Cricket News: ಒಂದು ಕಡೆ ಆಯ್ಕೆ ಸಮಿತಿಗೆ ಕೊಕ್: ಮತ್ತೊಂದು ಕಡೆ ಭಾರತಕ್ಕೆ ಮೇಜರ್ ಸರ್ಜರಿ ಮಾಡಲು ಮುಂದಾದ ಬಿಸಿಸಿಐ. ಹೊರಹೋಗುತ್ತಿರುವುದು ಯಾರ್ಯಾರು ಗೊತ್ತೆ?

Cricket News: ಒಂದು ಕಡೆ ಆಯ್ಕೆ ಸಮಿತಿಗೆ ಕೊಕ್: ಮತ್ತೊಂದು ಕಡೆ ಭಾರತಕ್ಕೆ ಮೇಜರ್ ಸರ್ಜರಿ ಮಾಡಲು ಮುಂದಾದ ಬಿಸಿಸಿಐ. ಹೊರಹೋಗುತ್ತಿರುವುದು ಯಾರ್ಯಾರು ಗೊತ್ತೆ?

Cricket News: ಭಾರತ ತಂಡವು (Team India) ಟಿ20 ವಿಶ್ವಕಪ್ (T20 World Cup) ನಲ್ಲಿ ಸೋತ ನಂತರ ತಂಡದ ಮೇಲೆ ಭಾರಿ ಟೀಕೆಗಳು ವ್ಯಕ್ತವಾಗುತ್ತಿದೆ. ಎಲ್ಲರೂ ಆಯ್ಕೆ ಸಮಿತಿ ಮತ್ತು ಬಿಸಿಸಿಐ (BCCI) ಅನ್ನು ದೂಷಿಸುತ್ತಿದ್ದಾರೆ. ಹಾಗಾಗಿ ಬಿಸಿಸಿಐ ಈಗ ಭಾರತ ತಂಡದಲ್ಲಿ ಸಂಪೂರ್ಣ ಬದಲಾವಣೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದು, ಮೊದಲಾಗಿ ಇಡೀ ಆಯ್ಕೆ ಸಮಿತಿಯನ್ನೇ ಬದಲಾಯಿಸಲಿದೆ, ಚೇತನ್ ಶರ್ಮಾ (Chetan Sharma) ನೇತೃತ್ವದ ಆಯ್ಕೆ ಸಮಿತಿಯನ್ನು ಬಿಸಿಸಿಐ ವಜಾಗೊಳಿಸಿದೆ. ಇದೀಗ ಹೊಸದಾಗಿ ಆಯ್ಕೆ ಸಮಿತಿ ರಚಿಸಲು ಅರ್ಜಿಯನ್ನು ಆಹ್ವಾನಿಸಿದೆ ಬಿಸಿಸಿಐ. ಇದಷ್ಟೇ ಅಲ್ಲದೆ ತಂಡವನ್ನು ಪೂರ್ತಿಯಾಗಿ ಬದಲಾವಣೆ ಮಾಡುವ ಯೋಜನೆ ಹಾಕಿಕೊಂಡಿದೆ.

ರೋಹಿತ್ ಶರ್ಮಾ (Rohit Sharma) ಅವರು ಕ್ರಿಕೆಟ್ ನಲ್ಲಿ ಎಲ್ಲಾ ಮೂರು ವಿಭಾಗದ ಕ್ರಿಕೆಟ್ ಗೆ ನಾಯಕನಾಗಿದ್ದರು, ಇದರಿಂದ ರೋಹಿತ್ ಶರ್ಮಾ ಅವರಿಗೂ ಒತ್ತಡವಾಗುತ್ತಿರಬಹುದು, ಹಾಗೆಯೇ ರೋಹಿತ್ ಅವರು ನಾಯಕನಾಗಿ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ, ಜೊತೆಗೆ ಮೈದಾನದಲ್ಲಿಯೇ ಇವರು ಒಂದೆರಡು ಸಾರಿ ಅಸಮಾಧಾನಗೊಂಡಿದ್ದಾರೆ. ಇದರಿಂದಾಗಿ ಯುವ ಆಟಗಾರರ ಆತ್ಮವಿಶ್ವಾಸ ಕುಗ್ಗಬಹುದು ಎನ್ನುವ ಕಾರಣಕ್ಕೆ ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ಸಿ ಇಂದ ಕೆಳಗಿಳಿಸುವ ಸಾಧ್ಯತೆ ಹೆಚ್ಚಿದೆ. ಹೀಗಿದ್ದಾಗ ರೋಹಿತ್ ಶರ್ಮಾ ಅವರನ್ನು ಏಕದಿನ ಕ್ರಿಕೆಟ್ ತಂಡಕ್ಕೆ ನಾಯಕನನ್ನಾಗಿ ಮಾಡಿ, ಟಿ20 ತಂಡಕ್ಕೆ ಹೊಸ ಕ್ಯಾಪ್ಟನ್ ಆಯ್ಕೆ ಮಾಡುವ ಪ್ಲಾನ್ ಮಾಡಿದೆ ಬಿಸಿಸಿಐ. ಇದನ್ನು ಓದಿ.. Cricket News: ವಿಶ್ವಕಪ್ ಸೋಲಿನ ನಂತರ ಕೊನೆಗೂ ಎಚ್ಚೆತ್ತ ಬಿಸಿಸಿಐ: ಮೊದಲ ಬಾರಿಗೆ ತೆಗೆದುಕೊಳ್ತು ಕಠಿಣ ನಿರ್ಧಾರ. ಗೇಟ್ ಪಾಸ್ ನೀಡಿದ್ದು ಯಾರಿಗೆ ಗೊತ್ತೇ?

ಇನ್ನುಮುಂದೆ ವೈಟ್ ಬಾಲ್ ಮತ್ತು ರೆಡ್ ಬಾಲ್ ಈ ಎರಡು ರೀತಿಯ ಪಂದ್ಯಕ್ಕೂ ಬೇರೆ ಬೇರೆ ಕ್ಯಾಪ್ಟನ್ ಗಳು ಇರಲಿದ್ದಾರೆ. 2023ರ ಜನವರಿಯಲ್ಲಿ ನಡೆಯಲಿರುವ ಶ್ರೀಲಂಕಾ (India vs Srilanka) ವಿರುದ್ಧದ ಸೀರೀಸ್ ಇಂದ ಹೊಸ ಕ್ಯಾಪ್ಟನ್ ಬರಬಹುದು ಎನ್ನಲಾಗುತ್ತಿದ್ದು, ಹಾರ್ದಿಕ್ ಪಾಂಡ್ಯ (Hardik Pandya) ಅವರು ಟಿ20 ತಂಡಕ್ಕೆ ಮುಂದಿನ ಕ್ಯಾಪ್ಟನ್ ಆಗುತ್ತಾರೆ ಎನ್ನಲಾಗುತ್ತಿದೆ. ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿ ನಡೆಯುತ್ತಿರುವ ಸರಣಿ ಪಂದ್ಯಗಳಿಗೂ ರೋಹಿತ್ ಶರ್ಮ ಅವರೇ ನಾಯಕನಾಗಿದ್ದಾರೆ. ಇನ್ನು ಹಿರಿಯ ಆಟಗಾರರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಹೆಚ್ಚಿದೆ. ರೋಹಿತ್ ಶರ್ಮಾ, ವಿರಾಟ್ ಕೋಹ್ಲಿ (Virat Kohli), ದಿನೇಶ್ ಕಾರ್ತಿಕ್ (Dinesh Karthik) ಮತ್ತು ರವಿಚಂದ್ರನ್ ಅಶ್ವಿನ್ (Ravichandran Ashwin) ಅವರನ್ನು ತಂಡದಲ್ಲಿ ಇರಿಸಿಕೊಳ್ಳುವ ಸಾಧ್ಯತೆ ಕಡಿಮೆ. ಒಟ್ಟಿನಲ್ಲಿ ಮುಂದಿನ ವಿಶ್ವಕಪ್ ವೇಳೆಗೆ ಇಡೀ ತಂಡ ಬದಲಾಗುವ ಹಾಗೆ ತೋರುತ್ತಿದೆ. ಇದನ್ನು ಓದಿ.. FIFA World Cup 2022: ಫುಟ್ ವಿಶ್ವಕಪ್ ನಲ್ಲಿ ಆಡುತ್ತಿರುವ ಮೆಸ್ಸಿ ಎಡಗಾಲಿಗೆ ಇರುವ ಇನ್ಶೂರೆನ್ಸ್ ಎಷ್ಟು ಸಾವಿರ ಕೋಟಿ ಗೊತ್ತೇ??