ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ಭಾರತಕ್ಕೆ ಹೊಸ ನಾಯಕನ ಅವಶ್ಯಕತೆ ಇದೆ ಎಂದ ರವಿ ಶಾಸ್ತ್ರೀ: ಆ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

3,371

Get real time updates directly on you device, subscribe now.

Cricket News: ಭಾರತ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ (T20 World Cup) ನಲ್ಲಿ ಸೆಮಿಫೈನಲ್ಸ್ ಹಂತಕ್ಕೆ ಬಂದು ಸೋತ ನಂತರ ತಂಡದಲ್ಲಿ ಹಲವು ಬದಲಾವಣೆ ಮಾಡಬೇಕು ಎಂದು ನೆಟ್ಟಿಗರು, ಕ್ರಿಕೆಟ್ ಅಭಿಮಾನಿಗಳು, ಕ್ರಿಕೆಟ್ ತಜ್ಞರು, ಮಾಜಿ ಕ್ರಿಕೆಟಿಗರು ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮೊದಲನೆಯದಾಗಿ ತಂಡದ ಕ್ಯಾಪ್ಟನ್ ಬದಲಾಗಬೇಕು ಎನ್ನುವುದು ಹಲವರ ಅಭಿಪ್ರಾಯ ಆಗಿದೆ, ಇದರ ಬಗ್ಗೆ ಈಗ ಭಾರತ ತಂಡದ ಮಾಜಿ ಪ್ಲೇಯರ್ ಕೋಚ್ ಕೂಡ ಆಗಿದ್ದ ರವಿ ಶಾಸ್ತ್ರಿ (Ravi Shastri) ಅವರು ಮಾತನಾಡಿದ್ದಾರೆ.

ಕ್ಯಾಪ್ಟನ್ಸಿ ಬದಲಾಗಬೇಕು ಎಂದೇ ರವಿ ಶಾಸ್ತ್ರಿ ಅವರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಟಿ20 ಪಂದ್ಯಗಳಲ್ಲಿ ಹೊಸ ಕ್ಯಾಪ್ಟನ್ ಆಯ್ಕೆ ಮಾಡುವುದು ಅಪಾಯವೇನಲ್ಲ. ಒಬ್ಬರೇ ಆಟಗಾರ ಮೂರು ಮಾದರಿಯ ಕ್ರಿಕೆಟ್ ಅನ್ನು ಆಡುವುದು ಸುಲಭವಲ್ಲ. ರೋಹಿತ್ ಶರ್ಮಾ (Rohit Sharma) ಅವರು ಟೆಸ್ಟ್ ಮತ್ತು ಓಡಿಐ (ODI) ತಂಡವನ್ನು ಮುನ್ನಡೆಸುತ್ತಿದ್ದರೆ, ಟಿ20 ಪಂದ್ಯಗಳನ್ನು ಮುನ್ನಡೆಸಲು ಹೊಸ ಕ್ಯಾಪ್ಟನ್ ಅನ್ನು ಆಯ್ಕೆ ಮಾಡಬಹುದು, ಆ ಕ್ಯಾಪ್ಟನ್ ಹೆಸರು ಹಾರ್ದಿಕ್ ಪಾಂಡ್ಯ (Hardik Pandya) ಎನ್ನುವುದಾದರೆ, ಹಾಗೆಯೇ ಇರಲಿ..” ಎಂದು ಹೇಳಿದ್ದಾರೆ ರವಿ ಶಾಸ್ತ್ರಿ. ಈ ಮೂಲಕ ಹಾರ್ದಿಕ್ ಪಾಂಡ್ಯ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದ್ದಾರೆ. ಇದನ್ನು ಓದಿ.. Cricket News: ಅಸಲಿಗೆ ಧೋನಿಯ ಸ್ಥಾನ ಭಾರತ ತಂಡದಲ್ಲಿ ತುಂಬುವವರು ಯಾರು ಗೊತ್ತೇ?? ಪಂತ್-ಇಶಾನ್ ಅಲ್ಲವೇ ಅಲ್ಲ. ಮತ್ಯಾರು ಗೊತ್ತೇ??

ಕೋಚ್ ಬಗ್ಗೆ ಕೂಡ ಮಾತನಾಡಿದ ರವಿ ಶಾಸ್ತ್ರಿ ಅವರು, “ಬ್ರೇಕ್ ಮೇಲೆ ನನಗೆ ನಂಬಿಕೆ ಇಲ್ಲ. ನನ್ನ ತಂಡ ಮತ್ತು ಆಟಗಾರರನ್ನು ನಾನು ಅರ್ಥಮಾಡಿಕೊಳ್ಳಬೇಕು, ಅದನ್ನು ಕಂಟ್ರೋಲ್ ನಲ್ಲಿ ಇಡಬೇಕು. ಪದೇ ಪದೇ ಬ್ರೇಕ್ ಯಾಕೆ ಬೇಕು? ಐಪಿಎಲ್ (IPL) ಸಮಯದಲ್ಲಿ ಮೂರು ತಿಂಗಳು ಬ್ರೇಕ್ ಸಿಗುತ್ತದೆ. ಅದೇ ಸಾಕು ಎಂದು ನನಗೆ ಅನ್ನಿಸುತ್ತದೆ.. ” ಎಂದಿದ್ದಾರೆ. ಹಲವರು ಇದೇ ರೀತಿಯ ಅಭಿಪ್ರಾಯಗಳನ್ನೇ ವ್ಯಕ್ತಪಡಿಸುತ್ತಿದ್ದು, ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Cricket News: ಕೆ ಎಲ್ ರಾಹುಲ್ ರವರ ಆರಂಭಿಕ ಸ್ಥಾನಕ್ಕೆ ಬಾರಿ ಪೈಪೋಟಿ: ಮಹತ್ವದ ಹೆಜ್ಜೆ ಇಡಲು ಮುಂದಾದ ಕೋಚ್ ಲಕ್ಷ್ಮಣ್. ನಡೆಸುತ್ತಿರುವ ಆಲೋಚನೆ ಏನು ಗೊತ್ತೇ??

Get real time updates directly on you device, subscribe now.