Cricket News: ದಿನೇಶ್ ಕಾರ್ತಿಕ್ ಇನ್ನೆಂದು ತಂಡಕ್ಕೆ ಆಡದೆ ಇರಬಹುದು ಎಂದ ರಾಬಿನ್ ಉತ್ತಪ್ಪ: ಪಂತ್ ಯಾವಾಗ ಆಡಬೇಕು ಅಂತೇ ಗೊತ್ತೇ?

Cricket News: ದಿನೇಶ್ ಕಾರ್ತಿಕ್ ಇನ್ನೆಂದು ತಂಡಕ್ಕೆ ಆಡದೆ ಇರಬಹುದು ಎಂದ ರಾಬಿನ್ ಉತ್ತಪ್ಪ: ಪಂತ್ ಯಾವಾಗ ಆಡಬೇಕು ಅಂತೇ ಗೊತ್ತೇ?

Cricket News: ಭಾರತ ಕ್ರಿಕೆಟ್ (Team India) ತಂಡವು ಟಿ20 ವಿಶ್ವಕಪ್ (T20 World Cup) ಸೆಮಿಫೈನಲ್ಸ್ ನಲ್ಲಿ ಸೋತು ಹೊರಬಂದ ನಂತರ ತಂಡದ ಮೇಲೆ ಎಲ್ಲಾ ಅಭಿಮಾನಿಗಳಿಗೂ ಬಹಳ ನಿರಾಶೆ ಆಗಿದ್ದು, ಕ್ರಿಕೆಟ್ ತಜ್ಞರು ಮತ್ತು ಹಿರಿಯ ಕ್ರಿಕೆಟ್ ಆಟಗಾರರು ಭಾರತ ಕ್ರಿಕೆಟ್ ತಂಡದಲ್ಲಿ ಬದಲಾವಣೆಗಳು ಆಗಬೇಕು ಎಂದು ಬಯಸುತ್ತಿದ್ದಾರೆ. ಇದಕ್ಕೆ ಕೆಲವು ಹಿರಿಯ ಆಟಗಾರರು ಸಲಹೆಗಳನ್ನು ಸಹ ಕೊಡುತ್ತಿದ್ದಾರೆ. ಇದೀಗ ಟೀಮ್ ಇಂಡಿಯಾ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿರುವ ವಿಚಾರ ಎಂದರೆ, ಅದು ದಿನೇಶ್ ಕಾರ್ತಿಕ್ (Dinesh Karthik) ಮತ್ತು ರಿಷಬ್ ಪಂತ್ (Rishab Pant) ಅವರ ಸ್ಥಾನದ ಬಗ್ಗೆ. ಇವರಿಬ್ಬರು ಕೂಡ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಗಳಾಗಿದ್ದಾರೆ. ಒಬ್ಬರು ಹಿರಿಯ ಆಟಗಾರ ಮತ್ತೊಬ್ಬರು ಯುವ ಆಟಗಾರ.

ಟಿ20 ವಿಶ್ವಕಪ್ ನಲ್ಲಿ ಇವರಿಬ್ಬರು ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ಸಿಕ್ಕರು ರನ್ಸ್ ಗಳಿಸಲು ಸಾಧ್ಯವಾಗಲಿಲ್ಲ, ರಿಷಬ್ ಪಂತ್ ಅವರು ಕೂಡ ಸಿಕ್ಕ ಎರಡು ಅವಕಾಶಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ವಿಶ್ವಕಪ್ ನಲ್ಲಿ ವಿಫಲರಾಗುತ್ತಿರುವ ರಿಷಬ್ ಪಂತ್ ಐಪಿಎಲ್ (IPL) ನಲ್ಲಿ ಉತ್ತಮ ಪ್ರದರ್ಶನವನ್ನೇ ನೀಡುತ್ತಿದ್ದಾರೆ. ಇದೀಗ ಭಾರತ ತಂಡದ ಮಾಜಿ ಪ್ಲೇಯರ್ ರಾಬಿನ್ ಉತ್ತಪ್ಪ (Robin Uthappa) ಅವರು ಮಾತನಾಡಿದ್ದಾರೆ, “2024ರಲ್ಲಿ ಮುಂದಿನ ಟಿ20 ವಿಶ್ವಕಪ್ ನಡೆಯುತ್ತದೆ, ಆಗಿನ ಪರಿಸ್ಥಿತಿಗಳ ಬಗ್ಗೆ ಯೋಚನೆ ಮಾಡಿ, ರಿಷಬ್ ಪಂತ್ ಅವರಿಗೆ ಅಗ್ರಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ನೀಡಬೇಕು. ರಿಷಬ್ ಪಂತ್ ಅವರು ಐಪಿಎಲ್ ನಲ್ಲಿ ನೀಡಿರುವ ಪ್ರದರ್ಶನ ನೋಡಿದರೆ.. ಇದನ್ನು ಓದಿ.. Cricket News: ಭಾರತಕ್ಕೆ ಹೊಸ ನಾಯಕನ ಅವಶ್ಯಕತೆ ಇಂದ ಎಂದ ರವಿ ಶಾಸ್ತ್ರೀ: ಆ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

ರಿಷಬ್ ಪಂತ್ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸೂಕ್ತವಾಗಿದ್ದಾರೆ ಮತ್ತು ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಇವರನ್ನು ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಳಿಸಿದರೆ, ಮ್ಯಾಚ್ ವಿನ್ನರ್ ಆಗುತ್ತಾರೆ, ಆ ಅವಕಾಶವನ್ನು ಭಾರತ ತಂಡದ ಮ್ಯಾನೇಜ್ಮೆಂಟ್ ನೀಡಬೇಕು..” ಎಂದಿದ್ದಾರೆ ರಾಬಿನ್ ಉತ್ತಪ್ಪ. ಹಾಗೆಯೇ ದಿನೇಶ್ ಕಾರ್ತಿಕ್ ಅವರ ಬಗ್ಗೆ ಮಾತನಾಡಿ, “ದಿನೇಶ್ ಕಾರ್ತಿಕ್ ಅವರು ಮತ್ತೊಮ್ಮೆ ಭಾರತದ ಪರವಾಗಿ ಆಡದೆ ಇರಬಹುದು ಎಂದು ನನಗೆ ಅನ್ನಿಸುತ್ತದೆ. ಟೀಮ್ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ಸ್ಥಾನ ಸಿಗಬಹುದು. ರಾಹುಲ್ ತ್ರಿಪಾಠಿ (Rahul Tripathi) ಮತ್ತು ದೀಪಕ್ ಹೂಡಾ (Deepak Hooda) ಅವರು ಕೂಡ ಫಿನಿಷರ್ ಪಾತ್ರ ನಿಭಾಯಿಸಲು ಸೂಕ್ತವಾಗಿದ್ದಾರೆ. ” ಎಂದಿದ್ದಾರೆ ರಾಬಿನ್ ಉತ್ತಪ್ಪ. ಇದನ್ನು ಓದಿ.. Cricket News: ಅಸಲಿಗೆ ಧೋನಿಯ ಸ್ಥಾನ ಭಾರತ ತಂಡದಲ್ಲಿ ತುಂಬುವವರು ಯಾರು ಗೊತ್ತೇ?? ಪಂತ್-ಇಶಾನ್ ಅಲ್ಲವೇ ಅಲ್ಲ. ಮತ್ಯಾರು ಗೊತ್ತೇ??