Cricket News In Kannada: ದಿನೇಶ್ ಕಾರ್ತಿಕ್ ಅಲ್ಲವೇ ಅಲ್ಲ, ಭಾರತ ತಂಡಕ್ಕೆ ಫಿನಿಶರ್ ಅನ್ನು ಹೆಸರಿಸಿದ ರಾಬಿನ್ ಉತ್ತಪ್ಪ. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

Cricket News In Kannada: ದಿನೇಶ್ ಕಾರ್ತಿಕ್ ಅಲ್ಲವೇ ಅಲ್ಲ, ಭಾರತ ತಂಡಕ್ಕೆ ಫಿನಿಶರ್ ಅನ್ನು ಹೆಸರಿಸಿದ ರಾಬಿನ್ ಉತ್ತಪ್ಪ. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

Cricket News In Kannada: ಭಾರತ ಕ್ರಿಕೆಟ್ ತಂಡವು (Team India) ಟಿ20 ವಿಶ್ವಕಪ್ ನಲ್ಲಿ ಸೆಮಿಫೈನಲ್ಸ್ (T20 World Cup) ಹಂತಕ್ಕೆ ಬಂದು ಸೋತಿರುವುದರಿಂದ, 2024ರ ವಿಶ್ವಕಪ್ ಪಂದ್ಯಕ್ಕೆ ಈಗಿನಿಂದಲೇ ಬಲಿಷ್ಠ ತಂಡ ಕಟ್ಟುವ ಜವಾಬ್ದಾರಿ ಬಿಸಿಸಿಐ (BCCI) ಮೇಲಿದೆ. ಈ ಸಮಯದಲ್ಲಿ ಬಿಸಿಸಿಐ ಮುಂದೆ ಇರುವ ಒಂದು ಮಹತ್ವದ ಪ್ರಶ್ನೆ ಏನು ಎಂದರೆ, ಟೀಮ್ ಇಂಡಿಯಾದ ಫಿನಿಷರ್ ಆಯ್ಕೆ. ಈ ವರ್ಷದ ಟಿ20 ವಿಶ್ವಕಪ್ ನಲ್ಲಿ ದಿನೇಶ್ ಕಾರ್ತಿಕ್ (Dinesh Karthik) ಅವರು ಫಿನಿಶರ್ ಪಾತ್ರವನ್ನು ನಿರ್ವಹಿಸಿದ್ದರು. ಆದರೆ ದಿನೇಶ್ ಕಾರ್ತಿಕ್ ಅವರು ತಮಗೆ ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳಲಿಲ್ಲ. ರನ್ಸ್ ಗಳಿಸುವಲ್ಲಿ ವಿಫಲರಾದರು.

ಈ ಕಾರಣದಿಂದ ಅವರನ್ನು ಮುಂಬರುವ ನ್ಯೂಜಿಲೆಂಡ್ ಪಂದ್ಯಕ್ಕೆ ಆಯ್ಕೆ ಮಾಡಿಲ್ಲ. ಜೊತೆಗೆ ದಿನೇಶ್ ಕಾರ್ತಿಕ್ ಅವರಿಗೆ ಈಗಾಗಲೇ 37 ವರ್ಷವಾಗಿದ್ದು, ಮುಂದಿನ ಪಂದ್ಯಗಳಲ್ಲಿ ಅವರನ್ನು ಆಯ್ಕೆ ಮಾಡುವುದು ಕೂಡ ಕಷ್ಟವೇ ಆಗಿದೆ. ಪರಿಸ್ಥಿತಿ ಹೀಗಿದ್ದಾಗ, ಭಾರತ ತಂಡ ಈಗಿನಿಂದಲೇ ಫಿನಿಷರ್ ಪಾತ್ರ ನಿರ್ವಹಿಸುವವರನ್ನು ಆಯ್ಕೆ ಮಾಡಬೇಕಿರುವುದು ಬಹಳ ಮುಖ್ಯವಾದ ವಿಚಾರ ಆಗಿದೆ, ಪ್ರಡ್ತುತ ಫಿನಿಷರ್ ಆಗಿ ದಿನೇಶ್ ಕಾರ್ತಿಕ್ ಅವರ ಸ್ಥಾನವನ್ನು ತುಂಬಬಲ್ಲ ಇಬ್ಬರು ಆಟಗಾರರಿದ್ದು, ಅವರಿಬ್ಬರನ್ನು ಭಾರತ ತಂಡದ ಈಗಿನಿಂದಲೇ ಸಿದ್ಧಗೊಳಿಸಿದರೆ ಮುಂದಿನ ವಿಶ್ವಕಪ್ ಗೆ ಸುಲಭವಾಗುತ್ತದೆ ಎಂದು ಭಾರತ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರು ಮಾತನಾಡಿರುವುದು ದೀಪಕ್ ಹೂಡಾ ಮತ್ತು ಸಂಜು ಸ್ಯಾಮ್ಸನ್ ಅವರ ಬಗ್ಗೆ. ಇದನ್ನು ಓದಿ..FIFA World Cup 2022: ಫುಟ್ ವಿಶ್ವಕಪ್ ನಲ್ಲಿ ಆಡುತ್ತಿರುವ ಮೆಸ್ಸಿ ಎಡಗಾಲಿಗೆ ಇರುವ ಇನ್ಶೂರೆನ್ಸ್ ಎಷ್ಟು ಸಾವಿರ ಕೋಟಿ ಗೊತ್ತೇ??

ಈ ಇಬ್ಬರು ಆಟಗಾರರ ಬಗ್ಗೆ ಮಾತನಾಡಿರುವ ರಾಬಿನ್ ಉತ್ತಪ್ಪ (Robin Uthappa) ಅವರು, “ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಅವರು ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ. ಆದರೆ ಅವರ ಜೊತೆಗೆ ಸಂಜು ಸ್ಯಾಮ್ಸನ್ (Sanju Samson) ಅಥವಾ ದೀಪಕ್ ಹೂಡಾ (Deepak Hooda) ಫಿನಿಷರ್ ಆಗಿರಬೇಕು ಎನ್ನುವುದು ನನ್ನ ಭಾವನೆ. 2024ರಲ್ಲಿ ನಡೆಯುವ ಮುಂದಿನ ಟಿ2 ಪಂದ್ಯಕ್ಕೆ ಸಿದ್ಧಗೊಳಿಸಬೇಕು. ಅವರಿಬ್ಬರಿಗೆ ಹೆಚ್ಚು ಪಂದ್ಯಗಳನ್ನು ನೀಡಿದರೆ, ಗೆಲ್ಲುವ ಸಾಧ್ಯತೆ ಹೆಚ್ಚಿದೆ. 6ನೇ ಕ್ರಮಾಂಕದ ಬ್ಯಾಟಿಂಗ್ ಸುಲಭದ ವಿಷಯ ಅಲ್ಲ, ಎಲ್ಲರೂ ಆ ಕ್ರಮಾಂಕದಲ್ಲಿ ಸಕ್ಸಸ್ ಕಾಣಲು ಸಾಧ್ಯವಿಲ್ಲ. ಹಾಗಾಗಿ ಆಯ್ಕೆ ಸಮಿತಿ, ಬಹಳ ಹುಷಾರಾಗಿ ಜಾಗ್ರತೆ ವಹಿಸಿ, ತಾಳ್ಮೆಯಿಂದ ಆಯ್ಕೆ ಮಾಡಬೇಕು. ಟಿ20 ಯಲ್ಲಿ 4 ಮತ್ತು 7ನೇ ಕ್ರಮಾಂಕದ ಬ್ಯಾಟಿಂಗ್ ಬಹಳ ಕಷ್ಟ ಎಂದು ನನಗೆ ಅನ್ನಿಸುತ್ತದೆ..” ಎಂದು ಹೇಳಿದ್ದಾರೆ ರಾಬಿನ್ ಉತ್ತಪ್ಪ.. ಇದನ್ನು ಓದಿ..Cricket News: ವಿಶ್ವಕಪ್ ಸೋಲಿನ ನಂತರ ಕೊನೆಗೂ ಎಚ್ಚೆತ್ತ ಬಿಸಿಸಿಐ: ಮೊದಲ ಬಾರಿಗೆ ತೆಗೆದುಕೊಳ್ತು ಕಠಿಣ ನಿರ್ಧಾರ. ಗೇಟ್ ಪಾಸ್ ನೀಡಿದ್ದು ಯಾರಿಗೆ ಗೊತ್ತೇ?