Cricket News: 2023 ಕ್ಕೆ ಆರಂಭಿಕನನ್ನು ಆಯ್ಕೆ ಮಾಡಿದ ದಿನೇಶ್ ಕಾರ್ತಿಕ್: ರಾಹುಲ್, ಸ್ಯಾಮ್ಸನ್, ಗಿಲ್, ಪಂತ್ ಇವರ್ಯಾರು ಅಲ್ಲ. ಮತ್ತಾರು ಅಂತೇ ಗೊತ್ತೇ?

Cricket News: 2023 ಕ್ಕೆ ಆರಂಭಿಕನನ್ನು ಆಯ್ಕೆ ಮಾಡಿದ ದಿನೇಶ್ ಕಾರ್ತಿಕ್: ರಾಹುಲ್, ಸ್ಯಾಮ್ಸನ್, ಗಿಲ್, ಪಂತ್ ಇವರ್ಯಾರು ಅಲ್ಲ. ಮತ್ತಾರು ಅಂತೇ ಗೊತ್ತೇ?

Cricket News: ಭಾರತ ತಂಡ (Team India) ಈಗ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. 3 ಟಿ20 ಪಂದ್ಯಗಳಲ್ಲಿ ಮೊದಲ ಪಂದ್ಯ ಮಳೆಯಿಂದ ರದ್ದಾಯಿತು. ಎರಡನೇ ಪಂದ್ಯದಲ್ಲಿ ಭಾರತ ತಂಡ 65 ರನ್ ಗಳ ಭರ್ಜರಿ ಜಯ ಸಾಧಿಸಿತು. 3ನೇ ಪಂದ್ಯ ಮಳೆಯಿಂದಾಗಿ ಟೈ ಆಯಿತು. ಹಾಗಾಗಿ ಭಾರತ ತಂಡ ಒಂದು ಪಂದ್ಯ ಗೆದ್ದಿದ್ದ ಕಾರಣ ವಿನ್ನರ್ ಎಂದು ಘೋಷಿಸಲಾಯಿತು. ಇನ್ನು ಓಡಿಐ ಪಂದ್ಯಗಳ ಸರಣಿ ನಾಳೆಯಿಂದ ಶುರುವಾಗಲಿದೆ. ಈ ಪಂದ್ಯಗಳು ಶಿಖರ್ ಧವನ್ (Shikhar Dhavan) ಅವರ ನಾಯಕತ್ವದಲ್ಲಿ ನಡೆಯಲಿದೆ. ರಿಷಬ್ ಪಂತ್ (Rishabh Pant) ಅವರು ಉಪನಾಯಕ ಆಗಿದ್ದಾರೆ.

ಈ ಸರಣಿ ಓಡಿಐ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ಪ್ಲೇಯಿಂಗ್ 11 ನಲ್ಲಿ ಸ್ಥಾನ ಕೊಡಬಹುದು ಎನ್ನಲಾಗುತ್ತಿದೆ. ರಿಷಬ್ ಪಂತ್ ಅವರು ಒಳ್ಳೆಯ ಫಾರ್ಮ್ ನಲ್ಲಿಲ್ಲ, ಹಾಗಿದ್ದರೂ ಅವರಿಗೆ ವೈಸ್ ಕ್ಯಾಪ್ಟನ್ ಪಟ್ಟ ನೀಡಲಾಗಿದೆ. ಇನ್ನು ನಮ್ಮ ತಂಡದಲ್ಲಿ ಓಪನರ್ ಬ್ಯಾಟ್ಸ್ಮನ್ ಆಗಿ ಬರುವವರು ಯಾರು ಎನ್ನುವ ಬಗ್ಗೆ ಚರ್ಚೆ ಆಗುತ್ತಿರುತ್ತದೆ. ಈಗ ರಿಷಬ್ ಪಂತ್ ಅವರನ್ನು ಓಪನರ್ ಆಗಿ ಕಳಿಸಲಾಗುತ್ತಿದೆ. ಹೀಗಿರುವಾಗ, ಭಾರತದ ತಂಡದ ಸ್ಟಾರ್ ಫಿನಿಷರ್ ದಿನೇಶ್ ಕಾರ್ತಿಕ್ (Dinesh Karthik) ಅವರು, 2023ರ ಓಡಿಐ ವಿಶ್ವಕಪ್ ಗೆ ಈ ಆಟಗಾರ ಓಪನರ್ ಆಗಲು ಸೂಕ್ತ ಎಂದು ಒಂದು ಹೆಸರನ್ನು ತಿಳಿಸಿದ್ದಾರೆ. ಅವರು ಯಾರು ಗೊತ್ತಾ? ತಿಳಿಸುತ್ತೇವೆ ನೋಡಿ.. ಇದನ್ನು ಓದಿ.. Cricket News: ಟಿ 20 ಲೋಕವನ್ನು ದಿಗ್ಭ್ರಮೆ ಗೊಳಿಸುವಂತೆ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ಸೂರ್ಯ ರವರಿಗೆ ಮತ್ತೊಂದು ಗುಡ್ ನ್ಯೂಸ್: ಏನಾಗಿದೆ ಗೊತ್ತೇ?

“ಅವರು ವಿಶ್ವಕಪ್ ನಲ್ಲಿ ಖಂಡಿತವಾಗಿ ಆಡುತ್ತಾರೆ ಎಂದು ನನಗೆ ಅನ್ನಿಸುತ್ತಿದೆ. ಇಲ್ಲವಾದಲ್ಲಿ ಅವರಿಗೆ ಏಕೆ ಓಡಿಐ ಮ್ಯಾಚ್ ನಲ್ಲಿ ಸ್ಥಾನ ನೀಡುತ್ತಿದ್ದರು, ಅವರಿಗೆ ಓಡಿಐ ನಲ್ಲಿ ಆಡುವ ಸ್ಥಾನ ನೀಡಿದ್ದು ಯಾಕೆ ಎಂದು ಅರವಿದೆ. ಐಸಿಸಿ (ICC) ಟೂರ್ನಿಗಳ ಗನ್ ಪ್ಲೇಯರ್ ಅವರು. ಕೆಲವು ಆಟಗಾರರು ಕೆಲವು ಇಂತಿಷ್ಟು ಸಮಯಗಳಲ್ಲಿ ಮಾತ್ರ ಮಿಂಚುತ್ತಾರೆ. ಆದರೆ ಈತ ಆರಂಭದಿಂದಲೂ ಸ್ಥಿರವಾಗಿ ಮಿಂಚುತ್ತಿದ್ದಾರೆ. 2019ರಲ್ಲಿ ನಡೆದ ಐಸಿಸಿ ವಿಶ್ವಕಪ್ (ICC World Cup) ನಲ್ಲಿ ಗಾಯವಾಗುವ ಮೊದಲು ಶಿಖರ್ ಧವನ್ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಓಪನರ್ ಆಗಿ ಅವರ ಮೇಲೆ ನಂಬಿಕೆ ಇಡಬಹುದು. ಅವರು ಮೈದಾನವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಅವರ ಗೇಮ್ ಪ್ಲಾನ್ ಬಗ್ಗೆ ನನಗೆ ಗೊತ್ತಿದೆ..”ಎಂದಿದ್ದಾರೆ ದಿನೇಶ್ ಕಾರ್ತಿಕ್. ಇದನ್ನು ಓದಿ.. Cricket News: ತಂಡದಲ್ಲಿ ಮುಂದುವರೆದ ಗೊಂದಲಗಳು: ಈ ಬಾರಿ ಈ ಆಟಗಾರನ ಪಾಲಿಗೆ ವಿಲ್ಲನ್ ಆದ ನಾಯಕ ಹಾರ್ಧಿಕ್ ಪಾಂಡ್ಯ.