೆ ಈಗ ಒಬ್ಬ ಅತ್ಯುತ್ತಮ ಆಲ್ ರೌಂಡರ್ ನ ಅವಶ್ಯಕತೆ ಇದೆ. ಹಾಗಾಗಿ ಅವರು ಬೆನ್ ಸ್ಟೋಕ್ಸ್ ಅವರನ್ನು ಖರೀದಿ ಮಾಡಲು ಹೆಚ್ಚು ಹಣ ನೀಡಬಹುದು ಎಂದಿದ್ದಾರೆ ರವಿಚಂದ್ರನ್ ಅಶ್ವಿನ್. ಲಕ್ನೌ ತಂಡ ಈಗಾಗಲೇ ತಮ್ಮ ಟೀಮ್ ಇಂದ ನಾಲ್ವರು ವಿದೇಶಿ ಆಟಗಾರರನ್ನು ಬಿಡುಗಡೆ ಮಾಡಿದೆ. ಚಮೀರಾ (Chamira), ಆ್ಯಂಡ್ರೊ ಟೈ, ಎವಿನ್ ಲೂಯಿಸ್ (Evin Louis) ಹಾಗೂ ಜೇಸನ್ ಹೋಲ್ಡರ್ (Jason Holder) ಅವರನ್ನು ಬಿಡುಗಡೆ ಮಾಡಿದ್ದು, ಹೊಸ ಆಟಗಾರನ ಅವಶ್ಯಕತೆ ಇದೆ, ಹಾಗಾಗಿ ರವಿಚಂದ್ರನ್ ಅವರ ಪ್ರಿಡಿಕ್ಷನ್ ಹಾಗೆ ಎಲ್.ಎಸ್.ಜಿ (LSG) ತಂಡವೆ ಖರೀದಿ ಮಾಡುತ್ತಾ, ಅಥವಾ ಬೇರೆ ತಂಡ ಖರೀದಿ ಮಾಡುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Money Business: ಕೇವಲ 50 ಸಾವಿರ ಹೂಡಿಕೆ ಮಾಡಿದರೆ ಲಕ್ಷ ಲಕ್ಷ ಗಳಿಸುವ ಉತ್ತಮ ಬ್ಯುಸಿನೆಸ್ ಐಡಿಯಾ ಯಾವುದು ಗೊತ್ತೇ??