Cricket News: ರಾಹುಲ್, ಪಂತ್ ಅಲ್ಲವೇ ಅಲ್ಲ, ಮುಂದಿನ ವಿಶ್ವಕಪ್ ಗೆ ಆರಂಭಿಕನನ್ನು ಆಯ್ಕೆ ಮಾಡಿದ ಯುವರಾಜ್ ಸಿಂಗ್: ಆಯ್ಕೆ ಮಾಡಿದ್ದೂ ಯಾರನ್ನು ಗೊತ್ತೇ??
Cricket News: ರಾಹುಲ್, ಪಂತ್ ಅಲ್ಲವೇ ಅಲ್ಲ, ಮುಂದಿನ ವಿಶ್ವಕಪ್ ಗೆ ಆರಂಭಿಕನನ್ನು ಆಯ್ಕೆ ಮಾಡಿದ ಯುವರಾಜ್ ಸಿಂಗ್: ಆಯ್ಕೆ ಮಾಡಿದ್ದೂ ಯಾರನ್ನು ಗೊತ್ತೇ??
Cricket News: ಭಾರತ ಕ್ರಿಕೆಟ್ ತಂಡವು (Team India) ಟಿ20 ವಿಶ್ವಕಪ್ ನಲ್ಲಿ ಸೋಲಲು ಪ್ರಮುಖ ಕಾರಣಗಳಲ್ಲಿ ಒಂದು ಆರಂಭಿಕ ಆಟಗಾರರ ವೈಫಲ್ಯ. ವಿಶ್ವಕಪ್ ನಲ್ಲಿ ಕೆ.ಎಲ್.ರಾಹುಲ್ (K L Rahul) ಮತ್ತು ರೋಹಿತ್ ಶರ್ಮಾ (Rohit Sharma) ಜೋಡಿ ಓಪನರ್ಸ್ ಆಗಿ ಬರುತ್ತಿದ್ದರು, ಆದರೆ ಅವರು ಉತ್ತಮ ಪ್ರದರ್ಶನ ನೀಡಲಿಲ್ಲ. ನ್ಯೂಜಿಲೆಂಡ್ (India vs New Zealand) ಮತ್ತು ಬಾಂಗ್ಲಾದೇಶ್ (India vs Bangladesh) ಸೀರೀಸ್ ನಲ್ಲಿ ಶಿಖರ್ ಧವನ್ (Shikhar Dhavan) ಅವರು ರೋಹಿತ್ ಶರ್ಮಾ ಅವರೊಡನೆ ಓಪನರ್ ಆಗಿ ಬಂದರು, ಆದರೆ ಶಿಖರ್ ಧವನ್ ಅವರು ಕೂಡ ಉತ್ತಮ ಪ್ರದರ್ಶನ ನೀಡಲಿಲ್ಲ. ಹಾಗಾಗಿ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಗೆ ಭಾರತ ತಂಡದ ಓಪನರ್ ಬ್ಯಾಟ್ಸ್ಮನ್ ಯಾರಗಬೇಕು ಎನ್ನುವ ಚರ್ಚೆ ಶುರುವಾಗಿದೆ.
ಪ್ರಸ್ತುತ ಬಾಂಗ್ಲಾದೇಶ್ ಸೀರೀಸ್ ನಲ್ಲಿ ಕೆ.ಎಲ್.ರಾಹುಲ್ ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹಾಗಾಗಿ ಅವರು ಮಧ್ಯಮ ಕ್ರಮಾಂಕದಲ್ಲೇ ಬ್ಯಾಟಿಂಗ್ ಮುಂದುವರೆಸುವ ಸಾಧ್ಯತೆ ಇದೆ. ಹಾಗಾಗಿ ಓಪನರ್ ಆಗಲು ಸೂಕ್ತವಾದ ಆಟಗಾರ ಯಾರು ಎನ್ನುವ ಪ್ರಶ್ನೆಗೆ ಮಾಜಿ ಕ್ರಿಕೆಟರ್ ಯುವರಾಜ್ ಸಿಂಗ್ (Yuvraj Singh) ಅವರು ಒಂದು ಹೆಸರು ನೀಡಿದ್ದಾರೆ. ಯುವರಾಜ್ ಸಿಂಗ್ ಅವರು ಹೇಳಿರುವುದು ಭರವಸೆಯ ಯುವ ಆಟಗಾರ ಶುಭಮನ್ ಗಿಲ್ (Shubhman Gill) ಅವರ ಹೆಸರು. ಅತ್ಯುತ್ತಮ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರಾಗಿರುವ ಶುಭಮನ್ ಗಿಲ್ ಪ್ರಸ್ತುತ ಬಹಳ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹಾಗಾಗಿ 2023ರಲ್ಲಿ ನಡೆಯುವ ಏಕದಿನ ವಿಶ್ವಕಪ್ (ODI World Cup) ಗೆ ಇವರೇ ಸೂಕ್ತವಾದ ಪ್ಲೇಯರ್ ಎಂದು ಹೇಳಿದ್ದಾರೆ ಯುವರಾಜ್ ಸಿಂಗ್. ಇದನ್ನು ಓದಿ.. Cricket News: ರೋಹಿತ್ ಶರ್ಮ ನಾಯಕತ್ವದ ಬಗ್ಗೆ ಇದ್ದದನ್ನು ಇದ್ದಹಾಗೆ ಹೇಳಿಬಿಟ್ಟ ಯುವರಾಜ್ ಸಿಂಗ್: ಕೊಟ್ಟ ರೇಟಿಂಗ್ ಎಷ್ಟು ಗೊತ್ತೇ??
“ನಿಜ ಹೇಳುವುದಾದರೆ, ಗಿಲ್ ಶ್ರಮಜೀವಿ. ಇನ್ನು 10 ವರ್ಷಗಳಲ್ಲಿ ಶುಭಮನ್ ಗಿಲ್ ಒಳ್ಳೆಯ ಸಾಧನೆ ಮಾಡುತ್ತಾರೆ ಎನ್ನುವ ನಂಬಿಕೆ ನನಗೆ ಇದೆ. ಇತ್ತೀಚಿನ ಪಂದ್ಯಗಳಲ್ಲಿ ಇವರು ಅತ್ಯುತ್ತಮ ಪ್ರದರ್ಶನ ನೀಡಿರುವುದರಿಂದ, 2023ರಲ್ಲಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಗೆ ಓಪನರ್ ಆಗಿ ಕಣಕ್ಕೆ ಇಳಿಯಲು ಶುಭಮನ್ ಗಿಲ್ ಒಳ್ಳೆಯ ಆಯ್ಕೆ..”ಎಂದಿದ್ದಾರೆ ಯುವಿ. ಲಾಕ್ ಡೌನ್ ವೇಳೆ ಶುಭಮನ್ ಗಿಲ್ ಮತ್ತು ಇನ್ನು ಕೆಲವು ಪಂಜಾಬ್ (Punjab) ನ ಯುವ ಆಟಗಾರರು ಯುವಿ ಅವರಿಂದ ತರಬೇತಿ ಪಡೆದಿದ್ದರು, ಹಾಗಾಗಿ ಅವರು ಆಡುವ ಶೈಲಿಯನ್ನು ಬಹಳ ಹತ್ತಿರದಿಂದ ನೋಡಿದ್ದಾರೆ ಯುವಿ. ಇನ್ನು 2022ರಲ್ಲಿ 12 ಓಡಿಐ (ODI) ಪಂದ್ಯಗಳನ್ನು ಆಡಿರುವ ಶುಭಮನ್ ಗಿಲ್ 638 ರನ್ಸ್ ಗಳಿಸಿದ್ದಾರೆ, ಇದರಲ್ಲಿ 4 ಅರ್ಧಶತಕ ಮತ್ತು 1 ಶತಕ ಸೇರಿದೆ. ಇವರ ಆವರೇಜ್ 70ಕ್ಕಿಂತ ಹೆಚ್ಚಿದೆ. ಹಾಗಾಗಿ ಶುಭಮನ್ ಗಿಲ್ ಅವರು ಉತ್ತಮ ಆಯ್ಕೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Money Business: ಕೇವಲ 50 ಸಾವಿರ ಹೂಡಿಕೆ ಮಾಡಿದರೆ ಲಕ್ಷ ಲಕ್ಷ ಗಳಿಸುವ ಉತ್ತಮ ಬ್ಯುಸಿನೆಸ್ ಐಡಿಯಾ ಯಾವುದು ಗೊತ್ತೇ??