Cricket News: ಮೊದಲನೇ ಪಂದ್ಯವನ್ನು ಹೀನಾಯವಾಗಿ ಸೋತ ಬೆನ್ನಲ್ಲೇ ಭಾರತ ತಂಡಕ್ಕೆ ಮತ್ತೊಂದು ಶಾಕ್. ಏನಾಗಿದೆ ಗೊತ್ತೇ??

Cricket News: ಮೊದಲನೇ ಪಂದ್ಯವನ್ನು ಹೀನಾಯವಾಗಿ ಸೋತ ಬೆನ್ನಲ್ಲೇ ಭಾರತ ತಂಡಕ್ಕೆ ಮತ್ತೊಂದು ಶಾಕ್. ಏನಾಗಿದೆ ಗೊತ್ತೇ??

Cricket News: ಭಾರತ ತಂಡ (Team India) ಈಗಾಗಲೇ ಹಿನ್ನಡೆ ಅನುಭವಿಸುತ್ತಿದೆ, ವಿಶ್ವಕಪ್ (T20 World CupP ಸೋತ ಬಳಿಕ, ಸೀರೀಸ್ ಗಳನ್ನು ಆಡಲು ಶುರು ಮಾಡಿದೆ, ಪ್ರಸ್ತುತ ಇಂಡಿಯಾ ವರ್ಸಸ್ ಬಾಂಗ್ಲಾದೇಶ (India be Bangladesh) ಓಡಿಐ ಸೀರೀಸ್ ಶುರುವಾಗಿದೆ. ಇದರ ಮೊದಲ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿತು. ಇದಾದ ಬಳಿಕ, ಎರಡನೇ ಪಂದ್ಯಕ್ಕೆ ತಯಾರಿ ನಡೆಯುತ್ತಿದೆ, ಎರಡನೇ ಓಡಿಐ ಪಂದ್ಯ ನಾಳೆ ನಡೆಯಲಿದ್ದು, ಈ ಪಂದ್ಯಕ್ಕಿಂತ ಮೊದಲು ಭಾರತ ತಂಡಕ್ಕೆ ಒಂದು ಶಾಕ್ ಸಿಕ್ಕಿದೆ. ಅದೇನೆಂದರೆ ಸ್ಟಾರ್ ಆಲ್ ರೌಂಡರ್ ಶಾರ್ದೂಲ್ ಠಾಕೂರ್ (Shardul Thakur) ಎರಡನೇ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಹೆಚ್ಚಿದೆ.

ಏಕೆಂದರೆ ಮೊದಲ ಪಂದ್ಯ ಆಡುವಾಗಲೇ ಶಾರ್ದೂಲ್ ಠಾಕೋರ್ ಅವರು ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು, ಅದರಿಂದ ಸ್ವಲ್ಪ ಸಮಯ ಮೈದಾನದಿಂದ ಹೊರಾಗಿದ್ದರು, ಬಳಿಕ ಮೈದಾನಕ್ಕೆ ವಾಪಸ್ ಬಂದಿದ್ದರು. ಪ್ರಸ್ತುತ ಶಾರ್ದೂಲ್ ಠಾಕೂರ್ ಅವರ ಸ್ನಾಯು ಸಮಸ್ಯೆಯನ್ನು ಮ್ಯಾನೇಜ್ಮೆಂಟ್ ನ ವೈದ್ಯರ ತಂಡ ನೋಡಿಕೊಳ್ಳುತ್ತಿದೆ. ಅವರಿಗೆ ಚಿಕಿತ್ಸೆ, ನೀಡಲಾಗುತ್ತಿದ್ದು, ಇಂದು ಅವರು ಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ನೋಡಿ, ಪಂದ್ಯಕ್ಕೆ ಆಯ್ಕೆ ಮಾಡಬೇಕೋ ಬೇಡವೋ ಎಂದು ನಿರ್ಧಾರ ಮಾಡಲಾಗುತ್ತದೆ. ಶಾರ್ದೂಲ್ ಠಾಕೂರ್ ಅವರ ವಿಚಾರದಲ್ಲಿ ಆತುರದ ನಿರ್ಧಾರ ಬೇಡ ಎಂದು ಮ್ಯಾನೇಜ್ಮೆಂಟ್ ತೀರ್ಮಾನ ಮಾಡಿದ್ದು, ಅವರಿಗೆ ವಿಶ್ರಾಂತಿ ಪಡೆಯಲು ಹೇಳಿದೆ. ಇದನ್ನು ಓದಿ.. Cricket News: ಈತನೊಬ್ಬ ನಾಯಕನಾ: ಅರ್ಹತೆ ಇಲ್ಲದವರನ್ನು ನಾಯಕ ಮಾಡಿದರೆ ಹೀಗೆ ಹಾಗೋದು ಎಂದ ನೆಟ್ಟಿಗರು. ನಿನ್ನೆ ರೋಹಿತ್ ಮಾಡಿದ್ದೇನು ಗೊತ್ತೇ??

ಮೊದಲ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಅವರು ಉತ್ತಮ ಪ್ರದರ್ಶನ ನೀಡಿದ್ದರು, 9 ಓವರ್ ಬೌಲಿಂಗ್ ಮಾಡಿ ಕೇವಲ 21 ರನ್ಸ್ ಬಿಟ್ಟುಕೊಟ್ಟಿದ್ದರು. ಈಗ ಶಾರ್ದೂಲ್ ಠಾಕೂರ್ ಅವರ ಬದಲಾಗಿ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಉಮ್ರಾನ್ ಮಲಿಕ್ (Umran Malik) ಅವರು ಎರಡನೇ ಓಡಿಐ ಪಂದ್ಯಕ್ಕೆ ಪ್ಲೇಯಿಂಗ್ 11 ನಲ್ಲಿ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಭಾರತ ತಂಡ ಈಗಾಗಲೇ ಸೋಲಿನ ಸುಳಿಯಲ್ಲಿ, ಕಷ್ಟದಲ್ಲಿ ಇರುವಾಗ, ಮತ್ತೊಬ್ಬ ಆಟಗಾರನಿಗೆ ಹೀಗೆ ಇಂಜುರಿ ಆಗಿರುವುದು ಬಹಳ ನಿರಾಶೆ ಮತ್ತು ಬೇಸರದ ವಿಚಾರ ಆಗಿದ್ದು, ಎರಡನೇ ಪಂದ್ಯದಲ್ಲಿ ಭಾರತ ತಂಡದ ಪ್ರದರ್ಶನ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Cricket News: ತಂಡದಲ್ಲಿಯೇ ಉಳಿಬೇಕು ಎಂದರೆ, ರಾಹುಲ್ ಗೆ ಹೊಸ ಸಂದೇಶ ಕೊಟ್ಟು, ಜವಾಬ್ದಾರಿ ಕೊಟ್ಟ ತಂಡದ ಮ್ಯಾನೇಜ್ಮೆಂಟ್. ಇನ್ಮುಂದೆ ಏನು ಮಾಡಬೇಕಂತೆ ಗೊತ್ತೇ?