Cricket News: ವಿಶ್ವಕಪ್ ನಲ್ಲಿ ಕೊಹ್ಲಿ ಬಾರಿಸಿದ ಆ ಎರಡು ಸಿಕ್ಸರ್ ಗಳನ್ನು ನೆನಪಿಸಿಕೊಂಡ ಅದೇ ಪಾಕ್ ಬೌಲರ್ ಈಗ ಹೇಳಿದ್ದೇನು ಗೊತ್ತೇ??
Cricket News: ವಿಶ್ವಕಪ್ ನಲ್ಲಿ ಕೊಹ್ಲಿ ಬಾರಿಸಿದ ಆ ಎರಡು ಸಿಕ್ಸರ್ ಗಳನ್ನು ನೆನಪಿಸಿಕೊಂಡ ಅದೇ ಪಾಕ್ ಬೌಲರ್ ಈಗ ಹೇಳಿದ್ದೇನು ಗೊತ್ತೇ??
Cricket News: ಈ ವರ್ಷದ ಟಿ20 ವಿಶ್ವಕಪ್ (T20 World Cup) ನಲ್ಲಿ ಭಾರತ ವರ್ಸಸ್ ಪಾಕಿಸ್ತಾನ್ (India vs Pakistan) ಮ್ಯಾಚ್ ನಲ್ಲಿ ವಿರಾಟ್ ಕೊಹ್ಲಿ ಅವರ ಅದ್ವಿತೀಯ ಬ್ಯಾಟಿಂಗ್ ಬಲದಿಂದ ಭಾರತ ತಂಡ ಗೆದ್ದಿತು. ಭಾರತ ತಂಡ ಸಂಕಷ್ಟದಲ್ಲಿದ್ದಾಗ ವಿರಾಟ್ (Virat Kohli) ಅವರ ಬ್ಯಾಟ್ ಇಂದ ಬಂದ ಆ ಅಮೂಲ್ಯವಾದ ರನ್ಸ್ ಗಳು ತಂಡಕ್ಕೆ ಗೆಲುವು ತಂದುಕೊಟ್ಟಿತು. ಏಳು ಎಸೆತಗಳಲ್ಲಿ 22 ರನ್ ಗಳು ಬೇಕಿದ್ದಾಗ, ಸಿಕ್ಸರ್ ಭಾರಿಸಿದ ಕೋಹ್ಲಿ, 6 ಎಸೆತಗಳಿಗೆ 16ರನ್ ಗೆ ತಂದು ನಿಲ್ಲಿಸಿದರು. ಈ ಎಸೆತ ಬೌಲರ್ ನ ತಲೆಯ ಮೇಲೆ ಹಾದು ಹೋಗಿತ್ತು, ಆ ಇನ್ನಿಂಗ್ಸ್ ವಿರಾಟ್ ಅವರ ಬೆಸ್ಟ್ ಇನ್ನಿಂಗ್ಸ್ ಗಳಲ್ಲಿ ಒಂದಾಗಿತ್ತು. ಇದರ ಬಗ್ಗೆ ಅಂದು ಪಾಕಿಸ್ತಾನದ ಪರವಾಗಿ ಬೌಲಿಂಗ್ ಮಾಡಿದ್ದ ಹ್ಯಾರಿಸ್ ರೌಫ್ (Haris Rauf) ಅವರು ವಿರಾಟ್ ಅವರ ಈ ಆಟದ ಶೈಲಿಯ ಬಗ್ಗೆ ಮಾತನಾಡಿದ್ದಾರೆ..
ವಿರಾಟ್ ಅವರು ಅಂತಹ ಶಾಟ್ಸ್ ಹೊಡೆದದ್ದು ಅಚ್ಚರಿ ಆಗಲಿಲ್ಲ ಎಂದಿದ್ದಾರೆ, “ವರ್ಲ್ಡ್ ಕಪ್ ನಲ್ಲಿ ಅವರು ಆಡಿದ ರೀತಿ, ಅದು ಅವರ ಕ್ಲಾಸ್ ಆಗಿತ್ತು. ಅವರು ಆಡುವ ಎಲ್ಲಾ ಶಾಟ್ಸ್ ಗಳು ನಮಗೆ ಗೊತ್ತಿದೆ. ಅವರು ಸಿಕ್ಸ್ ಹೊಡೆದ ರೀತಿ..ಬೇರೆ ಯಾವುದೇ ಬೌಲರ್ ಆಗಿದ್ದರು, ನನ್ನ ಬೌಲಿಂಗ್ ಗೆ ಆ ರೀತಿಯ ಸಿಕ್ಸರ್ ಹೊಡೆಯಲು ಸಾಧ್ಯ ಆಗುತ್ತಿರಲಿಲ್ಲ. ಒಂದು ವೇಳೆ ದಿನೇಶ್ ಕಾರ್ತಿಕ್ (Dinesh Karthik) ಅಥವಾ ಹಾರ್ದಿಕ್ ಪಾಂಡ್ಯ (Hardik Pandya) ಆ ಸಿಕ್ಸರ್ ಗಳನ್ನು ಹೊಡೆದಿದ್ದರೆ, ನನಗೆ ನೋವಾಗುತ್ತಿತ್ತು. ಆದರೆ ಅವು ಕೋಹ್ಲಿ ಅವರ ಬ್ಯಾಟ್ ಇಂದ ಬಂದಿದ್ದು, ಟಾಪ್ ಕ್ಲಾಸ್ ಆಗಿತ್ತು. ಇದನ್ನು ಓದಿ.. Cricket News: ತಂಡದ ಮುಂದೆ ಹೊಸ ಡಿಮ್ಯಾಂಡ್ ಇಟ್ಟ ರಿಷಬ್ ಪಂತ್: ಯಾವ ಸ್ಥಾನ ಬೇಕಂತೆ ಗೊತ್ತೆ??
ಸ್ಕ್ವೇರ್ ಸೈಡ್ ನಲ್ಲಿ ಬೌಂಡರಿ ದೊಡ್ಡದಾಗಿದ್ದ ಕಾರಣ ಸ್ಲೋ ಬಾಲ್ ಹಾಕುವ ಐಡಿಯಾ ಅದಾಗಿತ್ತು. ಆದರೆ ಆ ಎಸೆತವನ್ನು ಅವರು ನನ್ನ ಮೇಲೆಯೇ ಹೊಡೆಯುತ್ತಾರೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಹಾಗಾಗಿ ಅವರು ಆ ಶಾಟ್ ಹೊಡೆದಾಗ, ಅದು ಅವರ ಕ್ಲಾಸ್ ಆಗಿತ್ತು. ನನ್ನ ಪ್ಲಾನ್ ಮತ್ತು ಅದನ್ನು ಎಕ್ಸಿಕ್ಯೂಟ್ ಮಾಡಿದ್ದು ಸರಿಯಿತ್ತು, ಆದರೆ ಆ ಶಾಟ್ ಪೂರ್ತಿಯಾಗಿ ಅವರ ಕ್ಲಾಸ್ ಆಗಿತ್ತು..” ಎಂದು ಹೇಳುವ ಮೂಲಕ ವಿರಾಟ್ ಕೊಹ್ಲಿ ಅವರನ್ನು ಹಾಡಿ ಹೊಗಲಿದ್ದಾರೆ ಹ್ಯಾರಿಸ್ ರೌಫ್. ಇದನ್ನು ಓದಿ.. Business: ಬಿಸಿನೆಸ್ ಮೆನ್ ಗಳು ದುಡ್ಡು ಮಾಡುವುದು ಹೇಗೆ ಗೊತ್ತೇ?? ನಿಮ್ಮ ಬಳಿ ಕೇವಲ 100 ರೂಪಾಯಿ ಇದ್ರೆ, ಇಲ್ಲೇ ಇನ್ವೆಸ್ಟ್ ಮಾಡಿ ಸಾಕು.