Cricket News: ಕೊನೆ ಕ್ಷಣದಲ್ಲಿ ಮತ್ತೊಂದು ಟ್ವಿಸ್ಟ್?? ದ್ರಾವಿಡ್ – ರೋಹಿತ್ ಶರ್ಮ ಗೆ ಬಿಗ್ ರಿಲೀಫ್. ಬಿಸಿಸಿಐ ದಿಡೀರ್ ಎಂದು ದಾರಿ ಬದಲಾಯಿಸಿದ್ದು ಯಾಕೆ??

Cricket News: ಕೊನೆ ಕ್ಷಣದಲ್ಲಿ ಮತ್ತೊಂದು ಟ್ವಿಸ್ಟ್?? ದ್ರಾವಿಡ್ – ರೋಹಿತ್ ಶರ್ಮ ಗೆ ಬಿಗ್ ರಿಲೀಫ್. ಬಿಸಿಸಿಐ ದಿಡೀರ್ ಎಂದು ದಾರಿ ಬದಲಾಯಿಸಿದ್ದು ಯಾಕೆ??

Cricket News: ಟಿ20 ವಿಶ್ವಕಪ್ (T20 World Cup) ಮುಗಿದ ನಂತರ ಭಾರತ ತಂಡದಲ್ಲಿ (Team India), ಮ್ಯಾನೇಜ್ಮೆಂಟ್ ನಲ್ಲಿ ಬದಲಾವಣೆ ಆಗಲೇಬೇಕು ಎಂದು ಚರ್ಚೆಗಳು ಶುರುವಾಗಿದ್ದವು. ಅದಕ್ಕೆ ತಕ್ಕ ಹಾಗೆ, ಬಿಸಿಸಿಐ (BCCI) ಆಯ್ಕೆ ಸಮಿತಿಯನ್ನು ವಜಾಗೊಳಿಸಿ, ಹೊಸ ಆಯ್ಕೆ ಸಮಿತಿಗೆ ಅರ್ಜಿ ಆಹ್ವಾನ ನೀಡಿದೆ. ಇದರ ನಡುವೆಯೇ ಕೆಲವು ಹಿರಿಯ ಆಟಗಾರರನ್ನು ಟಿ20 ತಂಡದಿಂದ ಕೈಬಿಡುವುದು ಒಳ್ಳೆಯದು ಎನ್ನುವ ನಿರ್ಧಾರ ಕೂಡ ಕೇಳಿಬಂದಿತ್ತು, ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರನ್ನು ಬದಲಾವಣೆ ಮಾಡಬೇಕು ಎಂದು ಕೂಡ ಹೇಳಲಾಗಿತ್ತು, ಇದರ ಟೆನ್ಷನ್ ಕ್ಯಾಪ್ಟನ್ ರೋಹಿತ್ ಶರ್ಮ (Rohit Sharma) ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರ ಮೇಲಿತ್ತು, ಆದರೆ ಈಗ ಈ ಟೆನ್ಷನ್ ಇಂದ ಸ್ವಲ್ಪ ನಿಟ್ಟುಸಿರು ಬಿಡುವ ಹಾಗೆ ಆಗಿದೆ.

ಈ ವಿಷಯಗಳ ಬಗ್ಗೆ ಬಾಂಗ್ಲಾದೇಶ್ ಟೂರ್ನಿ (India vs Bangladesh) ಶುರುವಾಗುವ ಮೊದಲೇ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (Virat Kohli) ಮತ್ತು ರಾಹುಲ್ ದ್ರಾವಿಡ್ ಅವರೊಡನೆ ಬಿಸಿಸಿಐ ಸಭೆ ನಡೆಸಬೇಕಿತ್ತು. ಆದರೆ ಆ ಸಭೆಯನ್ನು ಈಗ ಮುಂದೂಡಲಾಗಿದೆ. ಬಾಂಗ್ಲಾದೇಶ್ ಟೂರ್ನಿಗಳು ಮುಗಿದ ಬಳಿಕ ಈ ಸಭೆ ನಡೆಸಲಾಗುತ್ತದೆ, ದಿನಾಂಕ ಇನ್ನು ನಿಗದಿಯಾಗಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಿಂದ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಅವರಿಗೆ ಕೊಂಚ ನೆಮ್ಮದಿ ಸಿಕ್ಕಿದೆ. ಆಯ್ಕೆಸಮಿತಿ ರಚಿಸಲು ಅರ್ಜಿ ಆಹ್ವಾನ ನೀಡಿದ್ದು, ಸಮಿತಿ ರಚನೆ ಆಗುವವರೆಗು ಸಭೆ ಮಾಡುವುದು ಬೇಡ ಎಂದು ತೀರ್ಮಾನ ಮಾಡಲಾಗಿದೆ. ಇದನ್ನು ಓದಿ.. Christiano Ronaldo: ಫುಟ್ ಬಾಲ್ ದಿಗ್ಗಜ ರೊನಾಲ್ಡೊ ರವರು ಬಳಸುವ ಸ್ಮಾರ್ಟ್ ಫೋನ್ ಯಾವುದು ಗೊತ್ತೇ?? ಅದರ ಬೆಲೆ ಎಷ್ಟು ಗೊತ್ತೇ?

ಜೊತೆಗೆ, ಮುಂಬರುವ ದಿನಗಳಲ್ಲಿ ಶೀಘ್ರದಲ್ಲೇ ಯಾವುದೇ ಟಿ20 ಟೂರ್ನಿ (T20 Match) ಇಲ್ಲದೆ ಇರುವ ಕಾರಣ, ಈಗಲೇ ಸಭೆ ಕೈಗೊಳ್ಳುವ ತುರ್ತು ಪರಿಸ್ಥಿತಿ ಇಲ್ಲ ಎನ್ನಲಾಗಿದೆ. ಹಾಗೆಯೇ ತಕ್ಷಣವೇ ಆಟಗಾರರನ್ನು ತೆಗೆದು ಹಾಕುವುದು ಬೇಡ ಎಂದು ಕೂಡ ಹೇಳಲಾಗುತ್ತಿದೆ. ಏಕೆಂದರೆ, ಈಗ ಆಟಗಾರರನ್ನು ಅಥವಾ ಕೋಚ್ ಅನ್ನು ತೆಗೆದು ಹಾಕಿದರೆ, ತಕ್ಷಣವೇ ಪರ್ಯಾಯ ಹುಡುಕುವುದು ಕಷ್ಟ ಎನ್ನುವ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ. ಒಟ್ಟಿನಲ್ಲಿ ಬಿಸಿಸಿಐ ತೆಗೆದುಕೊಂಡಿರುವ ಈ ನಿರ್ಧಾರದಿಂದ ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಅವರಿಗೆ ಸ್ವಲ್ಪ ನೆಮ್ಮದಿಯಾಗಿದ್ದು, ಬಿಸಿಸಿಐ ಸಭೆ ಆಯ್ಕೆ ಸಮಿತಿ ರಚನೆಯ ನಂತರ, ಡಿಸೆಂಬರ್ ನಲ್ಲಿ ನಡೆಯಲಿದೆ. ಇದನ್ನು ಓದಿ.. Cricket News: ರೋಹಿತ್ ಹಾಗೂ ರಾಹುಲ್ ಗೆ ಮತ್ತೊಂದು ಆತಂಕ ಶುರು. ಅವಕಾಶ ಕೊಟ್ಟರೂ ಬಳಸಿಕೊಳ್ಳದವರ ಪರಿಸ್ಥಿತಿ ಏನಾಗಿದೆ ಗೊತ್ತೇ?