ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ರಾತ್ರೋ ರಾತ್ರಿ ರಾಜಕೀಯ ಮಾಡಿ ಕೊಹ್ಲಿ ರವರ ಕೆಳಗಿಳಿಸಿದ್ದ ದ್ರಾವಿಡ್, ರೋಹಿತ್, ಬಿಸಿಸಿಐ ಗೆ ಖಾರವಾದ ಪ್ರಶ್ನೆ ಕೇಳಿದ ಸಲ್ಮಾನ್ ಭಟ್. ಏನು ಅಂತೇ ಗೊತ್ತೇ?

1,843

Get real time updates directly on you device, subscribe now.

Cricket News: ಕಳೆದ ವರ್ಷ ನಡೆದ ಟಿ20 ವಿಶ್ವಕಪ್ (T20 World Cup) ನಲ್ಲಿ ಭಾರತ ತಂಡ (Team India) ಸೋತ ನಂತರ ವಿರಾಟ್ ಕೊಹ್ಲಿ (Virat Kohli) ಅವರು ಟಿ20 ಟೀಮ್ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿದು, ತಮ್ಮ ಮೇಲಿದ್ದ ಒತ್ತಡವನ್ನು ಕಡಿಮೆ ಮಾಡಿಕೊಂಡರು. ಬಿಸಿಸಿಐ (BCCI) ವಿರಾಟ್ ಅವರನ್ನು ಕೆಳಗಿಳಿಸಿ ಐಪಿಎಲ್ (IPL) ನಲ್ಲಿ ಅತ್ಯಂತ ಯಶಸ್ವಿ ನಾಯಕನಾಗಿದ್ದ ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ ಆಗಿ ಮಾಡಿತು. ವಿರಾಟ್ ಅವರು ಓಡಿಐ ಮತ್ತು ಟೆಸ್ಟ್ ತಂಡಗಳ ಕ್ಯಾಪ್ಟನ್ಸಿ ಮುಂದುವರೆಸಲು ಬಯಸಿದ್ದರು. ಆದರೆ ಸೀಮಿತ ಓವರ್ ಗಳಿರುವ ತಂಡಕ್ಕೆ ಒಬ್ಬರೇ ಕ್ಯಾಪ್ಟನ್ ಇರಬೇಕು ಎಂದು ಬಿಸಿಸಿಐ ವಿರಾಟ್ ಅವರನ್ನು ಓಡಿಐ ಕ್ಯಾಪ್ಟನ್ಸಿ ಇಂದ ಕೆಳಗಿಳಿಸಿತು.

ಇದರಿಂದ ಬೇಸರಗೊಂಡ ವಿರಾಟ್ ಕೊಹ್ಲಿ ಅವರು ಟೆಸ್ಟ್ ತಂಡದ ಕ್ಯಾಪ್ಟನ್ಸಿ ಇಂದಲೂ ಹೊರಬಂದರು. ಈಗ ಕ್ಯಾಪ್ಟನ್ಸಿ ಬದಲಾಗಿದ್ದರು ಸಹ ಭಾರತ ತಂಡ ಬದಲಾಗಿಲ್ಲ. ಟಿ20 ವಿಶ್ವಕಪ್ ನಲ್ಲಿ ಭಾರತ ಗೆಲ್ಲಲಿಲ್ಲ. ಹಲವು ನೂನ್ಯತೆಗಳು ಈಗಲೂ ಸಹ ಭಾರತ ತಂಡದಲ್ಲಿದೆ. ಈ ಸಮಯದಲ್ಲಿ ಪಾಕಿಸ್ತಾನ್ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ (Salman Butt) ಅವರು ವಿರಾಟ್ ಕೊಹ್ಲಿ ಅವರನ್ನು ಕ್ಯಾಪ್ಟನ್ಸಿ ಇಂದ ಹೊರಹಾಕಿದ್ದಕ್ಕೆ, ಬಿಸಿಸಿಐ ಮೇಲೆ ಕಿಡಿಕಾರಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ ವಿಡಿಯೋದಲ್ಲಿ ಬಿಸಿಸಿಐ ವಿರುದ್ಧ ಪ್ರಶ್ನೆ ಮಾಡಿದ್ದಾರೆ ಸಲ್ಮಾನ್ ಬಟ್..

“ಟೀಮ್ ಇಂಡಿಯಾ ಕ್ಯಾಪ್ಟನ್ಸಿ ಇಂದ ವಿರಾಟ್ ಅವರನ್ನು ತೆಗೆದಾಗ, ಕಾರಣ ಏನು ಇರಲಿಲ್ಲ, ಕಾರಣ ಕೇಳಿದ್ದಕ್ಕೆ ಅವರ ಕ್ಯಾಪ್ಟನ್ಸಿಯಲ್ಲಿ ಐಸಿಸಿ ಟೂರ್ನಿ ಗೆದ್ದಿಲ್ಲ ಎಂದು ಹೇಳಿದ್ದರು. ಎಲ್ಲರನ್ನು ನೋಡುವುದಾದರೆ, ಎಷ್ಟು ನಾಯಕರು ಪ್ರಶಸ್ತಿ ಗೆದ್ದಿದ್ದಾರೆ? ಇಡೀ ವೃತ್ತಿ ಜೀವನದಲ್ಲಿ ಪ್ರಶಸ್ತಿ ಗೆಲ್ಲದ ನಾಯಕರು ಆಟಗಾರರಿದ್ದಾರೆ. ಸರಿಯಾದ ಕಾರಣವೇ ಇಲ್ಲದೆ, ವಿರಾಟ್ ಕೊಹ್ಲಿ ಅವರನ್ನು ಕ್ಯಾಪ್ಟನ್ಸಿ ಇಂದ ಹೊರಹಾಕಿದ್ದು ಸರಿಯಲ್ಲ. ವಿರಾಟ್ ಕೊಹ್ಲಿ ಒಬ್ಬ ಕ್ವಾಲಿಟಿ ಕ್ಯಾಪ್ಟನ್. ಭಾರತ ತಂಡದ ಸೋಲಿಗೆ ಕಾರಣ ಅವರೊಬ್ಬರೇ ಅಲ್ಲ. ಈಗಲೂ ತಂಡದಲ್ಲಿ ಸಮಸ್ಯೆಗಳಿವೆ. ಇಲಿ ಪ್ರಶಸ್ತಿಗಳು ಮಾತ್ರ ಮುಖ್ಯವಾಗುತ್ತದೆ. ಟಿ20 ಪಂದ್ಯಗಳು ಚಂಚಲವಾಗಿರುತ್ತದೆ. ಹಲವು ಲೀಗ್ ಗಳು ಸಹ ನಡೆಯುತ್ತಿರುತ್ತದೆ. ಇಲ್ಲಿ ಫಿಟ್ ಆಗಿರುವವರು ಆಡುತ್ತಾರೆ. ತಂಡವನ್ನು ಮುನ್ನಡೆಸುತ್ತಾರೆ…” ಎಂದು ಹೇಳಿದ್ದಾರೆ ಸಲ್ಮಾನ್ ಬಟ್.

Get real time updates directly on you device, subscribe now.