IPL 2023: ಒಂದು ಕಾಲದಲ್ಲಿ ಕೋಟಿ ಕೋಟಿ ರೂ ಗಳಿಸಿದ್ದ ಟಾಪ್ ಆಟಗಾರರು ಈ ಬಾರಿ ಹರಾಜಿನಲ್ಲಿ ಮಾರಾಟವಾಗೋದೇ ಡೌಟ್. ಟಾಪ್ 5 ಯಾರು ಗೊತ್ತೇ??

IPL 2023: ಒಂದು ಕಾಲದಲ್ಲಿ ಕೋಟಿ ಕೋಟಿ ರೂ ಗಳಿಸಿದ್ದ ಟಾಪ್ ಆಟಗಾರರು ಈ ಬಾರಿ ಹರಾಜಿನಲ್ಲಿ ಮಾರಾಟವಾಗೋದೇ ಡೌಟ್. ಟಾಪ್ 5 ಯಾರು ಗೊತ್ತೇ??

IPL 2023: 2023ರ ಐಪಿಎಲ್ ಗೆ ಈಗಾಗಲೇ ಭಾರಿ ತಯಾರಿ ಶುರುವಾಗಿದೆ. ಮುಂದಿನ ತಿಂಗಳು ಐಪಿಎಲ್ ಆಕ್ಷನ್ ನಡೆಯಲಿದ್ದು, ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಮತ್ತು ಕೈಬಿಟ್ಟಿರುವ ತಂಡಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಡ್ವೇನ್ ಬ್ರಾವೋ (Dwayne Bravo), ಕೇನ್ ವಿಲಯಮ್ಸನ್ (Kane Williamson) ಅವರಂತಹ ಆಟಗಾರರನ್ನು ತಂಡದಿಂದ ಹೊರಗೆ ಹಾಕಿರುವುದು ಹಲವರಿಗೆ ಶಾಕ್ ನೀಡಿದೆ. ಈ ಬಾರಿ ಐಪಿಎಲ್ ನಲ್ಲಿ ಭಾರಿ ಕಾಂಪಿಟೇಶನ್ ಇರುವುದಂತು ಖಂಡಿತ. ಆದರೆ ಕೆಲವು ಆಟಗಾರರು ಮಾರಾಟವೇ ಆಗದೆ ಇರಬಹುದು ಎಂದು ಸಹ ಹೇಳಲಾಗುತ್ತಿದೆ. ಆ ಆಟಗಾರರು ಯಾರು ಎಂದು ತಿಳಿಸುತ್ತೇವೆ ನೋಡಿ..

ವರುಣ್ ಆರೋನ್ (Varun Aaron):- ಸುಮಾರು 10 ವರ್ಷಗಳಿಂದ ಇವರು ಕ್ರಿಕೆಟ್ ನಲ್ಲಿ ಸಕ್ರಿಯರಾಗಿದ್ದಾರೆ. 10ನೇ ಸೀಸನ್ ನಲ್ಲಿ ಇವರು ಆರ್ಸಿಬಿ ಪರವಾಗಿ ಆಡಿದ್ದರು, ಆಡಿದ 10 ಪಂದ್ಯಗಳಲ್ಲಿ 16 ವಿಕೆಟ್ಸ್ ಕಬಳಿಸಿದ್ದರು. ಆದರೆ ಅದಾದ ಬಳಿಕ ಇವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. 10.40 ಎಕಾನಮಿಯಲ್ಲಿ ರನ್ಸ್ ಗಳನ್ನು ಬಿಟ್ಟುಕೊಡುತ್ತಿದ್ದರು, ಈ ಕಾರಣದಿಂದ ಇವರಿಗೆ ತಂಡದಿಂದ ಇವರನ್ನು ಹೊರಗಿಡಲಾಯಿತು. ಐಪಿಎಲ್ ಆಕ್ಷನ್ ನಲ್ಲಿ ಇವರು ಆಯ್ಕೆಯಾಗದೆ ಹೋದರೆ, ನಂಬಲು ಕಷ್ಟ ಎನ್ನಿಸುವ ಹಾಗೇನು ಇಲ್ಲ. ಇದನ್ನು ಓದಿ.. Cricket News: ಟಿ 20 ಲೋಕವನ್ನು ದಿಗ್ಭ್ರಮೆ ಗೊಳಿಸುವಂತೆ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ಸೂರ್ಯ ರವರಿಗೆ ಮತ್ತೊಂದು ಗುಡ್ ನ್ಯೂಸ್: ಏನಾಗಿದೆ ಗೊತ್ತೇ?

ಟಿಮ್ ಸೆಫರ್ಟ್ (Tim Seifert) :- ಆಸ್ಟ್ರೇಲಿಯಾ ಆಟಗಾರರಾಗಿರುವ ಇವರಿಗೆ ಈಗ 27 ವರ್ಷ. ಡೇವಿಡ್ ವಾರ್ನರ್ ಅವರು ಇಲ್ಲದೆ ಇದ್ದಾಗ ಇವರಿಗೆ ಅವಕಾಶ ನೀಡಲಾಗಿತ್ತು. ಆದರೆ ಟಿಮ್ ಸೆಫರ್ಟ್ ಅವರು ನೀರಸ ಪ್ರದರ್ಶನ ನೀಡಿದ್ದಾರೆ, ಅಡಿರುವ 159 ಪಂದ್ಯಗಳಲ್ಲಿ, 125.26ರ ಸ್ಟ್ರೈಕ್ ರೇಟ್ ನಲ್ಲಿ, 3143 ರನ್ಸ್ ಗಳಿಸಿದ್ದಾರೆ. ಎರಡು ಮ್ಯಾಚ್ ಗಳಲ್ಲಿ ಇವರು 24 ಕ್ಕಿಂತ ಹೆಚ್ಚು ರನ್ಸ್ ಗಳಿಸಲಿಲ್ಲ. ಹಾಗಾಗಿ ಟಿಮ್ ಅವರು ನೀರಸ ಪ್ರದರ್ಶನದಿಂದ 2023ರ ಐಪಿಎಲ್ ಗೆ ಇವರು ಆಯ್ಕೆಯಾಗದೆ ಇರಬಹುದು ಎನ್ನುವ ಅಭಿಪ್ರಾಯ ಇದೆ.

ಅಜಿಂಕ್ಯ ರಹಾನೆ (Ajinkya Rahane) :- ಇವರು ಐಪಿಎಲ್ ಶುರು ಆದಾಗಿನಿಂದ ಉತ್ತಮ ಪ್ರದರ್ಶನ ನೀಡುತ್ತಿದ್ದ ಆಟಗಾರ ಎನ್ನಿಸಿಕೊಂಡಿದ್ದಾರೆ. ಅಜಿಂಕ್ಯ ರಹಾನೆ ಅವರಿಗೆ ಈಗ 34 ವರ್ಷಗಳು, ಉತ್ತಮ ಪ್ರದರ್ಶನ ನೀಡುತ್ತಿದ್ದ ಇವರು, 159 ಪಂದ್ಯಗಳಲ್ಲಿ 120.68 ಸ್ಟ್ರೈಕ್ ರೇಟ್ ನಲ್ಲಿ, 4074 ರನ್ಸ್ ಗಳಿಸಿದ್ದಾರೆ. ಕೆಕೆಆರ್ ತಂಡಕ್ಕೆ ಆಯ್ಕೆಯಾಗಿದ್ದ ಇವರು ಉತ್ತಮ ಪ್ರದರ್ಶನ ನೀಡಿಲ್ಲ, 103.91 ಸ್ಟ್ರೈಕ್ ರೇಟ್ ನಲ್ಲಿ, 133 ರನ್ಸ್ ಗಳಿಸಿದ್ದಾರೆ ಅಜಿಂಕ್ಯ ರಹಾನೆ. ಹಾಗಾಗಿ ಮುಂದಿನ ಐಪಿಎಲ್ ನಲ್ಲಿ ಇವರನ್ನು ಖರೀದಿ ಮಾಡುವುದು ಕಷ್ಟವಾಗಿದೆ. ಇದನ್ನು ಓದಿ.. Cricket News: ತಂಡದಲ್ಲಿ ಮುಂದುವರೆದ ಗೊಂದಲಗಳು: ಈ ಬಾರಿ ಈ ಆಟಗಾರನ ಪಾಲಿಗೆ ವಿಲ್ಲನ್ ಆದ ನಾಯಕ ಹಾರ್ಧಿಕ್ ಪಾಂಡ್ಯ.

ಕ್ರಿಸ್ ಜೋರ್ಡನ್ (Chris Jordan) :- ಇವರು ಉತ್ತಮ ಬೌಲಿಂಗ್ ಇಂದಲೇ ಹೆಚ್ಚು ಗುರುತಿಸಿಕೊಂಡಿದ್ದಾರೆ. 84 ಟಿ20 ಇಂಟರ್ನ್ಯಾಷನಲ್ ಪಂದ್ಯಗಳಲ್ಲಿ, 95 ವಿಕೆಟ್ಸ್ ಪಡೆದು 8.72 ಎಕಾನಮಿಯಲ್ಲಿ ಗುರುತಿಸಿಕೊಂಡಿದ್ದಾರೆ. 136.56ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡಿ, 472 ರನ್ಸ್ ಸ್ಕೋರ್ ಮಾಡಿದ್ದಾರೆ. ಸಿ.ಎಸ್.ಕೆ ತಂಡ ಇವರನ್ನು ಆಯ್ಕೆ ಮಾಡಿತ್ತು, ಆದರೆ ಕ್ರಿಸ್ ಜೋರ್ಡನ್ ಅವರು ಉತ್ತಮ ಪ್ರದರ್ಶನ ನೀಡಲಿಲ್ಲ, ಕೇವಲ 2 ವಿಕೆಟ್ಸ್ ಮಾತ್ರ ಪಡೆದಿದ್ದರು. ಹಾಗಾಗಿ ಕಳಪೆ ಪ್ರದರ್ಶನ ನೀಡಿರುವ ಕಾರಣ ಮುಂದಿನ ಸೀಸನ್ ನಲ್ಲಿ ಇವರು ಖರೀದಿ ಆಗುವುದು ಕಷ್ಟವಿದೆ.

ಮೊಹಮ್ಮದ್ ನಬಿ (Mohammad Nabi) :- 37 ವರ್ಷದ ಈ ಆಟಗಾರ ಉತ್ತಮ ಪ್ರದರ್ಶನದಿಂದಲೇ ಹೆಸರುವಾಸಿ ಆಗಿರುವವರು. ಪ್ರಪಂಚಾದ್ಯಂತ ಟಿ20 ಲೀಗ್ ನಲ್ಲಿ, 355 ಪಂದ್ಯಗಳಲ್ಲಿ, 137.64 ಸ್ಟ್ರೈಕ್ ರೇಟ್ ನಲ್ಲಿ, 5203 ರನ್ಸ್ ಸಿಡಿಸಿದ್ದಾರೆ. ಆಲ್ ರೌಂಡರ್ ಆಗಿರುವ ಇವರು ಬೌಲಿಂಗ್ ನಲ್ಲಿ ಸಹ, 6.99 ಎಕಾನಮಿಯಲ್ಲಿ 322 ವಿಕೆಟ್ಸ್ ಉರುಳಿಸಿದ್ದಾರೆ. ಇಂತಹ ಉತ್ತಮ ಪ್ರದರ್ಶನ ನೀಡಿದ ಇವರು ಕೆಕೆಆರ್ ತಂಡಕ್ಕೆ ಆಯ್ಕೆಯಾಗಿದ್ದರು, ಆದರೆ ಕೆಕೆಆರ್ ತಂಡದ ರೂಲ್ಸ್ ಗೆ ಅಡ್ಜಸ್ಟ್ ಆಗಲು ಸಾಧ್ಯವಾಗದೆ, ವೈಫಲ್ಯ ಅನುಭವಿಸಿದರು, ಹಾಗಾಗಿ ಇವರನ್ನು ತಂಡದಿಂದ ಕೈಬಿಡಲಾಗಿದ್ದು, ಮಂದಿನ ಆಕ್ಷನ್ ನಲ್ಲಿ ಇವರನ್ನು ಖರೀದಿ ಮಾಡುವುದು ಕಷ್ಟವಿದೆ. ಇದನ್ನು ಓದಿ.. Cricket News: 2023 ಕ್ಕೆ ಆರಂಭಿಕನನ್ನು ಆಯ್ಕೆ ಮಾಡಿದ ದಿನೇಶ್ ಕಾರ್ತಿಕ್: ರಾಹುಲ್, ಸ್ಯಾಮ್ಸನ್, ಗಿಲ್, ಪಂತ್ ಇವರ್ಯಾರು ಅಲ್ಲ. ಮತ್ತಾರು ಅಂತೇ ಗೊತ್ತೇ?