Cricket News: ವಿರಾಟ್ ಕೊಹ್ಲಿ ರವರ ಭವಿಷ್ಯವನ್ನೇ ಮುಗಿಸಲು ಯತ್ನಿಸಿದ್ದು ಯಾರಂತೆ ಗೊತ್ತೇ? ಪಾಕ್ ನ ಡ್ಯಾನಿಷ್ ಕಾನೇರಿಯ ಹೆಸರಿಸಿದ್ದು ಯಾರನ್ನು ಗೊತ್ತೇ??
Cricket News: ಬಿಸಿಸಿಐ (BCCI) ಈಗ ಚೇತನ್ ಶರ್ಮಾ (Chetan Sharma) ನೇತೃತ್ವದ ಆಯ್ಕೆಗಾರರ ಸಭೆಯನ್ನು ವಜಾಗೊಳಿಸಿದೆ, ಚೇತನ್ ಶರ್ಮಾ ಅವರ ಆಯ್ಕೆ ಸರಿಯಾಗಿರಲಿಲ್ಲ, ಹಲವು ಬೇಡದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು, ಬೇಡದ ಬದಲಾವಣೆಗಳನ್ನು ಮಾಡುತ್ತಿದ್ದರು ಎನ್ನುವ ಆಪಾದನೆ ಕೇಳಿಬರುತ್ತಿತ್ತು, ಅದೇ ವಿಷಯದ ನಗ್ಗೆ ಈಗ ಪಾಕ್ ನ ಡ್ಯಾನಿಷ್ ಕಾನೇರಿಯಾ (Danish Kaneriya) ಅವರು ಕೆಲವು ಶಾಕಿಂಗ್ ವಿಚಾರಗಳನ್ನು ತಿಳಿಸಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಅವರ ಕೆರಿಯರ್ ಮುಗಿಸಲು ಪ್ರಯತ್ನ ನಡೆದಿತ್ತು ಎಂದು ಶಾಕಿಂಗ್ ವಿಚಾರ ತಿಳಿಸಿದ್ದಾರೆ ಡ್ಯಾನಿಷ್ ಕಾನೇರಿಯಾ.
“ವಿರಾಟ್ ಕೊಹ್ಲಿ ಅವರ ಕೆರಿಯರ್ ಅನ್ನು ಹಾಳು ಮಾಡಬೇಕು ಎಂದು ಚೇತನ್ ಶರ್ಮಾ ಅವರು ಮುನ್ನಡೆಸಿದ ಆಯ್ಕೆಗಾರರ ಸಮಿತಿ ಬಹಳ ಪ್ರಯತ್ನ ಪಟ್ಟಿತು. ವಿರಾಟ್ ಅವರು ಫಾರ್ಮ್ ಗೆ ಮರಳಿ ಬರಲು ಕಷ್ಟಪಡುತ್ತಿದ್ದಾಗ, ಅವರಿಗೆ ಸತತವಾಗಿ ಅವಕಾಶ ಕೊಡಲಿಲ್ಲ. ಕೆಲವು ಸರಣಿಗಳಲ್ಲಿ ಮಾತ್ರ ಆಡುವ ಅವಕಾಶ ಕೊಡಲಾಯಿತು, ಕರುಣೆ ಇಲ್ಲದೆ ಅವರನ್ನು ಕ್ಯಾಪ್ಟನ್ಸಿ ಇಂದ ಕೆಳಗೆ ಇಳಿಸಲಾಯಿತು. ವಿರಾಟ್ ಅವರನ್ನು ಕ್ಯಾಪ್ಟನ್ಸಿ ಇಂದ ಹೊರತೆಗೆಯುವಗ ಹಲವು ಸುಳ್ಳು ವಿಚಾರಗಳನ್ನು ಹೇಳಲಾಗಿದೆ, ತಮ್ಮನ್ನು ಕ್ಯಾಪ್ಟನ್ಸಿಯಿಂದ ಹೊರತೆಗೆದಾಗ, ಬಿಸಿಸಿಐ ಆಗಲಿ ಅಥವಾ ಆಯ್ಕೆ ಸಮಿತಿ ಆಗಲಿ ತಮ್ಮೊಡನೆ ಚರ್ಚೆ ಮಾಡಿರಲಿಲ್ಲ ಎಂದು ಸ್ವತಃ ವಿರಾಟ್ ಕೊಹ್ಲಿ ಅವರೇ ಹೇಳಿದ್ದರು..” ಎಂದಿದ್ದಾರೆ ಡ್ಯಾನಿಷ್ ಕಾನೇರಿಯಾ. ಇದನ್ನು ಓದಿ.. Cricket News: ನಾಯಕನ ಬಗ್ಗೆ ಸಾಕಷ್ಟು ಚರ್ಚೆಯಲ್ಲಿ ಇರುವಾಗ ಬೆಸ್ಟ್ ಕ್ಯಾಪ್ಟನ್ ಯಾರೆಂದು ತಿಳಿಸಿದ ಶುಭಮ್ ಗಿಲ್. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?
ಇನ್ನು ಮುಂದುವರೆದು ಮಾತನಾಡಿದ ಡ್ಯಾನಿಷ್ ಅವರು, ಚೇತನ್ ಶರ್ಮ ನೇತೃತ್ವದ ಆಯ್ಕೆ ಸಮಿತಿಯ ಕಾರ್ಯಕ್ಷಮತೆ ಉತ್ತಮವಾಗಿ ಇರಲಿಲ್ಲ. ಕಳೆದ ವರ್ಷ 8 ಕ್ಯಾಪ್ಟನ್ ಗಳು ತಂಡವನ್ನು ಮುನ್ನಡೆಸುವ ಹಾಗೆ ಮಾಡಿದ್ದಾರೆ, ಇದು ಉತ್ತಮ ಬದಲಾವಣೆ ಆಗಿರಲಿಲ್ಲ. ಇದರಿಂದ ಭಾರತ ತಂಡ ಒಂದು ನಿಶ್ಚಿತ ತಂಡವಾಗಿ ಇರಲಿಲ್ಲ. ಬದಲಾವಣೆಗಳನ್ನು ಮಾಡುತ್ತಲೇ ಇದ್ದರು. ಪ್ರತಿಭೆ ಇದ್ದ ಆಟಗಾರರಿಗೆ ಅವಕಾಶ ಸಿಗದ ಹಾಗೆ ಮಾಡಿದರು, ಹಲವು ಆಟಗಾರರಿಗೆ ನಾಲ್ಕು ಪಂದ್ಯಗಳಲ್ಲಿ ಆಡುವ ಅವಕಾಶ ನೀಡಿ, ಅವರನ್ನು ಕೈಬಿಟ್ಟರು..ಈ ರೀತಿಯಾಗಿ ಚೇತನ್ ಶರ್ಮಾ ಅವರಿಂದ ಆದ ಹಲವು ತಪ್ಪುಗಳ ಬಗ್ಗೆ ಮಾತನಾಡಿದ್ದಾರೆ ಡ್ಯಾನಿಶ್ ಕಾನೇರಿಯಾ. ಇದನ್ನು ಓದಿ.. Cricket News: ಕಿವೀಸ್ ವಿರುದ್ಧ ಎಬಿಡಿ ಅಂತೇ 360 ಬ್ಯಾಟಿಂಗ್ ಮಾಡಿದ ಸೂರ್ಯ ಆಟದ ಬಗ್ಗೆ ತಂಡದಲ್ಲಿ ಇರದ ಕೊಹ್ಲಿ ಹೇಳಿದ್ದೇನು ಗೊತ್ತೇ??