Cricket News: ರೋಹಿತ್ ಹಾಗೂ ರಾಹುಲ್ ಗೆ ಮತ್ತೊಂದು ಆತಂಕ ಶುರು. ಅವಕಾಶ ಕೊಟ್ಟರೂ ಬಳಸಿಕೊಳ್ಳದವರ ಪರಿಸ್ಥಿತಿ ಏನಾಗಿದೆ ಗೊತ್ತೇ?
Cricket News: ರೋಹಿತ್ ಹಾಗೂ ರಾಹುಲ್ ಗೆ ಮತ್ತೊಂದು ಆತಂಕ ಶುರು. ಅವಕಾಶ ಕೊಟ್ಟರೂ ಬಳಸಿಕೊಳ್ಳದವರ ಪರಿಸ್ಥಿತಿ ಏನಾಗಿದೆ ಗೊತ್ತೇ?
Cricket News: ಪ್ರಸ್ತುತ ಭಾರತ ತಂಡದಲ್ಲಿ (Team India) ಬದಲಾವಣೆ ಗಾಳಿ ಶುರುವಾಗಿದೆ, ಟಿ20 ವಿಶ್ವಕಪ್ (T20 World Cup) ನಲ್ಲಿ ಸೋತ ನಂತರ, 2013ರಿಂದ ಯಾವುದೇ ICC ಟೂರ್ನಿ ಗೆದ್ದಿಲ್ಲ ಎನ್ನುವುದಕ್ಕೆ ಮತ್ತೊಂದು ಸೇರ್ಪಡೆ ಆಗಿದೆ. ಇದನ್ನು ಹೇಗಾದರೂ ಮುರಿದು, ಭಾರತದಲ್ಲೇ ನಡೆಯುವ ಮುಂಬರುವ ಏಕದಿನ ವಿಶ್ವಕಪ್ (ODI World Cup) ನಲ್ಲಿ ಭಾರತ ಐಸಿಸಿ ಟ್ರೋಫಿ (ICC Trophy) ಗೆಲ್ಲಲೇಬೇಕು ಎಂದು ಭಾರತ ತಂಡ ಪ್ಲಾನ್ ಮಾಡಿಕೊಂಡಿದ್ದು, ಅದಕ್ಕಾಗಿ ಹೊಸ ತಂಡ ರೂಪಿಸುವಲ್ಲಿ ನಿರತವಾಗಿದೆ. ಹೀಗಿದ್ದಾಗ ತಂಡದಲ್ಲಿ ಕಾಡುತ್ತಿರುವ ಪ್ರಶ್ನೆ ಓಪನರ್ ಗಳ ಸ್ಥಾನ, ಈಗಾಗಲೇ ಓಪನರ್ ಗಳಾಗಿ ಹಲವರಿಗೆ ಅವಕಾಶ ಕೊಟ್ಟರು ಕೂಡ, ಅವುಗಳನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗದ ಆಟಗಾರರ ಪರಿಸ್ಥಿತಿ ಇಂದು ಏನಾಗಿದೆ ಗೊತ್ತಾ? ತಿಳಿಸುತ್ತೇವೆ ನೋಡಿ..
ರೋಹಿತ್ ಶರ್ಮ (Rohit Sharma) :- ರೋಹಿತ್ ಶರ್ಮಾ ಅವರು ಭಾರತ ತಂಡದ ಕ್ಯಾಪ್ಟನ್ ಆಗಿರುವ ಕಾರಣ ಇವರಿಗೆ ಅವಕಾಶ ಸಿಗುವುದಂತು ಪಕ್ಕಾ ಆಗಿದೆ. ಓಪನರ್ ಆಗಿ ರೋಹಿತ್ ಶರ್ಮಾ ಅವರೇ ಕಣಕ್ಕೆ ಇಳಿಯುವುದು ಫಿಕ್ಸ್, ಆದರೆ ಕಳಪೆ ಪ್ರದರ್ಶನ ಹಾಗೂ ಸ್ಥಿರವಾಗಿ ಪ್ರದರ್ಶನ ನೀಡದೆ ಇರುವ ಕಾರಣದಿಂದ, ರೋಹಿತ್ ಶರ್ಮಾ ಅವರ ಆಟದ ಬಗ್ಗೆ ಆತಂಕ ಇರುವುದಂತೂ ನಿಜ. ರೋಹಿತ್ ಶರ್ಮಾ ಅವರ ವಿಚಾರದಲ್ಲಿ ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. IPL 2023: ಈ ಬಾರಿಯ ಮಿನಿ ಐಪಿಎಲ್ ಹರಾಜಿನಲ್ಲಿ ಕೋಟಿ ಕೋಟಿ ಗಳಿಸುವ ನಾಲ್ವರು ಯಾರು ಗೊತ್ತೇ? ಆರ್ಸಿಬಿ ಇವರಲ್ಲಿ ಯಾರಿಗೆ ಬಿಡ್ ಮಾಡಬೇಕು??
ಕೆ.ಎಲ್.ರಾಹುಲ್ (K L Rahul) :- ಇವರು ಭಾರತ ತಂಡದ ವೈಸ್ ಕ್ಯಾಪ್ಟನ್. ಆರಂಭಿಕ ಆಟಗಾರನಾಗಿ ಎಂಟ್ರಿ ಕೊಡುತ್ತಿರುವ ಕೆ.ಎಲ್.ರಾಹುಲ್ ಅವರು ಸತತ ಅವಕಾಶಗಳು ಸಿಕ್ಕರು ಸಹ, ಬಹುತೇಕ ಎಲ್ಲಾ ಪಂದ್ಯಗಳಲ್ಲು ಕಳಪೆ ಪ್ರದರ್ಶನ ನೀಡುವ ಮೂಲಕ, ಭರವಸೆಯನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಇವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳುವುದು ಸಹ ಕಷ್ಟಕರವಾಗಿದೆ.
ಶಿಖರ್ ಧವನ್ (Shikhar Dhawan):- ಹಿರಿಯ ಆಟಗಾರ ಶಿಖರ್ ಧವನ್ ಅವರು ಪ್ರಸ್ತುತ ಟಿ20 ಮತ್ತು ಟೆಸ್ಟ್ ಕ್ರಿಕೆಟ್ ಗಳಿಂದ ದೂರವೇ ಉಳಿದಿದ್ದಾರೆ. ಓಡಿಐ ಗಳಲ್ಲಿ ಮಾತ್ರ ಸಕ್ರಿಯರಾಗಿರುವ ಧವನ್ ಅವರು ಪ್ರಸ್ತುತ ಓಡಿಐ ತಂಡದ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸುತ್ತಿದ್ದರೆ. ಧವನ್ ಅವರಿಗೆ ಓಡಿಐ ವಿಶ್ವಕಪ್ ನಲ್ಲಿ ಆಡಲೇಬೇಕು ಎನ್ನುವ ಛಲ ಇದೆ, ಹಾಗಾಗಿ ಓಡಿಐ ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಇದನ್ನು ಓದಿ.. Kannada Astrology: ಇನ್ನು ಐದು ದಿನಗಳಲ್ಲಿ ನಿಮ್ಮ ಕಷ್ಟಗಳೆಲ್ಲ ಮುಗಿದು ಶುಕ್ರ ದೆಸೆ ಆರಂಭ. ಯಾವ್ಯಾವ ರಾಶಿಗಳಿಗೆ ಗೊತ್ತೇ??
ಶುಭಮನ್ ಗಿಲ್ (Shubhman Gill) :- ಪಂಜಾಬ್ ಆಟಗಾರ ಶುಭಮನ್ ಗಿಲ್ ಅವರು ಸಹ ತಂಡದಲ್ಲಿ ಸ್ಥಾನ ಪಡೆಯಲೇಬೇಕು ಎಂದು ಪೈಪೋಟಿಗೆ ಇಳಿದಿದ್ದಾರೆ. ಪ್ರತಿಭಾನ್ವಿತ ಆಟಗಾರ ಗಿಲ್, ಆಡಿದ 11 ಪಂದ್ಯಗಳಲ್ಲಿ 72.12 ಸರಾಸರಿಯಲ್ಲಿ ಬರೊಬ್ಬರಿ 625 ರನ್ಸ್ ಗಳಿಸಿದ್ದಾರೆ. ಇದ್ರಲ್ಲಿ 1 ಸೆಂಚುರಿ ಮತ್ತು 4 ಹಾಫ್ ಸೆಂಚುರಿ ಸೇರಿದೆ. ಇವರಿಗೆ ತಂಡದಲ್ಲಿ ಸ್ಥಾನ ಕೊಡದೆ ಇರಲು ಸಾಧ್ಯವಿಲ್ಲ.
ಋತುರಾಜ್ ಗಾಯಕ್ವಾಡ್ (Ruturaj Gaikwad) :- ಮೂಲತಃ ಮಹಾರಾಷ್ಟ್ರದ ಆಟಗಾರ ಆಗಿರುವ ಇವರು ದೇಶೀಯ ಕ್ರಿಕೆಟ್ ನಲ್ಲಿ ಅತ್ಯುತ್ತಮವಾದ ಫಾರ್ಮ್ ನಲ್ಲಿದ್ದಾರೆ. ಈ ವರ್ಷದ ಆರಂಭದಿಂದಲೂ ಒಳ್ಳೆಯ ಫಾರ್ಮ್ ನಲ್ಲಿರುವ ಇವರು, ಮತ್ತೆ ನ್ಯಾಷನಲ್ ಟೀಮ್ ಗೆ ಬರಲು ಸಜ್ಜಾಗಿದ್ದಾರೆ.
ಹೀಗೆ ಆರಂಭಿಕ ಬ್ಯಾಟ್ಸ್ಮನ್ ನ ಎರಡನೇ ಸ್ಥಾನಕ್ಕೆ ಭಾರಿ ಪೈಪೋಟಿ ಇದ್ದು, ಸೀನಿಯರ್ ಗಳು ಮತ್ತು ಜ್ಯೂನಿಯರ್ ಗಳ ನಡುವೆ ಯಾರನ್ನು ಸೆಲೆಕ್ಟ್ ಮಾಡಬೇಕು ಎನ್ನುವ ಪ್ರಶ್ನೆ ಈಗ ಬಿಸಿಸಿಐ ಎದುರು ಇದೆ. ಆಯ್ಕೆಗಾರರು ಯಾವ ಆಟಗಾರರಿಗೆ ಸ್ಥಾನ ಕೊಡುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Christiano Ronaldo: ಫುಟ್ ಬಾಲ್ ದಿಗ್ಗಜ ರೊನಾಲ್ಡೊ ರವರು ಬಳಸುವ ಸ್ಮಾರ್ಟ್ ಫೋನ್ ಯಾವುದು ಗೊತ್ತೇ?? ಅದರ ಬೆಲೆ ಎಷ್ಟು ಗೊತ್ತೇ?