Cricket News: ಕಿವೀಸ್ ವಿರುದ್ಧ ಎಬಿಡಿ ಅಂತೇ 360 ಬ್ಯಾಟಿಂಗ್ ಮಾಡಿದ ಸೂರ್ಯ ಆಟದ ಬಗ್ಗೆ ತಂಡದಲ್ಲಿ ಇರದ ಕೊಹ್ಲಿ ಹೇಳಿದ್ದೇನು ಗೊತ್ತೇ??
Cricket News: ಕಿವೀಸ್ ವಿರುದ್ಧ ಎಬಿಡಿ ಅಂತೇ 360 ಬ್ಯಾಟಿಂಗ್ ಮಾಡಿದ ಸೂರ್ಯ ಆಟದ ಬಗ್ಗೆ ತಂಡದಲ್ಲಿ ಇರದ ಕೊಹ್ಲಿ ಹೇಳಿದ್ದೇನು ಗೊತ್ತೇ??
Cricket News: ಸೂರ್ಯಕುಮಾರ್ ಯಾದವ್ (Suryakumar Yadav) ಅವರು ಭಾರತ ತಂಡದ ಅಸೆಟ್, ಹಲವು ಅದ್ಭುತ ಇನ್ನಿಂಗ್ಸ್ ಗಳ ಮೂಲಕ ಭಾರತ ತಂಡಕ್ಕೆ ಸಹಾಯವಾಗಿರುವ ಸೂರ್ಯಕುಮಾರ್ ಯಾದವ್ ಅವರು ಇದೀಗ ಮತ್ತೊಂದು ಅದ್ಭುತ ಇನ್ನಿಂಗ್ಸ್ ಮೂಲಕ, ತಮ್ಮ ಸಾಮರ್ಥ್ಯವನ್ನು ನಿರೂಪಿಸಿದ್ದಾರೆ. ಐಸಿಸಿಯ ಟಾಪ್ 1 ಬ್ಯಾಟ್ಸ್ಮನ್ ಎಂದು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ ಸೂರ್ಯ. ನಿನ್ನೆ ನಡೆದ ಭಾರತ ವರ್ಸಸ್ ನ್ಯೂಜಿಲೆಂಡ್ (India vs New Zealand) ಪಂದ್ಯದಲ್ಲಿ ಎದುರಾಳಿ ತಂಡದ ಬೌಲರ್ ಗಳನ್ನು ಚಚ್ಚಿ ಬಿಸಾಕಿದ್ದಾರೆ ಸೂರ್ಯ..
ಕೇವಲ 49 ಎಸೆತಗಳಲ್ಲಿ ಶತಕ ಪೂರ್ತಿ ಮಾಡಿದ ಸೂರ್ಯ ಅವರು, 51 ಎಸೆತಗಳಲ್ಲಿ ಭರ್ಜರಿ 111 ಸಿಡಿಸಿದರು. ನಮ್ಮ ತಂಡದ ಎಲ್ಲಾ ಆಟಗಾರರು ರನ್ಸ್ ಗಳಿಸಲು ಕಷ್ಟ ಪಡುವಾಗ, ಸೂರ್ಯಕುಮಾರ್ ಯಾದವ್ ಅವರು ಮಾತ್ರ, ನಿರರ್ಗಳವಾಗಿ ರನ್ಸ್ ಗಳಿಸುತ್ತಿದ್ದರು. ಸೂರ್ಯ ಅವರಿಂದ ಭಾರತ ತಂಡ 191 ರನ್ಸ್ ಗಳಿಸಲು ಸಾಧ್ಯವಾಯಿತು. ಬೇರೆ ಆಟಗಾರರು 68 ರನ್ಸ್ ಗಳಿಸಿದರು ಈ ರೀತಿಯಾಗಿ ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಇನ್ನಿಂಗ್ಸ್ ನೋಡಿದ ಕ್ರಿಕೆಟ್ ಪ್ರಿಯರು, ಬಹಳ ಸಂತೋಷಗೊಂಡಿದ್ದಾರೆ. ಎಲ್ಲರಿಂದಲೂ ಸೂರ್ಯಕುಮಾರ್ ಯಾದವ್ ಅವರ ಆಟದ ವೈಖರಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನು ಓದಿ.. Brett Lee’s Best XI: ಟಿ 20 ವಿಶ್ವಕಪ್ ನಲ್ಲಿ ತನ್ನದೇ ಆದ ಲೆಕ್ಕಾಚಾರದೊಂದಿಗೆ ಹನ್ನೊಂದರ ಬಳಗ ರಚಿಸಿದ ಬ್ರೆಟ್ ಲೀ. ಭಾರತೀಯರದ್ದೇ ಪಾರುಪತ್ಯ
ವಿರಾಟ್ ಕೊಹ್ಲಿ (Virat Kohli) ಅವರು ಕೂಡ ಸೂರ್ಯಕುಮಾರ್ ಯಾದವ್ ಅವರ ಆಟದ ಪ್ರದರ್ಶನವನ್ನು ಹಾಡಿ ಹೊಗಳಿದ್ದಾರೆ, “ಇಂದು ಅವರು ವಿಶ್ವದ ಬೆಸ್ಟ್ ಬ್ಯಾಟ್ಸ್ಮನ್ ಎನ್ನುವುದಕ್ಕೆ ಕಾರಣ ಏನು ಎಂದು ಮತ್ತೊಮ್ಮೆ ತಿಳಿಸಿದ್ದಾರೆ. ಪಂದ್ಯವನ್ನು ಲೈವ್ ನೋಡಲು ಆಗಲಿಲ್ಲ, ಆದರೆ ಇದು ಮತ್ತೊಂದು ವಿಡಿಯೋ ಗೇಮ್ ಇನ್ನಿಂಗ್ಸ್ ಆಗಿರುತ್ತದೆ ಎಂದು ನನಗೆ ಗೊತ್ತಿದೆ..” ಎಂದು ಸಂತೋಷದಿಂದ ವಿರಾಟ್ ಕೊಹ್ಲಿ ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ ಅಭಿಮಾನಿಗಳು ಕೂಡ ಕಮೆಂಟ್ಸ್ ಮೂಲಕ ಸೂರ್ಯ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಇದನ್ನು ಓದಿ..Cricket News: ನಾಯಕನ ಬಗ್ಗೆ ಸಾಕಷ್ಟು ಚರ್ಚೆಯಲ್ಲಿ ಇರುವಾಗ ಬೆಸ್ಟ್ ಕ್ಯಾಪ್ಟನ್ ಯಾರೆಂದು ತಿಳಿಸಿದ ಶುಭಮ್ ಗಿಲ್. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?
Numero Uno showing why he’s the best in the world. Didn’t watch it live but I’m sure this was another video game innings by him. 😂 @surya_14kumar
— Virat Kohli (@imVkohli) November 20, 2022