Business: ಬರೋಬ್ಬರಿ 7 ಸಾವಿರ ಕೋಟಿಗೆ ಬಿಸ್ಲೇರಿ ಕಂಪನಿ ಯನ್ನು TATA ಗೆ ಮಾರಲು ನಿರ್ಧಾರ ಮಾಡಿದ ಘೋಷಣೆ. ಕಾರಣ ಏನು ಅಂತೇ ಗೊತ್ತೇ?
Business: ಬರೋಬ್ಬರಿ 7 ಸಾವಿರ ಕೋಟಿಗೆ ಬಿಸ್ಲೇರಿ ಕಂಪನಿ ಯನ್ನು TATA ಗೆ ಮಾರಲು ನಿರ್ಧಾರ ಮಾಡಿದ ಘೋಷಣೆ. ಕಾರಣ ಏನು ಅಂತೇ ಗೊತ್ತೇ?
Business: ನಮ್ಮಲ್ಲಿ ಎಲ್ಲೇ ಹೋದರು ಕುಡಿಯುವ ನೀರಿನ ವಿಚಾರದಲ್ಲಿ ಬಿಸ್ಲೆರಿ (Bisleri) ನೀರು ಸಿಗುತ್ತದೆ, ದೇಶದ ಎಲ್ಲ ಕಡೆ ಸುಲಭವಾಗಿ ಸಿಗುವ ಪ್ಯಾಕೇಜ್ಡ್ ಕಂಪನಿಯ ವಾಟರ್ ಇದು. ಇದೀಗ ಈ ಸಂಸ್ಥೆಯನ್ನು ಪ್ರತಿಷ್ಠಿತ ಟಾಟಾ (TATA) ಸಂಸ್ಥೆ ಖರೀದಿ ಮಾಡಿದೆ ಎಂದು ಮಾಹಿತಿ ಸಿಕ್ಕಿದೆ. ರಿಲಯನ್ಸ್ ಸಂಸ್ಥೆ (Reliance), ನೆಸ್ಲೆ ಸಂಸ್ಥೆ (Nestle), ಡ್ಯಾನೋನ್ ಸಂಸ್ಥೆ ಸಹ ಬಿಸ್ಲೆರಿ ಸಂಸ್ಥೆಯನ್ನು ಖರೀದಿ ಮಾಡಲು ಮುಂದಾಗಿದ್ದವು, ಆದರೆ ಟಾಟಾ ಸಂಸ್ಥೆ ಹೆಚ್ಚು ಹಣ ನೀಡಿದ ಕಾರಣ ಟಾಟಾ ಸಂಸ್ಥೆಗೆ ಸಿಕ್ಕಿದೆ. 6000 ರಿಂದ 7000 ಕೋಟಿ ವರೆಗು ಡೀಲ್ ಆಗಿದೆ ಎಂದು ಮಾಹಿತಿ ಸಿಕ್ಕಿದೆ. ಸುಮಾರು ಎರಡು ವರ್ಷಗಳಿಂದಲೇ ಇದಕ್ಕಾಗಿ ಮಾತುಕತೆ ನಡೆದಿತ್ತಂತೆ.
ಮಾಹಿತಿಯ ಪ್ರಕಾರ, ಈ ವಿಚಾರಕ್ಕಾಗಿ ಬಿಸ್ಲೆರಿ ಸಂಸ್ಥೆಯ ಅಧಿಕಾರಿ ರಮೇಶ್ ಚೌಹಾಣ್ (Ramesh Chauhan) ಅವರು, ಟಾಟಾ ಗ್ರೂಪ್ ನ ಆಡಿಳಿತ ಅಧಿಕಾರಿಗಳನ್ನು ಭೇಟಿ ಆಗಿದ್ದಾರೆ. ಈ ಅಗ್ರಿಮೆಂಟ್ ಆಗಿ, ಟಾಟಾ ಸಂಸ್ಥೆ ಬಿಸ್ಲೆರಿಯ ಮಾಲೀಕತ್ವ ವಹಿಸಿಕೊಂಡ ನಂತರ ಕೂಡ, ಮುಂದಿನ ಎರಡು ವರ್ಷಗಳ ಕಾಲ ಇದೆ ಆಡಳಿತ ಸಂಸ್ಥೆ ಕೆಲಸ ಮಾಡಲಿದೆ ಎಂದು ಒಪ್ಪಂದವಾಗಿದೆ. ಬಿಸ್ಲೆರಿ ಸಂಸ್ಥೆಯಲ್ಲಿ ಲಾಭ ಹೆಚ್ಚಾಗಿ ಇರುವುದರಿಂದ ಎಲ್ಲವು ಚೆನ್ನಾಗಿ ಸಾಗುವ ನಂಬಿಕೆ ಇದೆ. ಈ ವರ್ಷ ಬಿಸ್ಲೆರಿ ಕಂಪನಿಯ ಆದಾಯ 2500 ಕೋಟಿ ಹಾಗು ಸುಮಾರು 210 ಕೋಟಿ ರೂಪಾಯಿ ಲಾಭದಲ್ಲಿದೆ. ಇದನ್ನು ಓದಿ.. Cricket News: 2023 ಕ್ಕೆ ಆರಂಭಿಕನನ್ನು ಆಯ್ಕೆ ಮಾಡಿದ ದಿನೇಶ್ ಕಾರ್ತಿಕ್: ರಾಹುಲ್, ಸ್ಯಾಮ್ಸನ್, ಗಿಲ್, ಪಂತ್ ಇವರ್ಯಾರು ಅಲ್ಲ. ಮತ್ತಾರು ಅಂತೇ ಗೊತ್ತೇ?
122 ಬ್ರಾಂಚ್ ಗಳಲ್ಲಿ ಬಿಸ್ಲೆರಿ ವಾಟರ್ ಬಾಟಲ್ ಗಳ ತಯಾರಿಕೆ ಆಗುತ್ತದೆ. ಬಿಸ್ಲೆರಿ ಸಂಸ್ಥೆಯು 4500 ವಿತರಣೆಯ ಜಾಲ ಸಹ ಹೊಂದಿದೆ. ಅವುಗಳನ್ನು ಎಲ್ಲಾ ಊರುಗಳಿಗೆ ಸರಬರಾಜು ಮಾಡಲು 5000ಕ್ಕಿಂತ ಹೆಚ್ಚು ಟ್ರಕ್ ಗಳು ಇದೆಯಂತೆ. ಪ್ರಸ್ತುತ ಬಿಸ್ಲೆರಿ ಸಂಸ್ಥೆಯು ಪ್ಯಾಕೇಜ್ಡ್ ವಾಟರ್ ಮಾರುಕಟ್ಟೆಯಲ್ಲಿ ಶೇ.32ರಷ್ಟು ಶೇರ್ ಹೊಂದಿದೆ. ಪ್ರಸ್ತುತ ಬಿಸ್ಲೆರಿಯನ್ನು ಆಕ್ರಮಿಸಿರುವ ಟಾಟಾ ಸಂಸ್ಥೆ, ಪ್ಯಾಕೇಜ್ಡ್ ವಾಟರ್ ಮಾರುಕಟ್ಟೆಯಲ್ಲಿ ಬಹುದೊಡ್ಡ ಕಂಪನಿ ಆಗುತ್ತಾರೆ. ಈಗಾಗಲೇ ಹಿಮಾಲಯ, ಟಾಟಾ ಕಾಪರ್ ಪ್ಲಸ್, ಟಾಟಾ ಗ್ಲುಕೋ ಪ್ಲಸ್ ಸಂಸ್ಥೆಗಳು ಟಾಟಾ ಸಂಸ್ಥೆಯ ಬಳಿ ಇದೆ. ನಮ್ಮ ದೇಶದಲ್ಲಿ ಪ್ಯಾಕೇಜ್ಡ್ ವಾಟರ್ ನ ಮಾರ್ಕೆಟ್ ₹20,000 ಕೋಟಿಗಳಷ್ಟು ಇದ್ದು, ಇದರಲ್ಲಿ ಶೇ.60ರಷ್ಟು ಅಸಂಘಟಿತ ವಲಯ ಇದೆ. ಇದನ್ನು ಓದಿ.. IPL 2023: ಒಂದು ಕಾಲದಲ್ಲಿ ಕೋಟಿ ಕೋಟಿ ರೂ ಗಳಿಸಿದ್ದ ಟಾಪ್ ಆಟಗಾರರು ಈ ಬಾರಿ ಹರಾಜಿನಲ್ಲಿ ಮಾರಾಟವಾಗೋದೇ ಡೌಟ್. ಟಾಪ್ 5 ಯಾರು ಗೊತ್ತೇ??