ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ಪಾಂಡ್ಯ, ಪಂತ್, ರಾಹುಲ್, ಸೂರ್ಯ ಇವರ್ಯಾರು ಅಲ್ಲ, ಹೊಸ ಆಕ್ರಮಣಕಾರಿ ನಾಯಕನನ್ನು ಹೆಸರಿಸಿದ ಗಂಭೀರ್. ಯಾರು ಅಂತೇ ಗೊತ್ತೇ?

1,311

Get real time updates directly on you device, subscribe now.

Cricket News: ಟೀಮ್ ಇಂಡಿಯಾ (Team India) ಟಿ20 ವಿಶ್ವಕಪ್ (T20 World Cup) ನಲ್ಲಿ ಸೋತ ನಂತರ ಬದಲಾವಣೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಹೆಚ್ಚಿನವರು ನಾಯಕತ್ವ ಬದಲಾವಣೆ ಆಗಬೇಕು ಎಂದು ಸೂಚಿಸುತ್ತಿದ್ದಾರೆ. ರೋಹಿತ್ ಶರ್ಮಾ (Rohit Sharma) ಅವರ ಬದಲಾಗಿ ಗಂಡವನ್ನು ಮುನ್ನಡೆಸುವವರು ಯಾರು ಎನ್ನುವುದಕ್ಕೆ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಕೆ.ಎಲ್.ರಾಹುಲ್ (K L Rahul) ಅವರ ಹೆಸರು ಕೇಳಿಬರುತ್ತಿದೆ, ಕೆ.ಎಲ್.ರಾಹುಲ್ ಈಗ ತಂಡದ ವೈಸ್ ಕ್ಯಾಪ್ಟನ್ ಆಗಿದ್ದರು ಸಹ, ಟಿ20 ಮಾದರಿಯ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ ಅವರು ಕ್ಯಾಪ್ಟನ್ ಆಗುವುದು ಸೂಕ್ತ ಎಂದು ಹೇಳಲಾಗುತ್ತಿದೆ.

ಇದೆಲ್ಲಾ ಚರ್ಚೆಗಳು ಒಂದು ಕಡೆ ನಡೆಯುತ್ತಿರುವಾಗ, ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ (Gautam Gambhir) ಅವರು ಹೊಸ ನಾಯಕನನ್ನು ಹೆಸರಿಸಿದ್ದಾರೆ. ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್ (Rishab Pant), ಕೆ.ಎಲ್.ರಾಹುಲ್, ಸೂರ್ಯಕುಮಾರ್ ಯಾದವ್ (Suryakumar Yadav) ಇವರ್ಯಾರು ಅಲ್ಲ. ಗೌತಮ್ ಗಂಭೀರ್ ಹೇಳಿರುವುದು, ಪೃಥ್ವಿ ಶಾ ಅವರು ಭಾರತ ತಂಡಕ್ಕೆ ಉತ್ತಮ ಕ್ಯಾಪ್ಟನ್ ಆಗುತ್ತಾರೆ ಎಂದು. ಪೃಥ್ವಿ ಶಾ (Prithvi Shaw) ಮುಂಬೈ ನ ಆಟಗಾರ, ದ್ವಿತೀಯ ದರ್ಜೆಯ ಕ್ರಿಕೆಟ್ ನಲ್ಲಿ, ಹಾಗೂ ಟೀಮ್ ಇಂಡಿಯಾದಲ್ಲಿ ಟಿ20 ಪಂದ್ಯಗಳಲ್ಲಿ ಸ್ಥಾನ ಪಡೆಯಲು ಇವರು ವಿಫಲರಾಗುತ್ತಿದ್ದಾರೆ. ಆದರೆ, ಗೌತಮ್ ಗಂಭೀರ್ ಇವರನ್ನು ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಇದನ್ನು ಓದಿ.. Kannada Astrology: ಇನ್ನು ನಾಲ್ಕು ದಿನಗಳಲ್ಲಿ ಸೃಷ್ಟಿಯಾಗುತ್ತಿದೆ ಭದ್ರ ರಾಜಯೋಗ: ಇದರಿಂದ ಈ ಮೂರು ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಯಾರಿಗೆ ಗೊತ್ತೇ?

ಗ್ರೌಂಡ್ ನಲ್ಲಿ ಪೃಥ್ವಿ ಅವರು ಬ್ಯಾಟಿಂಗ್ ಮಾಡುವ ಶೈಲಿ ಮತ್ತು ದೇಶೀಯ ಕ್ರಿಕೆಟ್ ನಲ್ಲಿ ಕ್ಯಾಪ್ಟನ್ ಆಗಿ ಕಾರ್ಯ ನಿರ್ವಹಿಸಿರುವ ರೀತಿಯನ್ನು ಗಮನದಲ್ಲಿ ಇಟ್ಟುಕೊಂಡು ಇವರ ಹೆಸರು ಹೇಳಿದ್ದಾರೆ ಗೌತಮ್. ಪೃಥ್ವಿ ಶಾ ಅವರು 2018ರಲ್ಲಿ ಅಂಡರ್ 19 ವಿಶ್ವಕಪ್ ನಲ್ಲಿ (Under 19 World Cup) ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿ ಗೆಲುವು ತಂದುಕೊಟ್ಟರು, 2021ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಮುಂಬೈ ಟೀಮ್ ಕ್ಯಾಪ್ಟನ್ ಆಗಿ ಟ್ರೋಫಿ ಗೆದ್ದರು. ಇನ್ನು ನ್ಯಾಷನಲ್ ಟೀಮ್ ನಲ್ಲಿ, 5 ಟೆಸ್ಟ್, 6 ಓಡಿಐ ಹಾಗು 1 ಟಿ20 ಪಂದ್ಯವನ್ನಾಡಿದ್ದಾರೆ. ಇದೆಲ್ಲಾ ಇದ್ದರು ಇವರು ಫಿಟ್ನೆಸ್ ವಿಚಾರಕ್ಕೆ ಆಗಾಗ ಚರ್ಚೆ ಆಗುತ್ತಾರೆ. ವಿಶ್ವಕಪ್ ಗೆ ಆಯ್ಕೆಯಾಗದೆ ಇದ್ದಾಗಲು ಟೀಕೆಗೆ ಗುರಿಯಾಗಿದ್ದರು. ಇದನ್ನು ಓದಿ.. Cricket News: ಅದೊಂದು ವಿಚಾರದಲ್ಲಿ ಭಾರತ ಬಾರಿ ತಪ್ಪು ಮಾಡುತ್ತಿದೆ ಎಂದ ಪಾಕ್ ಸಲ್ಮಾನ್ ಖಾನ್. ಏನು ಅಂತೇ ಗೊತ್ತೇ??

Get real time updates directly on you device, subscribe now.