Cricket News: ನಾಯಕನ ಬಗ್ಗೆ ಸಾಕಷ್ಟು ಚರ್ಚೆಯಲ್ಲಿ ಇರುವಾಗ ಬೆಸ್ಟ್ ಕ್ಯಾಪ್ಟನ್ ಯಾರೆಂದು ತಿಳಿಸಿದ ಶುಭಮ್ ಗಿಲ್. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?

Cricket News: ನಾಯಕನ ಬಗ್ಗೆ ಸಾಕಷ್ಟು ಚರ್ಚೆಯಲ್ಲಿ ಇರುವಾಗ ಬೆಸ್ಟ್ ಕ್ಯಾಪ್ಟನ್ ಯಾರೆಂದು ತಿಳಿಸಿದ ಶುಭಮ್ ಗಿಲ್. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?

Cricket News: ಭಾರತ ಕ್ರಿಕೆಟ್ ತಂಡದ (Team India) ಯುವ ಆಟಗಾರ ಶುಭಮನ್ ಗಿಲ್ (Shubman Gill) ಅವರು ಮುಂದಿನ ವರ್ಷಗಳಲ್ಲಿ ತಂಡದ ಸ್ಟಾರ್ ಪ್ಲೇಯರ್ ಆಗಿ ಮಿಂಚುವ ಸಾಧ್ಯತೆಗಳು ಹೆಚ್ಚಿದೆ. ಕೆರಿಯರ್ ಆರಂಭದಲ್ಲಿ ಗಿಲ್ ಅವರ ಆಟದ ವೈಖರಿಯಲ್ಲಿ ಸ್ವಲ್ಪ ಸಮಸ್ಯೆಗಳು ಕಂಡುಬಂದಿದ್ದು ನಿಜ, ಆದರೆ ಶುಭಮನ್ ಗಿಲ್ ಅವರು ಬರುಬರುತ್ತಾ ಅವೆಲ್ಲವನ್ನು ಸರಿ ಮಾಡಿಕೊಂಡು ಉತ್ತಮ ಆಟಗಾರನಾಗಿ ಮಾರ್ಪಾಡಾಗುತ್ತಿದ್ದಾರೆ. ಐಪಿಎಲ್ (IPL) ನಲ್ಲಿ ಸಹ ಉತ್ತಮ ಪ್ರದರ್ಶನ ನೀಡುತ್ತಾ, ನ್ಯಾಷನಲ್ ಟೀಮ್ ನಲ್ಲೂ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ತಂಡದ ಬೆಸ್ಟ್ ಕ್ಯಾಪ್ಟನ್ ಯಾರು ಎಂದು ಹೇಳಿದ್ದಾರೆ ಶುಭಮನ್ ಗಿಲ್.

ಇತ್ತೀಚೆಗೆ ಇವರು ಒಂದು ಪಂಜಾಬಿ ಇಂಟರ್ವ್ಯೂನಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ ನೀವು ಈವರೆಗೂ ಆಡಿರುವ ಕ್ಯಾಪ್ಟನ್ ಗಳಲ್ಲಿ ಬೆಸ್ಟ್ ಕ್ಯಾಪ್ಟನ್ ಯಾರು ಎಂದು ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ ಉತ್ತರ ಕೊಟ್ಟಿರುವ ಶುಭಮನ್ ಗಿಲ್ ಅವರು, ವಿರಾಟ್ ಕೊಹ್ಲಿ (Virat Kohli) ಅವರ ಹೆಸರು ಹೇಳಿದ್ದು, ವಿರಾಟ್ ಅವರ ನಂತರ ರೋಹಿತ್ ಶರ್ಮಾ (Rohit Sharma), ಶಿಖರ್ ಧವನ್ (Shikar Dhavan) ಮತ್ತು ಹಾರ್ದಿಕ್ ಪಾಂಡ್ಯ (Hardik Pandya) ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಈಗಾಗಲೇ ಟೆಸ್ಟ್ ಮತ್ತು ಓಡಿಐ ತಂಡಕ್ಕೆ ಆಯ್ಕೆಯಾಗಿರುವ ಗಿಲ್ ಅವರು ಇತ್ತೀಚೆಗೆ ಟಿ20 ತಂಡದಲ್ಲಿ ಸಹ ಸ್ಥಾನ ಪಡೆದುಕೊಂಡಿದ್ದಾರೆ. ಇದನ್ನು ಓದಿ.. Brett Lee’s Best XI: ಟಿ 20 ವಿಶ್ವಕಪ್ ನಲ್ಲಿ ತನ್ನದೇ ಆದ ಲೆಕ್ಕಾಚಾರದೊಂದಿಗೆ ಹನ್ನೊಂದರ ಬಳಗ ರಚಿಸಿದ ಬ್ರೆಟ್ ಲೀ. ಭಾರತೀಯರದ್ದೇ ಪಾರುಪತ್ಯ

ವಿರಾಟ್ ಕೊಹ್ಲಿ ಅವರ ಛಾಯೆಯ ಹಾಗೆ, ಅವರ ಛಾಪನ್ನು ಮುಂದುವರೆಸುವ ಸಾಮರ್ಥ್ಯ ಇವರಿಗೆ ಇದೆ ಎನ್ನುವ ಅಭಿಪ್ರಾಯ ಎಲ್ಲರಿಂದ ವ್ಯಕ್ತವಾಗುತ್ತಿದೆ. ಹಿಂದಿನ ವರ್ಷಗಳಲ್ಲಿ ಸಚಿನ್ ತೆಂಡೂಲ್ಕರ್ (Sachin Tendulkar) ಅವರು ಮಿಡ್ಲ್ ಆರ್ಡರ್ ಬ್ಯಾಟಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರು, ಬಳಿಕ ಧೋನಿ (M S Dhoni) ಅವರು, ಅದಾದ ನಂತರ ಒಂದು ದಶಕದಿಂದ ವಿರಾಟ್ ಅವರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇವರ ಸ್ಥಾನಕ್ಕೆ ಬರುವ ಲಕ್ಷಣಗಳು ಶುಭಮನ್ ಗಿಲ್ ಅವರಲ್ಲಿದೆ ಎನ್ನುತ್ತಾರೆ ಕ್ರಿಕೆಟ್ ತಜ್ಞರು. ಇದನ್ನು ಓದಿ.. Big News: ಮುಖ್ಯ ಆಯ್ಕೆದಾರರ ಹುದ್ದೆಗೆ ಬಂದ ಮಾಜಿ ಆಟಗಾರ: ಈತನೇ ಫೈನಲ್. ಈಗಲಾದರೂ ತಂಡದ ಆಯ್ಕೆ ಸರಿಹೋಗಲಿದೆಯೇ??