IPL 2023: ಈ ಬಾರಿಯ ಮಿನಿ ಐಪಿಎಲ್ ಹರಾಜಿನಲ್ಲಿ ಕೋಟಿ ಕೋಟಿ ಗಳಿಸುವ ನಾಲ್ವರು ಯಾರು ಗೊತ್ತೇ? ಆರ್ಸಿಬಿ ಇವರಲ್ಲಿ ಯಾರಿಗೆ ಬಿಡ್ ಮಾಡಬೇಕು??

IPL 2023: ಈ ಬಾರಿಯ ಮಿನಿ ಐಪಿಎಲ್ ಹರಾಜಿನಲ್ಲಿ ಕೋಟಿ ಕೋಟಿ ಗಳಿಸುವ ನಾಲ್ವರು ಯಾರು ಗೊತ್ತೇ? ಆರ್ಸಿಬಿ ಇವರಲ್ಲಿ ಯಾರಿಗೆ ಬಿಡ್ ಮಾಡಬೇಕು??

IPL 2023: ಮುಂದಿನ ವರ್ಷ ಐಪಿಎಲ್ ಸೀಸನ್ ಶುರುವಾಗುವ ಮೊದಲೇ ಎಲ್ಲೆಡೆ ಐಪಿಎಲ್ ಫೀವರ್ ಈಗಾಗಲೇ ಶುರುವಾಗಿದೆ. ಮುಂದಿನ ತಿಂಗಳು ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ ಮಿನಿ ಬಿಡ್ಡಿಂಗ್ ಆಕ್ಷನ್ ನಡೆಯಲಿದ್ದು, ಈ ಬಾರಿ ಕೋಟಿ ಕೋಟಿ ಗಳಿಸಬಹುದಾದ ನಾಲ್ಕು ಆಟಗಾರರು ಯಾರ್ಯಾರು? ಇವರಲ್ಲಿ ನ ಆರ್ಸಿಬಿ ತಂಡ ಯಾವ ಆಟಗಾರನಿಗೆ ಬಿಡ್ ಮಾಡಬೇಕು? ಎಲ್ಲವನ್ನು ತಿಳಿಸುತ್ತೇವೆ ನೋಡಿ..

ನಿಕೋಲಸ್ ಪೂರನ್ (Nicholas Pooran) :- ವೆಸ್ಟ್ ಇಂಡೀಸ್ ತಂಡದ ಲೆಫ್ಟ್ ಹ್ಯಾಂಡ್ ಬ್ಯಾಟ್ಸ್ಮನ್ ಮತ್ತು ಒಳ್ಳೆಯ ವಿಕೆಟ್ ಕೀಪರ್ ಆಗಿರುವ ಇವರು, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕ್ವಾಲಿಫೈ ಆಗದ ಕಾರಣದಿಂದ ಕ್ಯಾಪ್ಟನ್ಸಿ ಇಂದ ಹೊರಬಂದಿದ್ದಾರೆ. ಈ ರೀತಿ ಆಗಿರುವುದು ಇವರ ಐಪಿಎಲ್ ಆಕ್ಷನ್ ಗೆ ಏನು ಕಡಿಮೆಯಾಗಿಲ್ಲ. ಇವರು ಉತ್ತಮವಾಗಿ ರನ್ಸ್ ಗಳಿಸುವ ಬ್ಯಾಟ್ಸ್ಮನ್ ಜೊತೆಗೆ ಒಳ್ಳೆಯ ಬೌಲರ್ ಕೂಡ ಹೌದು, ಹಾಗಾಗಿ ಪೂರನ್ ಅವರನ್ನು ಹೆಚ್ಚು ಹಣ ಕೊಟ್ಟು ಖರೀದಿ ಮಾಡುವುದು ಖಚಿತ ಎನ್ನಲಾಗುತ್ತಿದೆ. ಇದನ್ನು ಓದಿ..Cricket News: ಅದೊಂದು ವಿಚಾರದಲ್ಲಿ ಭಾರತ ಬಾರಿ ತಪ್ಪು ಮಾಡುತ್ತಿದೆ ಎಂದ ಪಾಕ್ ಸಲ್ಮಾನ್ ಖಾನ್. ಏನು ಅಂತೇ ಗೊತ್ತೇ??

ಎನ್.ಜಗದೇಶನ್ (N Jagadeesan) :- ತಮಿಳು ನಾಡಿನ 26 ವರ್ಷ ಈ ಬ್ಯಾಟ್ಸ್ಮನ್ ದೇಶೀಯ ಪಂದ್ಯಗಳಲ್ಲಿ ಉತ್ತಮವಾಗಿ ರನ್ಸ್ ಸ್ಕೋರ್ ಮಾಡಿದ್ದಾರೆ. ಟಿ20 ಪಂದ್ಯಗಳಲ್ಲಿ ಇದುವರೆಗೂ ಆಡಿರುವ 51 ಪಂದ್ಯಗಳಲ್ಲಿ 1064 ರನ್ಸ್ ಗಳಿಸಿದ್ದಾರೆ, ಇವರ ಆವರೇಜ್ 32.24 ಇದ್ದು, ಸ್ಟ್ರೈಕ್ ರೇಟ್ 118 ಇದೆ. ಇವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಅತಿಹೆಚ್ಚು ರನ್ಸ್ ಗಳಿಸಿದ್ದಾರೆ, 138ರ ಆವರೇಜ್ ನಲ್ಲಿ ಕೇವಲ 8 ಪಂದ್ಯಗಳಲ್ಲಿ 830 ರನ್ಸ್ ಸಿಡಿಸಿದ್ದರು. ಇದರಲ್ಲಿ, 5 ಸೆಂಚುರಿ ಸೇರಿದೆ..ಇವರು ಕೂಡ ಐಪಿಎಲ್ ಗೆ ಬಹಳ ಬೇಕಾದ ಆಟಗಾರ ಆಗುತ್ತಾರೆ.

ಮಾಯಾಂಕ್ ಅಗರ್ವಾಲ್ (Mayank Agarwal):- ಇವರು ಕೂಡ ಪ್ರತಿಭೆ ಇರುವ ಆಟಗಾರ. ಪಂಜಾಬ್ ತಂಡ ಇವರನ್ನು ಐಪಿಎಲ್ ನಲ್ಲಿ ಕೈಬಿಟ್ಟಿದೆ, ಏಕೆಂದರೆ ಐಪಿಎಲ್ ಮುಂದಿನ ಸೀಸನ್ ಇಂದ ಹೊರಗಿಟ್ಟಿದ್ದಾರೆ. ಏಕೆಂದರೆ, ಕಳೆದ ಸೀಸನ್ ನಲ್ಲಿ ಮಾಯಾಂಕ್ ಅಗರ್ವಾಲ್ ಅವರು 13 ಮ್ಯಾಚ್ ಗಳಲ್ಲಿ 196 ರನ್ಸ್ ಗಳಿಸಿದ್ದು, ಇವರ ಸ್ಟ್ರೈಕ್ ರೇಟ್ 122.50 ಇದೆ. ಒಬ್ಬ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಲು ಕಷ್ಟಪಟ್ಟು ಅದರಿಂದ ತಕ್ಕ ಪ್ರತಿಫಲ ಸಿಗದೆ ಹೋಯಿತು. ಹಾಗಿದ್ದರೂ ಕೂಡ,, ಮಾಯಾಂಕ್ ಅಗರ್ವಾಲ್ ಅವರಿಗೆ ಐಪಿಎಲ್ ನಲ್ಲಿ ಬೇಡಿಕೆ ಕಡಿಮೆ ಇಲ್ಲ. ಇದನ್ನು ಓದಿ.. Cricket News: ಪಾಂಡ್ಯ, ಪಂತ್, ರಾಹುಲ್, ಸೂರ್ಯ ಇವರ್ಯಾರು ಅಲ್ಲ, ಹೊಸ ಆಕ್ರಮಣಕಾರಿ ನಾಯಕನನ್ನು ಹೆಸರಿಸಿದ ಗಂಭೀರ್. ಯಾರು ಅಂತೇ ಗೊತ್ತೇ?

ಜೇಸನ್ ಹೋಲ್ಡರ್ (Jason Holder) :- ಕಳೆದ ಸೀಸನ್ ನಲ್ಲಿ ಇವರನ್ನು ಲಕ್ನೌ ಸೂಪರ್ ಜೈಂಟ್ಸ್ (Lucknow Super Giants) ತಂಡ 8.75 ಕೋಟಿ ಕೊಟ್ಟು ಖರೀದಿ ಮಾಡಲಾಗಿತ್ತು, ಉತ್ತಮ ಪ್ರದರ್ಶನ ನೀಡಿದ ಇವರು, 12 ಪಂದ್ಯಗಳಲ್ಲಿ 14 ವಿಕೆಟ್ಸ್ ಪಡೆದರು..ಆದರೆ ಬ್ಯಾಟಿಂಗ್ ನಲ್ಲಿ ಇವರು ಕಳಪೆ ಪ್ರದರ್ಶನ ನೀಡಿದರು. 12 ಮ್ಯಾಚ್ ಗಳಲ್ಲಿ ಕೇವಲ 58 ರನ್ಸ್ ಗಳಿಸಿದರು.