Cricket News: ಸುಖಾಸುಮ್ಮನೆ ಭಾರತವನ್ನು ಕೆಣಕುತ್ತಿರುವ ಮಾಜಿ ಇಂಗ್ಲೆಂಡ್ ನಾಯಕನಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ಪಾಂಡ್ಯ

Cricket News: ಸುಖಾಸುಮ್ಮನೆ ಭಾರತವನ್ನು ಕೆಣಕುತ್ತಿರುವ ಮಾಜಿ ಇಂಗ್ಲೆಂಡ್ ನಾಯಕನಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ಪಾಂಡ್ಯ

Cricket News: ಟಿ20 ವಿಶ್ವಕಪ್ (T20 World Cup) ನಲ್ಲಿ ಭಾರತ ತಂಡವು (Team India) ಸೆಮಿಫೈನಲ್ಸ್ ಹಂತದವರೆಗು ಬಂದು ಸೋತುಹೋಯಿತು. ಇಂಗ್ಲೆಂಡ್ ವಿರುದ್ಧ (India vs England) 10 ವಿಕೆಟ್ಸ್ ಗಳ ಹೀನಾಯ ಸೋಲು ಕಂಡ ನಂತರ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಆಗಿದ್ದಂತೂ ನಿಜ. ಆದರೆ ಈಗ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ (Michael Vaughan) ಭಾರತ ತಂಡವನ್ನು ಹೀಯಾಳಿಸಿ ಮಾತನಾಡಿದ್ದು, ಈ ಮಾತು ಈಗ ಹಲವರ ಕೋಪಕ್ಕೆ ಕಾರಣವಾಗಿದೆ. ಮೈಕಲ್ ಅವರ ಈ ಮಾತಿಗೆ ನಮ್ಮ ಭಾರತ ತಂಡದ ಹಾರ್ದಿಕ್ ಪಾಂಡ್ಯ (Hardik Pandya) ಅವರು ಕೂಡ ಸರಿಯಾಗಿ ಟಾಂಗ್ ನೀಡಿದ್ದಾರೆ…

ಭಾರತದ ಬಗ್ಗೆ ಹೀಯಾಳಿಸಿದ ಮೈಕಲ್ ವಾನ್, “ಒಂದು ವೇಳೆ ನಾನು ಭಾರತ ತಂಡವನ್ನು ಮುನ್ನಡೆಸುತ್ತಿದ್ದರೆ, ನನ್ನ ಹೆಮ್ಮೆಯನ್ನು ಬದಿಗಿಟ್ಟು, ಇಂಗ್ಲೆಂಡ್ ತಂಡದಿಂದ ಕಲಿಯಲು ಪ್ರಯತ್ನ ಮಾಡುತ್ತಿದ್ದೆ. ತಮ್ಮ ಹೆಮ್ಮೆಯನ್ನು ಪಕ್ಕಕ್ಕಿಟ್ಟು ಐಸಿಸಿ (ICC) ಟೂರ್ನಿಯನ್ನು ಗೆಲ್ಲುವುದು ಹೇಗೆ ಎಂದು ಇಂಗ್ಲೆಂಡ್ ತಂಡದಿಂದ ಬಿಸಿಸಿಐ ಕಲಿತುಕೊಳ್ಳಬೇಕು..”ಎನ್ನುವುದಾಗಿ ಮೈಕಲ್ ವಾನ್ ಹೇಳಿದ್ದರು, ಇದು ಹಲವು ಭಾರತ ತಂಡದ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಇದಕ್ಕೆ ನಮ್ಮ ತಂಡದ ಹಾರ್ದಿಕ್ ಪಾಂಡ್ಯ ಅವರು ತಕ್ಕ ಉತ್ತರ ನೀಡಿದ್ದಾರೆ. ವಿಶ್ವಕಪ್ ಮುಗಿದ ನಂತರ ನವೆಂಬರ್ 18ರಿಂದ ನ್ಯೂಜಿಲೆಂಡ್ ಪ್ರವಾಸ (New Zealand) ಶುರುವಾಗಲಿದೆ. ಇದನ್ನು ಓದಿ.. Kannada News: ದೇಶದ ಎಲ್ಲೆಡೆ ಸದ್ದು ಮಾಡಿ, ಭರ್ಜರಿ ವ್ಯಾಪಾರ ಮಾಡಿದ್ದ ಚಾಯ್ ವಾಲೀ ಅಂಗಡಿಗೆ ಬ್ರೇಕ್: ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿ ಯುವತಿ ಹೇಳಿದ್ದೇನು ಗೊತ್ತೇ??

ನ್ಯೂಜಿಲೆಂಡ್ ನಲ್ಲಿ ನಡೆಯುವ ಟೂರ್ನಿಯನ್ನು ಹಾರ್ದಿಕ್ ಪಾಂಡ್ಯ ಅವರು ಮುನ್ನಡೆಸಲಿದ್ದಾರೆ. ವೆಲ್ಲಿಂಗ್ಟನ್ ನಲ್ಲಿ (Wellington) ನಡೆಯಲಿರುವ ಸರಣಿಯ ಆರಂಭಕ್ಕಿಂತ ಮೊದಲು ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಹಾರ್ದಿಕ್ ಪಾಂಡ್ಯ ಅವರು ಮೈಕಲ್ ವಾನ್ ಅವರ ಮಾತಿಗೆ ತಕ್ಕ ಉತ್ತರ ನೀಡಿದ್ದಾರೆ. “ಯಾರೊಬ್ಬರಿಗು ಯಾವುದನ್ನು ಸಾಬೀತು ಮಾಡುವ ಅಗತ್ಯವಿಲ್ಲ ಎನ್ನುವುದು ನನ್ನ ಭಾವನೆ. ಕೆಟ್ಟದಾಗಿ ಆಡಿದಾಗ ಜನರು ಈ ರೀತಿಯ ಮಾತುಗಳನ್ನಾಡುತ್ತಾರೆ. ಆ ಮಾತಿನ ಮೇಲೆ ನಮಗೆ ಗೌರವ ಇದೆ, ಕ್ರೀಡೆಯಲ್ಲಿ ಎಲ್ಲರೂ ಪ್ರಯತ್ನ ಪಡುವುದು ಉತ್ತಮವಾಗಿ ಆಡಬೇಕು ಎಂದು. ಇಲ್ಲಿ ನಾವು ಯಾರಿಗೂ ಏನನ್ನು ಸಾಬೀತು ಮಾಡುವ ಅಗತ್ಯವಿಲ್ಲ..” ಎಂದಿದ್ದಾರೆ ಹಾರ್ದಿಕ್ ಪಾಂಡ್ಯ. ಇದನ್ನು ಓದಿ.. Cricket News: ಭಾರತಕ್ಕೆ ಮತ್ತಷ್ಟು ಶಕ್ತಿ ತುಂಬಲು ಮುಂದಾದ ಬಿಸಿಸಿಐ: ಧೋನಿ ಅಭಿಮಾನಿಗಳಿಗಂತೂ ಹಬ್ಬ. ತೆಗೆದುಕೊಳ್ಳುತ್ತಿರುವ ನಿರ್ಧಾರ ಏನು ಗೊತ್ತೇ??