Brett Lee’s Best XI: ಟಿ 20 ವಿಶ್ವಕಪ್ ನಲ್ಲಿ ತನ್ನದೇ ಆದ ಲೆಕ್ಕಾಚಾರದೊಂದಿಗೆ ಹನ್ನೊಂದರ ಬಳಗ ರಚಿಸಿದ ಬ್ರೆಟ್ ಲೀ. ಭಾರತೀಯರದ್ದೇ ಪಾರುಪತ್ಯ
Brett Lee’s Best XI: ಟಿ 20 ವಿಶ್ವಕಪ್ ನಲ್ಲಿ ತನ್ನದೇ ಆದ ಲೆಕ್ಕಾಚಾರದೊಂದಿಗೆ ಹನ್ನೊಂದರ ಬಳಗ ರಚಿಸಿದ ಬ್ರೆಟ್ ಲೀ. ಭಾರತೀಯರದ್ದೇ ಪಾರುಪತ್ಯ
Brett Lee’s Best XI: ಆಸ್ಟ್ರೇಲಿಯಾ (Australia) ಕ್ರಿಕೆಟ್ ತಂಡದ ಮಾಜಿ ಬೌಲರ್ ಬ್ರೆಟ್ ಲೀ ಅವರು ಇತ್ತೀಚೆಗೆ ಮುಕ್ತಾಯವಾದ ಟಿ20 ವರ್ಲ್ಡ್ ಕಪ್ ಇಂದ ಬೆಸ್ಟ್ ಪ್ಲೇಯಿಂಗ್ 11 ತಂಡವನ್ನು ರಚಿಸಿದ್ದಾರೆ. ಇವರ ತಂಡದಲ್ಲಿ 4 ಭಾರತದ ಆಟಗಾರರು, ಇಬ್ಬರು ಪಾಕಿಸ್ತಾನದ ಆಟಗಾರರು, ಒಬ್ಬ ನ್ಯೂಜಿಲೆಂಡ್ ಆಟಗಾರ ಮತ್ತು. ನಾಲ್ಕು ಇಂಗ್ಲೆಂಡ್ ಆಟಗಾರರನ್ನು ಆಯ್ಕೆ ಮಾಡಿದ್ದಾರೆ, ಆಸ್ಟ್ರೇಲಿಯಾ ತಂಡದ ಆಟಗಾರರು ಒಬ್ಬರು ಇಲ್ಲ ಎನ್ನುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ..
ಪಾಕಿಸ್ತಾನ್ ತಂಡವನ್ನು ಸೋಲಿಸಿದ ಇಂಗ್ಲೆಂಡ್ ತಂಡದ ಜೋಸ್ ಬಟ್ಲರ್ (Jos Buttler), ತಮ್ಮ ತಂಡದ ಪರವಾಗಿ 225 ರನ್ ಗಳಿಸಿದರು. ಅಲೆಕ್ಸ್ ಹೇಲ್ಸ್ (Alex Hales) ಅವರು 212 ರನ್ಸ್ ಗಳಿಸಿದರು, ಇವರಿಬ್ಬರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ ಬ್ರೆಟ್ ಲೀ. ಪ್ಲೇಯರ್ ಆಫ್ ದಿ ಮ್ಯಾಚ್ ಅವಾರ್ಡ್ ಗೆದ್ದ ಸ್ಯಾಮ್ ಕರನ್ (Sam Curran), ಸ್ಪಿನ್ ಮಾಂತ್ರಿಕ ಅದಿಲ್ ರಶೀದ್ (Adil Rasheed) ಅವರನ್ನು ತಮ್ಮ ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತ ತಂಡದ ಆಟಗಾರರಾದ 296 ರನ್ಸ್ ಗಳಿಸಿದ ವಿರಾಟ್ ಕೊಹ್ಲಿ (Virat Kohli), 239 ರನ್ಸ್ ಗಳಿಸಿದ ಸೂರ್ಯಕುಮಾರ್ ಯಾದವ್ (Suryakumar Yadav), ಭಾರತ ತಂಡಡ್ಸ್ ಆಲ್ ರೌಂಡರ್ 218 ರನ್ಸ್ ಗಳಿಸಿದ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಆಯ್ಕೆ ಮಾಡಿದ್ದಾರೆ. ಇದನ್ನು ಓದಿ..Personal Loan: ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಬೇಕಾ? ಹಾಗಿದ್ದರೆ ಈ ಟಾಪ್ 5 ಬ್ಯಾಂಕ್ ಗಳಲ್ಲಿ ನೀವು ಸರಿ ಎಂದರೆ ಸಾಕು ಹುಡುಕಿಕೊಂಡು ಬಂದು ಹಣ ನೀಡುತ್ತಾರೆ.
ಹಾಗೂ ಭಾರತ ತಂಡದ ಯುವ ಸ್ಟಾರ್ ಬೌಲರ್ ಅರ್ಷದೀಪ್ ಸಿಂಗ್ (Arshdeep Singh) ಅವರನ್ನು ತಮ್ಮ ಪ್ಲೇಯಿಂಗ್ 11 ಗೆ ಸೇರಿಸಿಕೊಂಡಿದ್ದಾರೆ ಬ್ರೆಟ್ ಲೀ. ಇನ್ನು ಪಾಕಿಸ್ತಾನ್ ತಂಡದಿಂದ ಶಾಹಿನ್ ಅಫ್ರಿದಿ (Shaheen Afridi) ಮತ್ತು ಆಲ್ ರೌಂಡರ್ ಶಾದಾಬ್ ಖಾನ್ (Shadab Khan) ಅವರನ್ನು ಆಯ್ಕೆಮಾಡಿಕೊಂಡಿದ್ದಾರೆ. ಹಾಗೂ ನ್ಯೂಜಿಲೆಂಡ್ ತಂಡದ ಗ್ಲೆನ್ ಫಿಲಿಪ್ಸ್ (Glenn Philips) ಅವರನ್ನು ಆಯ್ಕೆ ಮಾಡಿದ್ದಾರೆ. ಒಟ್ಟಾರೆಯಾಗಿ ಇವರು ಆಯ್ಕೆ ಮಾಡಿರುವ ಪ್ಲೇಯಿಂಗ್ 11 ಹೀಗಿದೆ..ಅಲೆಕ್ಸ್ ಹೇಲ್ಸ್, ಜೋಸ್ ಬಟ್ಲರ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಗ್ಲೆನ್ ಫಿಲಿಪ್ಸ್, ಹಾರ್ದಿಕ್ ಪಾಂಡ್ಯ, ಶಾದಾಬ್ ಖಾನ್, ಸ್ಯಾಮ್ ಕರನ್, ಶಾಹಿನ್ ಅಫ್ರಿದಿ, ಅರ್ಷದೀಪ್ ಸಿಂಗ್ ಮತ್ತು ಆದಿಲ್ ರಶೀದ್ ಇದ್ದಾರೆ. ಇದನ್ನು ಓದಿ..Big News: ಮುಖ್ಯ ಆಯ್ಕೆದಾರರ ಹುದ್ದೆಗೆ ಬಂದ ಮಾಜಿ ಆಟಗಾರ: ಈತನೇ ಫೈನಲ್. ಈಗಲಾದರೂ ತಂಡದ ಆಯ್ಕೆ ಸರಿಹೋಗಲಿದೆಯೇ??