Cricket News: ಅಸಲಿಗೆ ಧೋನಿಯ ಸ್ಥಾನ ಭಾರತ ತಂಡದಲ್ಲಿ ತುಂಬುವವರು ಯಾರು ಗೊತ್ತೇ?? ಪಂತ್-ಇಶಾನ್ ಅಲ್ಲವೇ ಅಲ್ಲ. ಮತ್ಯಾರು ಗೊತ್ತೇ??

Cricket News: ಅಸಲಿಗೆ ಧೋನಿಯ ಸ್ಥಾನ ಭಾರತ ತಂಡದಲ್ಲಿ ತುಂಬುವವರು ಯಾರು ಗೊತ್ತೇ?? ಪಂತ್-ಇಶಾನ್ ಅಲ್ಲವೇ ಅಲ್ಲ. ಮತ್ಯಾರು ಗೊತ್ತೇ??

Cricket News: ಟಿ20 ವಿಶ್ವಕಪ್ (T20 World Cup) ನಲ್ಲಿ ಭಾರತ ತಂಡ ಸೋಲು ಕಂಡ ನಂತರ ತಂಡದಲ್ಲಿರುವ ತೊಂದರೆಗಳು ಏನೇನು ಎನ್ನುವುದು ಗೊತ್ತಾಗಿದೆ. 2024ರಲ್ಲಿ ನಡೆಯುವ ಮುಂದಿನ ವಿಶ್ವಕಪ್ ಗೆ ಈಗಿನಿಂದಲೇ ಬಲಿಷ್ಠವಾದ ತಂಡ ಕಟ್ಟುವುದು ಒಳ್ಳೆಯದು ಎನ್ನುವುದು ಎಲ್ಲರ ಅಭಿಪ್ರಾಯ. ಪ್ರಸ್ತುತ ಭಾರತ ತಂಡವು ಓಪನರ್ ಬ್ಯಾಟ್ಸ್ಮನ್, ಬೌಲಿಂಗ್ ಮತ್ತು ಫೀಲ್ಡಿಂಗ್ ನಲ್ಲಿ ತೊಂದರೆ ಅನುಭವಿಸುತ್ತಿದೆ. ನಮ್ಮಲ್ಲಿ ಒಬ್ಬ ಒಳ್ಳೆಯ ಫಿನಿಶರ್ ಅಗತ್ಯ ಸಹ ಇದೆ.. ಎಂಎಸ್ ಧೋನಿ (M S Dhoni) ಅವರ ನಂತರ ಅವರ ರೇಂಜ್ ಗೆ ಬರಬಹುದಾದ ಫಿನಿಶರ್ ನಮ್ಮ ತಂಡದಲ್ಲಿ ಕಾಣಿಸಿಕೊಂಡಿಲ್ಲ.

ಮೊದಲಿಗೆ ರಿಷಬ್ ಪಂತ್ (Rishab Pant) ಅವರು ಧೋನಿ ಅವರ ಸ್ಥಾನವನ್ನು ತುಂಬುತ್ತಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು, ಆದರೆ ರಿಷಬ್ ಪಂತ್ ಅವರು ತಮಗೆ ಸಿಗುತ್ತಿರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ವಿಶ್ವಕಪ್ ನಲ್ಲಿ ವಿಕೆಟ್ ಕೀಪರ್ ಕ್ಯಾಪ್ಟನ್ ಆಗಿ, ದಿನೇಶ್ ಕಾರ್ತಿಕ್ (Dinesh Karthik) ಮತ್ತು ರಿಷಬ್ ಪಂತ್ ಅವರ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು, ಆದರೆ ಇಬ್ಬರು ಕೂಡ ಉತ್ತಮ ಫಲಿತಾಂಶ ನೀಡಲಿಲ್ಲ. ದಿನೇಶ್ ಕಾರ್ತಿಕ್ ಅವರ ಕೆರಿಯರ್ ಇಲ್ಲಿಗೆ ಮುಗಿದ ಹಾಗೆ ಎಂದು ತೋರುತ್ತಿದೆ. ಇತ್ತ ಪಂತ್ ಅವರು ಟೆಸ್ಟ್ ಕ್ರಿಕೆಟ್ (Test Cricket) ಹೊರತುಪಡಿಸಿ, ಟಿ20 (T20) ಮತ್ತು ಓಡಿಐ (ODI) ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಆದರೆ ರಿಷಬ್ ಪಂತ್ ಅವರಿಗೆ ಮುಂದೆ ನಡೆಯಲಿರುವ ನ್ಯೂಜಿಲೆಂಡ್ (New Zealand) ಸೀರೀಸ್ ನಲ್ಲಿ ಅವಕಾಶ ನೀಡಲಾಗಿದೆ. ಇದನ್ನು ಓದಿ.. Cricket News: ಕೆ ಎಲ್ ರಾಹುಲ್ ರವರ ಆರಂಭಿಕ ಸ್ಥಾನಕ್ಕೆ ಬಾರಿ ಪೈಪೋಟಿ: ಮಹತ್ವದ ಹೆಜ್ಜೆ ಇಡಲು ಮುಂದಾದ ಕೋಚ್ ಲಕ್ಷ್ಮಣ್. ನಡೆಸುತ್ತಿರುವ ಆಲೋಚನೆ ಏನು ಗೊತ್ತೇ??

ಅದನ್ನು ಪಂತ್ ಅವರು ಹೇಗೆ ಬಳಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ. ಪಂತ್ ಅವರ ಕಥೆ ಹೀಗುರುವಾಗ, ಧೋನಿ ಅವರ ಸ್ಥಾನವನ್ನು ತುಂಬಬಲ್ಲ ಆಟಗಾರ ಎಂದು ಸಂಜು ಸ್ಯಾಮ್ಸನ್ (Sanju Samson) ಅವರನ್ನು ಆಯ್ಕೆ ಮಾಡಲಾಗುತ್ತಿದೆ. ಸಂಜು ಅವರು ಕೂಡ ಹಲವು ಮ್ಯಾಚ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಇವರಿಗೆ ಸರಿಯಾದ ಅವಕಾಶಗಳು ಸಿಗುತ್ತಿಲ್ಲ. ಪ್ರತಿಭೆ ಇದ್ದರು ಕೂಡ ಸಂಜು ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿಕೊಂಡಿರಲಿಲ್ಲ. ಹಾಗಾಗಿ ಇವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಮುಂದಿನ ಸೀರೀಸ್ ನಲ್ಲಿ ಇವರಿಗೆ ಅವಕಾಶ ನೀಡಲಾಗಿದ್ದು, ಅದನ್ನು ಸದುಪಯೋಗ ಪಡಿಸಿಕೊಂಡರೆ, ನ್ಯಾಷನಲ್ ಟೀಮ್ ನಲ್ಲಿ ಧೋನಿ ಅವರ ಸ್ಥಾನ ತುಂಬುವುದರಲ್ಲಿ ಸಂಶಯವಿಲ್ಲ. ಇದನ್ನು ಓದಿ.. Cricket News: ಸುಖಾಸುಮ್ಮನೆ ಭಾರತವನ್ನು ಕೆಣಕುತ್ತಿರುವ ಮಾಜಿ ಇಂಗ್ಲೆಂಡ್ ನಾಯಕನಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ಪಾಂಡ್ಯ