T20 World Cup: ವಿಶ್ವಕಪ್ ನಲ್ಲಿ ಬೆಸ್ಟ್ ಪ್ಲೇಯರ್ ಪ್ರಶಸ್ತಿ ಯಾರಿಗೆ ಸಿಗಬೇಕಿತ್ತು ಅಂತೇ ಗೊತ್ತೇ?? ರಿಕ್ಕಿ ಪಾಂಟಿಂಗ್ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೆ??
T20 World Cup: ವಿಶ್ವಕಪ್ ನಲ್ಲಿ ಬೆಸ್ಟ್ ಪ್ಲೇಯರ್ ಪ್ರಶಸ್ತಿ ಯಾರಿಗೆ ಸಿಗಬೇಕಿತ್ತು ಅಂತೇ ಗೊತ್ತೇ?? ರಿಕ್ಕಿ ಪಾಂಟಿಂಗ್ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೆ??
T20 World Cup: ಟಿ20 ವರ್ಲ್ಡ್ ಕಪ್ ಟೂರ್ನಿ ಮುಗಿದು, ಇಂಗ್ಲೆಂಡ್ (England)ತಂಡ ಮತ್ತೊಮ್ಮೆ ಟಿ20 ವರ್ಲ್ಡ್ ಕಪ್ ಚಾಂಪಿಯನ್ಸ್ ಆಗಿದ್ದಾರೆ. ಈ ವರ್ಷದ ವಿಶ್ವಕಪ್ ನಲ್ಲಿ ನಮ್ಮ ಟೀಮ್ ಇಂಡಿಯಾದ (Team India) ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ (Virat Kohli) ಅವರು ಅತ್ಯದ್ಭುತ ಪ್ರದರ್ಶನ ನೀಡಿದರು, 296 ರನ್ಸ್ ಸ್ಕೋರ್ ಮಾಡುವ ಮೂಲಕ, ಇಡೀ ಟೂರ್ನಮೆಂಟ್ ನಲ್ಲಿ ಅತಿಹೆಚ್ಚು ರನ್ಸ್ ಸ್ಕೋರ್ ಮಾಡಿದ ಆಟಗಾರ ಎನ್ನಿಸಿಕೊಂಡರು ಕೊಹ್ಲಿ. 98ರ ಸರಾಸರಿಯಲ್ಲಿ, 4 ಅರ್ಧಶತಕ ಗಳಿಸಿ, ಭಾರತ ತಂಡ ತನ್ನ ಪಂದ್ಯಗಳನ್ನು ಗೆಲ್ಲಲು ಕೋಹ್ಲಿ ಅವರು ಮುಖ್ಯ ಕಾರಣ ಆಗಿದ್ದರು ಎಂದರೆ ತಪ್ಪಾಗುವುದಿಲ್ಲ.
ಪಾಕಿಸ್ತಾನ್ (Pakistan) ವಿರುದ್ಧದ ಮೊದಲ ಪಂದ್ಯದಲ್ಲೇ ವಿರಾಟ್ ಕೋಹ್ಲಿ ಅವರು 82 ರನ್ ಗಳಿಸಿ, ಅಜೇಯರಾಗಿ ಉಳಿದು, ಭಾರತ ತಂಡವನ್ನು ಏಕಾಂಗಿಯಾಗಿ ಗೆಲ್ಲಿಸಿದರು ಎಂದರೆ ತಪ್ಪಾಗುವುದಿಲ್ಲ. ಸೌತ್ ಆಫ್ರಿಕಾ (South Africa) ವಿರುದ್ಧ ನಡೆದ ಒಂದೇ ಒಂದು ಪಂದ್ಯದಲ್ಲಿ ಕಡಿಮೆ ರನ್ಸ್ ಗಳಿಸಿದರು, ಮತ್ತೆ ಬಾಂಗ್ಲಾದೇಶ್ (Bangladesh) ಮತ್ತು ಜಿಂಬಾಬ್ವೆ (Zimbabwe) ವಿರುದ್ಧದ ಪಂದ್ಯದಲ್ಲಿ ಮತ್ತೆ ಕಂಬ್ಯಾಕ್ ಮಾಡಿ ಅರ್ಧಶತಕ ಗಳಿಸಿದರು ಕೊಹ್ಲಿ. ವಿರಾಟ್ ಅವರು ಇಂತಹ ಅದ್ಭುತ ಪ್ರದರ್ಶನ ನೀಡಿದರು ಕೂಡ, ಭಾರತ ತಂಡ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ತಂಡವು ಬೆನ್ ಸ್ಟೋಕ್ಸ್ (Ben Stokes) ಅವರ ಸಾಮರ್ಥ್ಯದಿಂದ ಮತ್ತು ಸ್ಯಾಮ್ ಕರನ್ ಅವರ ಅತ್ಯುತ್ತಮ ಬೌಲಿಂಗ್ ಇಂದ ಗೆದ್ದಿತು. ಇದನ್ನು ಓದಿ.. Cricket News: ಸೋಲಿಗೆ ನಾನಾ ಕಾರಣಗಳನ್ನು ನೀಡುತ್ತಿರುವ ಭಾರತ ತಂಡಕ್ಕೆ ಖಡಕ್ ಪ್ರಶ್ನೆ ಎಸೆದ ಸುನಿಲ್ ಗವಾಸ್ಕರ್. ಎಲ್ಲಾ ಆಟಗಾರರು ಗಪ್ ಚುಪ್. ಏನು ಕೇಳಿದ್ದಾರೆ ಗೊತ್ತೇ??
ವಿಶ್ವಕಪ್ ಟೂರ್ನಿಯಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಎನ್ನುವ ಪ್ರಶಸ್ತಿಯನ್ನು ಇಂಗ್ಲೆಂಡ್ ತಂಡದ ಸ್ಯಾಮ್ ಕರನ್ (Sam Curran) ಅವರಿಗೆ ನೀಡಲಾಯಿತು, ಆದರೆ ಇದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ತಜ್ಞರು, ದಿಗ್ಗಜರು ಕೂಡ ವಿಶ್ವಕಪ್ ನ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಅವಾರ್ಡ್ ವಿರಾಟ್ ಕೋಹ್ಲಿ ಅವರಿಗೆ ಕೊಡಬೇಕಿತ್ತು ಎನ್ನುತ್ತಿದ್ದು, ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ರಿಕ್ಕಿ ಪಾಂಟಿಂಗ್ (Ricky Ponting) ಅವರು ಕೂಡ ಇದನ್ನೇ ಹೇಳಿದ್ದಾರೆ, ಐಸಿಸಿ ತೆಗೆದುಕೊಂಡ ಈ ನಿರ್ಧಾರವನ್ನು ಒಪ್ಪಿಕೊಳ್ಳದ ರಿಕ್ಕಿ ಪಾಂಟಿಂಗ್ ಅವರು, ಐಸಿಸಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಗೆ ವಿರಾಟ್ ಕೊಹ್ಲಿ ಅವರೇ ಅರ್ಹರು ಎಂದು ಹೇಳಿದ್ದಾರೆ. ಇದನ್ನು ಓದಿ.. Cricket News: ಇದ್ದಕ್ಕಿದ್ದ ಹಾಗೆ ದ್ರಾವಿಡ್ ಕೋಚಿಂಗ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಹರ್ಭಜನ್ ಸಿಂಗ್: ಹೇಳಿದ್ದೇನು ಗೊತ್ತೆ??