Cricket News: ಸೋಲಿಗೆ ನಾನಾ ಕಾರಣಗಳನ್ನು ನೀಡುತ್ತಿರುವ ಭಾರತ ತಂಡಕ್ಕೆ ಖಡಕ್ ಪ್ರಶ್ನೆ ಎಸೆದ ಸುನಿಲ್ ಗವಾಸ್ಕರ್. ಎಲ್ಲಾ ಆಟಗಾರರು ಗಪ್ ಚುಪ್. ಏನು ಕೇಳಿದ್ದಾರೆ ಗೊತ್ತೇ??
Cricket News: ಸೋಲಿಗೆ ನಾನಾ ಕಾರಣಗಳನ್ನು ನೀಡುತ್ತಿರುವ ಭಾರತ ತಂಡಕ್ಕೆ ಖಡಕ್ ಪ್ರಶ್ನೆ ಎಸೆದ ಸುನಿಲ್ ಗವಾಸ್ಕರ್. ಎಲ್ಲಾ ಆಟಗಾರರು ಗಪ್ ಚುಪ್. ಏನು ಕೇಳಿದ್ದಾರೆ ಗೊತ್ತೇ??
Cricket News: ನವೆಂಬರ್ 13ರಂದು ಟಿ20 ವಿಶ್ವಕಪ್ (T20 World Cup) ಟೂರ್ನಿ ಮುಗಿದಿದೆ, ಇಂಗ್ಲೆಂಡ್ ತಂಡವು ಪಾಕಿಸ್ತಾನ್ (England vs Pakistan) ತಂಡವನ್ನು ಸೋಲಿಸಿ, ವಿಶ್ವಕಪ್ ನ ಚಾಂಪಿಯನ್ ಗಳಾಗಿದ್ದಾರೆ. ಚಾಂಪಿಯನ್ ಗಳಾಗುತ್ತಾರೆ ಎಂದು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಭಾರತ ತಂಡವು (Team India) ಸೆಮಿಫೈನಲ್ಸ್ ಹಂತದಲ್ಲಿ ಸೋತು ಹೊರನಡೆಯಿತು. ಇಂಗ್ಲೆಂಡ್ ಎದುರು ನಡೆದ ಈ ಹೀನಾಯವಾದ ಸೋಲಿನ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಂದ ಮತ್ತು ಮಾಜಿ ನಾಯಕರಿಂದ ಟೀಕೆಗಳು ವ್ಯಕ್ತವಾಗುತ್ತಿದೆ. ಇದೀಗ ಭಾರತ ತಂಡದ ಮಾಜಿ ಕ್ಯಾಪ್ಟನ್ ಮತ್ತು ಸ್ಫೋಟಕ ಬ್ಯಾಟ್ಸ್ಮನ್ ಸುನೀಲ್ ಗವಾಸ್ಕರ್ (Sunil Gavaskar) ಅವರು ಭಾರತ ತಂಡಕ್ಕೆ ಒಂದು ಖಡಕ್ ಪ್ರಶ್ನೆ ಕೇಳಿದ್ದಾರೆ. ಸ್ಟ್ರೆಸ್, ಮ್ಯಾನೇಜ್ಮೆಂಟ್ ಎಂದು ಎಲ್ಲರೂ ಹೇಳುತ್ತಿರುವ ಬಗ್ಗೆ ಮಾತನಾಡಿರುವ ಸುನೀಲ್ ಗವಾಸ್ಕರ್ ಅವರು ಖಾರವಾಗಿ ಪ್ರಶ್ನೆ ಕೇಳಿದ್ದಾರೆ..
“ವಿಶ್ವಕಪ್ ನಲ್ಲಿ ಸೋತ ನಂತರ ಭಾರತ ತಂಡದಲ್ಲಿ ಬದಲಾವಣೆಗಳನ್ನು ಮಾಡಬೇಕಾದ ಅಗತ್ಯವಿದೆ. ವಿಶ್ವಕಪ್ ಗೆಲ್ಲದಿದ್ದ ಮೇಲೆ ಬದಲಾವಣೆ ಬಹಳ ಮುಖ್ಯವಾಗಿದೆ, ನ್ಯೂಜಿಲೆಂಡ್ ಗೆ (India vs New Zealand) ಹೋಗುವ ತಂಡದಲ್ಲಿ ಬದಲಾವಣೆಗಳು ಆಗಿಲ್ಲ. ಎಲ್ಲಾ ಆಟಗಾರರು ವರ್ಕ್ ಲೋಡ್, ವರ್ಕ್ ಲೋಡ್ ಎಂದು ಹೇಳುತ್ತಾರೆ. ಕೀರ್ತಿ ಆಜಾದ್ ಮತ್ತು ಮದನ್ ಲಾಲ್ ಅವರು ಈ ವಿಷಯದ ಬಗ್ಗೆ ಮಾತನಾಡಿದರು, ಆದರೆ ನ್ಯಾಷನಲ್ ಟೀಮ್ ಗೆ ಆಡುವಾಗ ಮಾತ್ರ ಈ ವರ್ಕ್ ಲೋಡ್ ಬರುತ್ತಾ?..” ಎಂದಿದ್ದಾರೆ ಸುನೀಲ್ ಗವಾಸ್ಕರ್. “ಇಡೀ ಐಪಿಎಲ್ (IPL) ನಲ್ಲಿ ಇದೇ ಆಟಗಾರರು ಆಡುತ್ತಾರೆ, ಬೇರೆ ಬೇರೆ ಊರುಗಳಿಗೆ ಪ್ರಯಾಣ ಮಾಡುತ್ತಲೇ ಇರುತ್ತಾರೆ. ಆತ ವರ್ಕ್ ಲೋಡ್ ಬರುವುದಿಲ್ಲವೇ? ಸುಸ್ತಾಗುವುದಿಲ್ಲವೇ? ಇದನ್ನು ಓದಿ.. Business Idea: ನಿಮಗೆ ಸ್ವಂತ ಉದ್ಯಮ ಮಾಡಿ ಬೆಳೆಯಬೇಕು ಎನ್ನುವ ಕನಸು ಇದ್ದರೇ, ಈ ಸುಲಭ ಬಿಸಿನೆಸ್ ಟ್ರೈ ಮಾಡಿ. ಯಶಸ್ಸು ಕಟ್ಟಿಟ್ಟಬುತ್ತಿ.
ಭಾರತಕ್ಕೆ ಆಡುವಾಗ ಮಾತ್ರ ಈ ವಿಷಯಗಳು ಬರುವುದು ಹೇಗೆ? ಗ್ಲಾಮರ್ ಇಲ್ಲದ ಟೂರ್ನಿಗಳು ಇದ್ದಾಗ ವರ್ಕ್ ಲೋಡ್ ನೆನಪಿಗೆ ಬರುತ್ತದೆಯೇ? ಇದು ನಿಜವಾಗಲೂ ತಪ್ಪು. ವಿಶ್ವಕಪ್ ನಲ್ಲಿ ಸೋತ ತಂಡಕ್ಕೆ ಮುದ್ದು ಮಾಡಲು ಹೋಗಬೇಡಿ. ಆಟಗಾರರು ಫಿಟ್ ಆಗಿದ್ದರೆ, ವರ್ಕ್ ಲೋಡ್ ಎನ್ನುವ ಮಾತು ಯಾಕೆ ಬರುತ್ತದೆ? ತಂಡದ ಮೂಲಕ ಅವರಿಗೆ ರೀಟೇನರ್ ಶುಲ್ಕದ ಹಣ ಸಿಗುತ್ತದೆ, ವರ್ಕ್ ಲೋಡ್ ಇಂದ ಪಂದ್ಯ ಗೆಲ್ಲದೆ ಇರುವವರಿಗೆ ರೀಟೇನರ್ ಶುಲ್ಕದಲ್ಲಿ ಕೂಡ ಕಡಿತ ಮಾಡಬೇಕು. ಆಡದಿದ್ದರೆ, ರೀಟೇನರ್ ಶುಲ್ಕ ಕಡಿತವಾಗುತ್ತದೆ ಎಂದು ಹೇಳಿದರೆ, ಆಗ ವರ್ಕ್ ಲೋಡ್ ಮರೆಯುತ್ತಾರೆ. ಎಫ್.ಐ.ಸಿ.ಎ (FIFA) ಸಹ ಇದನ್ನೇ ಹೇಳಿದೆ, ಐಪಿಎಲ್ ಬಂದಾಗ ಆಟಗಾರರು ಬೇರೆಲ್ಲವನ್ನು ಮರೆತು ಹೋಗುತ್ತಾರೆ, ಆಯ್ಕೆ ಸಮಿತಿ ಇದರ ಬಗ್ಗೆ ಚರ್ಚೆ ಮಾಡಿ, ಆಟಗಾರರ ಬಗ್ಗೆ ಕಟುವಾದ ನಿರ್ಧಾರ ತೆಗೆದುಕೊಳ್ಳಬೇಕು..” ಎಂದು ಸುನೀಲ್ ಗವಾಸ್ಕರ್ ಅವರು ಖಡಕ್ ಆಗಿ ಮಾತನಾಡಿದ್ದಾರೆ. ಇದನ್ನು ಓದಿ.. Post office: ಕೇವಲ 5000 ಹೂಡಿಕೆ ಮಾಡಿ ಲಕ್ಷ ಲಕ್ಷ ಹಣಗಳಿಸುವುದು ಹೇಗೆ ಗೊತ್ತೇ?? ಈ ಉದ್ಯಮ ಆರಂಭಿಸಿ ನೋಡಿ.