Cricket news: ಬ್ಯಾಟಿಂಗ್ ಬಗ್ಗೆ ಆಡಿಕೊಳ್ಳುವವರಿಗೆ ಟಾಂಗ್ ಕೊಟ್ಟ ರಿಷಬ್: ನನಗೆ ಕೇವಲ 24 ವರ್ಷ ಎಂದು ಹೇಳಿದ್ದೇನು ಗೊತ್ತೇ??

Cricket news: ಬ್ಯಾಟಿಂಗ್ ಬಗ್ಗೆ ಆಡಿಕೊಳ್ಳುವವರಿಗೆ ಟಾಂಗ್ ಕೊಟ್ಟ ರಿಷಬ್: ನನಗೆ ಕೇವಲ 24 ವರ್ಷ ಎಂದು ಹೇಳಿದ್ದೇನು ಗೊತ್ತೇ??

Cricket News: ಟೀಮ್ ಇಂಡಿಯಾ (Team India) ಈಗ ನ್ಯೂಜಿಲೆಂಡ್ (India vs New Zealand) ವಿರುದ್ಧ ಸರಣಿ ಪಂದ್ಯಗಳನ್ನು ಮುಗಿಸಿದ್ದು, ಮುಂದೆ ಬಾಂಗ್ಲಾದೇಶ್ (India vs Bangladesh) ವಿರುದ್ಧ ಪಂದ್ಯಗಳನ್ನು ಆಡಲಿದೆ. ಇಲ್ಲಿ ಭಾರತ ತಂಡದ ಪ್ರದರ್ಶನಕ್ಕಿಂತ ಹೆಚ್ಚಾಗಿ, ರಿಷಬ್ ಪಂತ್ (Rishabh Pant) ಅವರ ಫಾರ್ಮ್ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿದೆ ಎಂದು ಹೇಳಬಹುದು. ರಿಷಬ್ ಪಂತ್ ಅವರು ಏಷ್ಯಾಕಪ್ (Asiacup) ಸಮಯದಿಂದಲು ಅತ್ಯಂತ ಕಳಪೆ ಫಾರ್ಮ್ ನಲ್ಲಿದ್ದಾರೆ. 2021ಕ್ಕೆ ಹೋಲಿಕೆ ಮಾಡಿದರೆ, ಟೆಸ್ಟ್ ಕ್ರಿಕೆಟ್ ಮತ್ತು ಓಡಿಐ ನಲ್ಲಿ ಕೂಡ ರಿಷಬ್ ಪಂತ್ ಅವರ ಪ್ರದರ್ಶನ ಕಳಪೆಯಾಗಿದೆ, 2021ರಲ್ಲಿ ಇವರ ಸರಾಸರಿ 77.50 ಇತ್ತು ಈಗ 40.75 ಗೆ ಕುಸಿದಿದೆ. ಹೀಗಿರುವಾಗ, ಈ ಆಟಗಾರನ ಬಗ್ಗೆ ಎಲ್ಲರಿಗೂ ಅಸಮಾಧಾನ ಇದೆ.

ರಿಷಬ್ ಪಂತ್ ಅವರಿಗೆ ಪದೇ ಪದೇ ಅವಕಾಶಗಳನ್ನು ಕೊಡುತ್ತಿದ್ದರು ಕೂಡ, ಅವರು ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ, ಇತ್ತ ಪ್ರತಿಭಾನ್ವಿತ ಆಟಗಾರ ಸಂಜು ಸ್ಯಾಮ್ಸನ್ (Sanju Samson) ಅವರು ಭಾರತ ತಂಡಕ್ಕೆ ಆಯ್ಕೆಯಾಗುತ್ತಿದ್ದರು ಕೂಡ ಅವರಿಗೆ ಪ್ಲೇಯಿಂಗ್ 11 ನಲ್ಲಿ ಅವಕಾಶ ಸಿಗುತ್ತಿಲ್ಲ, ಇದರ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಈ ವಿಚಾರದಲ್ಲಿ ಹರ್ಷ ಬೋಗ್ಲೇ (Harsha Bogle) ಅವರು ರಿಷಬ್ ಪಂತ್ ಅವರಿಗೆ ಪ್ರಶ್ನೆ ಮಾಡಿದ್ದು, “ಟೆಸ್ಟ್ ಕ್ರಿಕೆಟ್ ಮತ್ತು ವೈಟ್ ಬಾಲ್ ಕ್ರಿಕೆಟ್ ಇವುಗಳ ನಡುವಿನ ವ್ಯತ್ಯಾಸ ಆದರು ಏನು? ಈ ಎರಡು ಥರದ ದಾಖಲೆಗಳು, ಬೇರೆ ಬೇರೆ ಕಥೆಗಳನ್ನು ಹೇಳುತ್ತದೆಯೇ?” ಎಂದು ರಿಷಬ್ ಪಂತ್ ಅವರಿಗೆ ಪ್ರಶ್ನೆ ಕೇಳಲಾಯಿತು. ಇದನ್ನು ಓದಿ.. Cricket News: ರೋಹಿತ್ ಹಾಗೂ ರಾಹುಲ್ ಗೆ ಮತ್ತೊಂದು ಆತಂಕ ಶುರು. ಅವಕಾಶ ಕೊಟ್ಟರೂ ಬಳಸಿಕೊಳ್ಳದವರ ಪರಿಸ್ಥಿತಿ ಏನಾಗಿದೆ ಗೊತ್ತೇ?

ಅದಕ್ಕೆ ಉತ್ತರ ಕೊಟ್ಟ ರಿಷಬ್ ಪಂತ್, “ದಾಖಲೆಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಟೆಸ್ಟ್ ಕ್ರಿಕೆಟ್ ನಲ್ಲಿ ನನ್ನ ಪ್ರದರ್ಶನ ಚೆನ್ನಾಗಿದೆ, ಹಾಗೆಯೇ ವೈಟ್ ಬಾಲ್ ನಲ್ಲಿ ಕೂಡ ನನ್ನ ದಾಖಲೆಗಳು ಉತ್ತಮವಾಗಿವೆ. ಇನ್ನು ನನಗೆ 24 ವರ್ಷ ವಯಸ್ಸು, ಇದರ ಬಗ್ಗೆ ಹೋಲಿಕೆ ಮಾಡಿ ಮಾತನಾಡುವುದಾದರೆ, ನಾನು 31ರಿಂದ 32 ವರ್ಷದವನಾದಾಗ ಹೋಲಿಕೆ ಮಾಡಿ ಮಾತನಾಡಿ..” ಎಂದು ಹೇಳಿದ್ದಾರೆ ರಿಷಬ್ ಪಂತ್. ಈ ವಿಚಾರ ಈಗ ಭಾರಿ ವೈರಲ್ ಆಗಿದೆ, 24ನೇ ವಯಸ್ಸಿಗೆ ಇಷ್ಟು ಕಳಪೆ ಪ್ರದರ್ಶನ ನೀಡುತ್ತಿರುವ ರಿಷಬ್ ಪಂತ್ ಅವರು 30 ರ ಹರೆಯಕ್ಕೆ ಇನ್ನು ಯಾವ ಮಟ್ಟಕ್ಕೆ ಕಳಪೆ ಪ್ರದರ್ಶನ ನೀಡಬಹುದು ಎಂದು ರಿಷಬ್ ಅವರನ್ನು ಟೀಕೆ ಮಾಡುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Cricket News: ಕೊನೆ ಕ್ಷಣದಲ್ಲಿ ಮತ್ತೊಂದು ಟ್ವಿಸ್ಟ್?? ದ್ರಾವಿಡ್ – ರೋಹಿತ್ ಶರ್ಮ ಗೆ ಬಿಗ್ ರಿಲೀಫ್. ಬಿಸಿಸಿಐ ದಿಡೀರ್ ಎಂದು ದಾರಿ ಬದಲಾಯಿಸಿದ್ದು ಯಾಕೆ??