Cricket News: ಕೇವಲ ಉತ್ತಮ ಪ್ರದರ್ಶನನ ಮೂಲಕ ಏಕದಿನ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡ ಟಾಪ್ ಮೂರು ಆಟಗಾರರು ಯಾರ್ಯಾರು ಗೊತ್ತೇ??
Cricket News: ಕೇವಲ ಉತ್ತಮ ಪ್ರದರ್ಶನನ ಮೂಲಕ ಏಕದಿನ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡ ಟಾಪ್ ಮೂರು ಆಟಗಾರರು ಯಾರ್ಯಾರು ಗೊತ್ತೇ??
Cricket News: ಭಾರತ ತಂಡವು (Team India) ಟಿ20 ವಿಶ್ವಕಪ್ (T20 World Cup) ನ ಸೆಮಿ ಫೈನಲ್ಸ್ ನಲ್ಲಿ ಸೋತ ನಂತರ ಬದಲಾವಣೆಗಳನ್ನು ಮಾಡಬೇಕು ಎನ್ನುವ ಮಾತುಗಳು ಕೇಳಿಬರುತ್ತಿದ್ದ ಹಾಗೆಯೇ, ಈಗಾಗಲೇ ಬದಲಾವಣೆಗಳು ಶುರುವಾಗಿದೆ. ಕೆಲವು ಆಟಗಾರರು ಅದೃಶಷ್ಟದಿಂದ ತಂಡಕ್ಕೆ ಸೇರಿಕೊಂಡರೆ, ಇನ್ನು ಕೆಲವರು ತಮ್ಮ ಪರಿಶ್ರಮದಿಂದ, ಕಷ್ಟದಲ್ಲಿ ಪ್ರಾಕ್ಟೀಸ್ ಮಾಡಿ ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಕಾಪಾಡಿಕೊಂಡಿದ್ದಾರೆ. ಆ ಆಟಗಾರರು ಯಾರ್ಯಾರು ಎಂದು ಈಗ ತಿಳಿಸುತ್ತೇವೆ ನೋಡಿ..
ವಾಷಿಂಗ್ಟನ್ ಸುಂದರ್ (Washington Sundar) :- ಇವರು ಈಗ ಟೀಮ್ ಇಂಡಿಯಾ ಪರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತ ತಂಡದಲ್ಲಿ ಭಧ್ರಸ್ಥಾನ ಪಡೆಯಲು ಬುನಾದಿ ಹಾಕುತ್ತಿದ್ದಾರೆ.. ಇದುವರೆಗೂ 10 ಓಡಿಐ ಪಂದ್ಯಗಳನ್ನಾಡಿದ್ದಾರೆ. ಬ್ಯಾಟಿಂಗ್ ಚೆನ್ನಾಗಿ ಮಾಡಿವ ಇವರು, ಆಫ್ ಸ್ಪಿನ್ನರ್ ಆಗಿ ಉತ್ತಮವಾಗಿ ವಿಕೆಟ್ಸ್ ಸಹ ತೆಗೆಯುತ್ತಿದ್ದಾರೆ, 10 ಓವರ್ ಬೌಲಿಂಗ್ ಮಾಡಿಯು ಇವರು ಹೆಚ್ಚು ರನ್ಸ್ ಬಿಟ್ಟುಕೊಟ್ಟಿಲ್ಲ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಭಾರಿಸಿರುವ ಇವರು, ಮುಂದಿನ ವರ್ಲ್ಡ್ ಕಪ್ ಗೆ ಉತ್ತಮ ಆಯ್ಕೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Cricket News: ರಾಹುಲ್, ಪಂತ್ ಅಲ್ಲವೇ ಅಲ್ಲ, ಮುಂದಿನ ವಿಶ್ವಕಪ್ ಗೆ ಆರಂಭಿಕನನ್ನು ಆಯ್ಕೆ ಮಾಡಿದ ಯುವರಾಜ್ ಸಿಂಗ್: ಆಯ್ಕೆ ಮಾಡಿದ್ದೂ ಯಾರನ್ನು ಗೊತ್ತೇ??
ಮೊಹಮ್ಮದ್ ಸಿರಾಜ್ (Mohammad Siraj) :- ಇವರು ಟೀಮ್ ಇಂಡಿಯಾಗೆ ಬಂದಿದ್ದು, 2019ರಲ್ಲಿ, ಅಂದು ಕಳಪೆ ಪ್ರದರ್ಶನ ನೀಡಿದ್ದ ಸಿರಾಜ್ ತಂಡದಿಂದ ಹೊರಹೋಗಿದ್ದರು.2022ರಲ್ಲಿ ಟೀಮ್ ಇಂಡಿಯಾಗೆ ಮರಳಿ ಕಂಬ್ಯಾಕ್ ಮಾಡಿದ್ದು, ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ವರ್ಷ 13 ಓಡಿಐ ಪಂದ್ಯಗಳನ್ನು ಆಡಿ, 4 ಪಂದ್ಯಗಳಲ್ಲಿ 40 ಕ್ಕಿಂತ ಕಡಿಮೆ ರನ್ಸ್ ಬಿಟ್ಟುಕೊಟ್ಟಿದ್ದಾರೆ. 3 ಸಾರಿ 3 ವಿಕೆಟ್ಸ್ ಪಡೆದಿದ್ದಾರೆ. ಡೆತ್ ಓವರ್ ಗಳಲ್ಲಿ ಉತ್ತಮವಾದ ಯಾರ್ಕರ್ ಬಾಲ್ ಗಳನ್ನು ಹಾಕುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧದ (India vs Bangladesh) ಸರಣಿಯಲ್ಲಿ ಔಟ್ ಸ್ವಿಂಗ್ ಬೌಲಿಂಗ್ ಮಾಡಿ, ಇನ್ನಷ್ಟು ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಅತ್ಯುತ್ತಮ ಬೌಲರ್ ಗಳ ಸಾಲಿಗೆ ಬರುತ್ತಿದ್ದಾರೆ ಸಿರಾಜ್.
ಶ್ರೇಯಸ್ ಅಯ್ಯರ್ (Shreyas Iyer) :- ಪ್ರಸ್ತುತ ಇವರು ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ, ಅಯ್ಯ ಅವರು ಶಾರ್ಟ್ ಬಾಲ್ ಗೆ ಔಟ್ ಆಗುವ ವೀಕ್ನೆಸ್ ಹೊಂದಿದ್ದಾರೆ. ಆದರೆ ಆಡುತ್ತಿರುವ ಎಲ್ಲಾ ಪಂದ್ಯಗಳಲ್ಲು ಇನ್ನಷ್ಟು ಒಳ್ಳೆಯ ಪ್ರದರ್ಶನ ನೀಡುತ್ತಾ ಸುಧಾರಣೆ ಮಾಡಿಕೊಳ್ಳುತ್ತಿದ್ದಾರೆ. ಇವರು ಆಡಿರುವ ಈ ಹಿಂದಿನ 10 ಇನ್ನಿಂಗ್ಸ್ ಗಳಲ್ಲಿ 80, 54, 63, 44, 50, 113, 28, 80, 49 ಹಾಗು 24 ರನ್ಸ್ ಭಾರಿಸಿದ್ದಾರೆ. ಇವರು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬರುತ್ತಿದ್ದು, ಮಧ್ಯಮ ಕ್ರಮಾಂಕಕ್ಕೆ ಉತ್ತಮ ಬ್ಯಾಟ್ಸ್ಮನ್ ಎನ್ನಿಸಿಕೊಂಡಿದ್ದಾರೆ. ಇದನ್ನು ಓದಿ.. Money Business: ಕೇವಲ 50 ಸಾವಿರ ಹೂಡಿಕೆ ಮಾಡಿದರೆ ಲಕ್ಷ ಲಕ್ಷ ಗಳಿಸುವ ಉತ್ತಮ ಬ್ಯುಸಿನೆಸ್ ಐಡಿಯಾ ಯಾವುದು ಗೊತ್ತೇ??