Cricket News: ವಿಶ್ವಕಪ್ ಸೋಲಿನ ನಂತರ ಕೊನೆಗೂ ಎಚ್ಚೆತ್ತ ಬಿಸಿಸಿಐ: ಮೊದಲ ಬಾರಿಗೆ ತೆಗೆದುಕೊಳ್ತು ಕಠಿಣ ನಿರ್ಧಾರ. ಗೇಟ್ ಪಾಸ್ ನೀಡಿದ್ದು ಯಾರಿಗೆ ಗೊತ್ತೇ?
Cricket News: ವಿಶ್ವಕಪ್ ಸೋಲಿನ ನಂತರ ಕೊನೆಗೂ ಎಚ್ಚೆತ್ತ ಬಿಸಿಸಿಐ: ಮೊದಲ ಬಾರಿಗೆ ತೆಗೆದುಕೊಳ್ತು ಕಠಿಣ ನಿರ್ಧಾರ. ಗೇಟ್ ಪಾಸ್ ನೀಡಿದ್ದು ಯಾರಿಗೆ ಗೊತ್ತೇ?
Cricket News: ಟಿ20 ವಿಶ್ವಕಪ್ (T20 World Cup) ನಲ್ಲಿ ಭಾರತ ತಂಡವು (Team India) ಸೆಮಿಫೈನಲ್ಸ್ ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತಿತು. ಈ ಸೋಲಿನ ಬಳಿಕ ಟೀಮ್ ಇಂಡಿಯಾದಲ್ಲಿ ಬದಲಾವಣೆ ಮಾಡಬೇಕು ಎನ್ನುವುದು ಹಲವರ ಅಭಿಪ್ರಾಯವಾಗಿತ್ತು, ಇದರ ಬಗ್ಗೆ ಈಗ ಬಿಸಿಸಿಐ (BCCI) ಮಹತ್ವದ ನಿರ್ಧಾರ ಒಂದನ್ನು ತೆಗೆದುಕೊಂಡಿದೆ. ಬದಲಾವಣೆಯ ಮೊದಲ ಹಂತವಾಗಿ ಬಿಸಿಸಿಐ ಕೈಗೊಂಡಿರುವ ನಿರ್ಧಾರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಆ ನಿರ್ಧಾರ ಏನು? ಬಿಸಿಸಿಐ ತೆಗೆದು ಹಾಕಿದ್ದು ಯಾರನ್ನ? ತಿಳಿಸುತ್ತೇವೆ ನೋಡಿ..
ಬಿಸಿಸಿಐ ನ ಆಯ್ಕೆ ಸಮಿತಿ ಚೇತನ್ ಶರ್ಮಾ (Chetan Sharma) ನೇತೃತ್ವದ ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಬಿಸಿಸಿಐ ಈಗ ವಜಾ ಗೊಳಿಸಿದೆ ಎಂದು ಮಾಹಿತಿ ಸಿಕ್ಕಿದೆ. ಇದರ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಬಿಸಿಸಿಐ, ಆಯ್ಕೆ ಸಮಿತಿಗೆ ಹಿರಿಯ ಪುರುಷರ ಆಯ್ಕೆಗಾರರ ಹುದ್ದೆಗೆ ಆಹ್ವಾನ ನೀಡಿದೆ. ಈ ಪೋಸ್ಟ್ ಗೆ ಅಪ್ಲೈ ಮಾಡಲು ಕೆಲವು ಮಾನದಂಡಗಳನ್ನು ಸಹ ತಿಳಿಸಿದ್ದಾರೆ. ಇಲ್ಲಿನ ವಿಶೇಷ ಮಾನದಂಡ ಏನು ಎಂದರೆ, ಒಟ್ಟಾರೆಯಾಗಿ 5 ವರ್ಷಗಳ ಕಾಲ ಯಾವುದೇ ಕ್ರಿಕೆಟ್ ಸಮಿತಿಯಲ್ಲಿ (Cricket Committee) ಇರುವವರು ಈ ಹುದ್ದೆಗೆ ಅರ್ಹತೆ ಪಡೆಯುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಜೊತೆಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 28, ಸಂಜೆ 6 ಗಂಟೆಗೆ. ಇದನ್ನು ಓದಿ.. FIFA World Cup 2022: ಫುಟ್ ವಿಶ್ವಕಪ್ ನಲ್ಲಿ ಆಡುತ್ತಿರುವ ಮೆಸ್ಸಿ ಎಡಗಾಲಿಗೆ ಇರುವ ಇನ್ಶೂರೆನ್ಸ್ ಎಷ್ಟು ಸಾವಿರ ಕೋಟಿ ಗೊತ್ತೇ??
ಆಯ್ಕೆ ಸಮಿತಿಯಲ್ಲಿ ಐದು ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸುವವರು ಕನಿಷ್ಠ 7 ಟೆಸ್ಟ್ ಪಂದ್ಯಗಳು ಅಥವಾ 30 ಪ್ರಥಮ ದರ್ಜೆ ಪಂದ್ಯಗಳು ಅಥವಾ ಓಡಿಐ ಪಂದ್ಯಗಳನ್ನು ಆಡಿರಬೇಕು. ಹಾಗೂ ಕನಿಷ್ಠ 5 ವರ್ಷಗಳ ಹಿಂದೆ ಕ್ರಿಕೆಟ್ ಇಂದ ನಿವೃತ್ತಿ ಪಡೆದಿರಬೇಕು ಎನ್ನುವ ಮಾನದಂಡಗಳನ್ನು ಬಿಸಿಸಿಐ ಹಾಕಿದೆ. ಭಾರತ ತಂಡದ ಸೋಲಿನ ನಂತರ ಈ ಬದಲಾವಣೆಗೆ ಭಾರಿ ಮಹತ್ವ ಇದೆ. ಹಾಗಾಗಿ ಬಿಸಿಸಿಐ ಸಂಪೂರ್ಣವಾಗಿ ತಂಡವನ್ನು ಬದಲಾಯಿಸಬೇಕು ಎಂದು ಈ ನಿರ್ಧಾರ ತೆಗೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನು ಏನೆಲ್ಲಾ ಬದಲಾವಣೆಗಳು ನಡೆಯಲಿದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Business Kannada: ಕೇವಲ 25 ಸಾವಿರ ರೂಪಾಯಿಯನ್ನು ಬಂಡವಾಳ ಹಾಕಿ, ಬರೋಬ್ಬರಿ 30 ಲಕ್ಷ ಗಳಿಸುವ ಸುಲಭ ಬಿಸಿನೆಸ್ ಯಾವುದು ಗೊತ್ತೇ??