Cricket News: ಮತ್ತದೇ ಆಟಗಾರನಿಗೆ ನಡೆಯುತ್ತಿದೆ ಮೋಸ, ಈ ಬಾರಿಯೂ ಕೂಡ ಅವಕಾಶ ಪಡೆಯದ ನತದೃಷ್ಟ ಆಟಗಾರ ಯಾರು ಗೊತ್ತೇ??

Cricket News: ಮತ್ತದೇ ಆಟಗಾರನಿಗೆ ನಡೆಯುತ್ತಿದೆ ಮೋಸ, ಈ ಬಾರಿಯೂ ಕೂಡ ಅವಕಾಶ ಪಡೆಯದ ನತದೃಷ್ಟ ಆಟಗಾರ ಯಾರು ಗೊತ್ತೇ??

Cricket News: ಟಿ20 ವಿಶ್ವಕಪ್ ನಲ್ಲಿ (T20 World Cup) ಭಾರತ ತಂಡ ಸೋತ ನಂತರ ಪ್ರಸ್ತುತ ಭಾರತ ತಂಡವು ನ್ಯೂಜಿಲೆಂಡ್ ಪ್ರವಾಸದಲ್ಲಿ ಸರಣಿ ಟಿ20 ಪಂದ್ಯಗಳನ್ನು ಆಡುತ್ತಿದೆ. ಇಂಡಿಯಾ ವರ್ಸಸ್ ನ್ಯೂಜಿಲೆಂಡ್ (India vs New Zealand) ಸರಣಿಯ ಮೊದಲ ಪಂದ್ಯ ಮಳೆಯ ಕಾರಣದಿಂದ ರದ್ದಾಯಿತು. ಆದರೆ ಎರಡನೇ ಪಂದ್ಯ ನವೆಂಬರ್ 20ರಂದು ನಡೆದು ಭಾರತ ತಂಡ ಗೆದ್ದಿತಾದರು, ಪ್ಲೇಯಿಂಗ್ 11 ಆಯ್ಕೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಭರವಸೆ ಮೂಡಿಸಿರುವ ಅತ್ಯುತ್ತಮವಾಗಿ ಆಡಬಲ್ಲ ಆಟಗಾರ ಸಂಜು ಸ್ಯಾಮ್ಸನ್ (Sanju Samson) ಅವರಿಗೆ ನ್ಯೂಜಿಲೆಂಡ್ ಸರಣಿಯ ಪ್ಲೇಯಿಂಗ್ 11 ನಲ್ಲಿ ಸ್ಥಾನ ಸಿಕ್ಕಿಲ್ಲ. ಇದಕ್ಕೆ ನೆಟ್ಟಿಗರಿಂದಲು ಅಸಮಾಧಾನ ವ್ಯಕ್ತವಾಗಿದೆ.

ಇಶಾನ್ ಕಿಶನ್ (Ishan Kishan) ಮತ್ತು ದೀಪಕ್ ಹೂಡಾ (Deepak Hooda) ಅವರಿಗೆ ಪ್ಲೇಯಿಂಗ್ 11 ನಲ್ಲಿ ಆಡುವ ಅವಕಾಶ ಸಿಕ್ಕಿದೆ. ಕಳಪೆ ಫಾರ್ಮ್ ನಲ್ಲಿರುವ ರಿಷಬ್ ಪಂತ್ (Rishab Pant) ಅವರು ಸಹ ಆರಂಭಿಕರಾಗಿ ಬಂದರು, ಆದರೆ ಸಂಜು ಸ್ಯಾಮ್ಸನ್ ಮತ್ತು ಉಮ್ರಾನ್ ಮಲಿಕ್ (Umran Malik), ವೆಂಕಟೇಶ್ ಅಯ್ಯರ್ (Venkatesh Iyer) ಅವರಿಗೆ ಪ್ಲೇಯಿಂಗ್ 11 ನಲ್ಲಿ ಅವಕಾಶ ಸಿಕ್ಕಿಲ್ಲ. ರಿಷಬ್ ಪಂತ್ ಅವರನ್ನು ಧೋನಿ (Dhoni) ಅವರ ಸ್ಥಾನಕ್ಕಾಗಿ ಆಯ್ಕೆ ಮಾಡಲಾಯಿತು. ಆದರೆ ಇವರು ಟೆಸ್ಟ್ ಪಂದ್ಯಗಳನ್ನು ಹೊರತುಪಡಿಸಿ, ಓಡಿಐ ಮತ್ತು ಟಿ20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇವಲ 6 ರನ್ ಗಳಿಸಿ, ಹೀನಾಯವಾಗಿ ಔಟ್ ಆಗಿದ್ದಾರೆ. ಪಂತ್ ಅವರು ನಾಲ್ಕು ವರ್ಷಗಳಿಂದ ಬಿಗ್ ಶಾಟ್ಸ್ ಯಾವಾಗ ಹೊಡೆಯಬೇಕು ಎನ್ನುವ ವಿಷಯದಲ್ಲೇ ಗೊಂದಲಕ್ಕೆ ಒಳಗಾಗಿದ್ದಾರೆ. ಇದನ್ನು ಓದಿ.. Cricket News: ನೇರವಾಗಿ ಜಡೇಜಾ ರವರನ್ನು ಧೋನಿ ರವರು ಮೋದಿ ಬಳಿ ಕರೆದುಕೊಂಡು ಹೋಗಿ ಹೇಳಿದ್ದು ಏನು ಗೊತ್ತೇ?? ಧೋನಿ ರವರು ಮೋದಿ ಬಳಿ ಹೇಳಿದ್ದೇನು ಗೊತ್ತೇ?

ತಮಗೆ ಎಷ್ಟೇ ಅವಕಾಶಗಳು ಸಿಕ್ಕರು ಅವುಗಳಲ್ಲಿ ಉತ್ತಮವಾದ ಫಲಿತಾಂಶ ನೀಡಿಲ್ಲ ರಿಷಬ್ ಪಂತ್. ಇವರಿಗೆ ಸಿಕ್ಕಷ್ಟು ಅವಕಾಶಗಳಲ್ಲಿ ಅರ್ಧದಷ್ಟು ಅವಕಾಶ ಕೂಡ ಸಂಜು ಸ್ಯಾಮ್ಸನ್ ಅವರಿಗೆ ಸಿಕ್ಕಿಲ್ಲ. ದಕ್ಷಿಣ ಆಫ್ರಿಕಾ (India vs South Africa) ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರು ಉತ್ತಮವಾಗಿ ಆಡಿದ್ದರು, ಐಪಿಎಲ್ (IPL) ನಲ್ಲಿ ಸಹ ತಮ್ಮ ಸಾಮರ್ಥ್ಯವನ್ನು ಪ್ರೂವ್ ಮಾಡಿಕೊಂಡಿದ್ದಾರೆ ಸಂಜು. ಇವರು ಧೋನಿ ಅವರ ಹಾಗೆ ಕೂಲ್ ಆಗಿ ಆಡುವ ಪ್ಲೇಯರ್, ವಿಕೆಟ್ಸ್ ಕಳೆದುಕೊಳ್ಳುವಾಗ ನಿಧಾನವಾಗಿ ಆಡಿ, ರನ್ಸ್ ಸ್ಕೋರ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಬೇರೆಯವರು ಆಡುವ ರೀತಿ ನೋಡಿದರೆ, ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯಲು ಆಡುತ್ತಿದ್ದಾರೆ ಎಂದು ಗೊತ್ತಾಗುತ್ತದೆ. ಇಷ್ಟು ದಿನಗಳು ತಂಡದಲ್ಲಿ ಹಿರಿಯ ಆಟಗಾರರು ಇದ್ದಾರೆ ಎಂದು ಸಂಜು ಸ್ಯಾಮ್ಸನ್ ಅವರಿಗೆ ಸ್ಥಾನ ಸಿಗುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದ್ದರು ಕೂಡ ಈ ರೀತಿ ಆಗಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಇದನ್ನು ಓದಿ.. Kannada News: ಅಧಿಪುರುಷ್ ಚಿತ್ರಕ್ಕಿಂತ ಬಹಳ ಅದ್ಭುತವಾಗಿ ಮೂಡಿ ಬಂದಿರುವ ಹನುಮಾನ್ ಚಿತ್ರದ ಬಜೆಟ್ ಎಷ್ಟು ಗೊತ್ತೇ? ಹೇಗಿದೆ ಗೊತ್ತೇ ಟ್ರೈಲರ್?