IPL 2023 RCB: ಮತ್ತಷ್ಟು ಆಟಗಾರರನ್ನು ಹೊರದಬ್ಬಿದ ಆರ್ಸಿಬಿ: ಈ ಬಾರಿ ಹರಾಜಿಗೂ ಮುನ್ನ ಯಾರನ್ನು ಕೈ ಬಿಟ್ಟಿದೆ ಗೊತ್ತೇ??
IPL 2023 RCB: ಮತ್ತಷ್ಟು ಆಟಗಾರರನ್ನು ಹೊರದಬ್ಬಿದ ಆರ್ಸಿಬಿ: ಈ ಬಾರಿ ಹರಾಜಿಗೂ ಮುನ್ನ ಯಾರನ್ನು ಕೈ ಬಿಟ್ಟಿದೆ ಗೊತ್ತೇ??
IPL 2023 RCB: 2023ರ ಏಪ್ರಿಲ್ ತಿಂಗಳಿನಲ್ಲಿ ಐಪಿಎಲ್ (IPL) ಶುರುವಾಗಲಿದ್ದು, ಈಗಾಗಲೇ ಐಪಿಎಲ್ ಬಗ್ಗೆ ಕುತೂಹಲ ರಂಗೇರುತ್ತಿದೆ. ಮುಂದಿನ ತಿಂಗಳು ಬೆಂಗಳೂರಿನಲ್ಲಿ ಐಪಿಎಲ್ 16ನೇ ಸೀಸನ್ ನ ಆಕ್ಷನ್ ನಡೆಯಲಿದ್ದು, ಯಾವ ಆಟಗಾರರು ಯಾವ ತಂಡದ ಪಾಲಾಗುತ್ತಾರೆ ಎನ್ನುವ ಕುತೂಹಲ ಕ್ರಿಕೆಟ್ ಪ್ರಿಯರಲ್ಲಿದೆ. ವಿಶ್ವದ ಕ್ರಿಕೆಟಿಗರ ಕಣ್ಣು ಐಪಿಎಲ್ ಮೇಲಿರುವುದು ಖಂಡಿತ. ಈ ಸಮಯದಲ್ಲಿ ಐಪಿಎಲ್ ಎಲ್ಲಾ ತಂಡಗಳ ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಬೇಕಾದ ಆಟಗಾರರನ್ನು ಉಳಿಸಿಕೊಂಡು, ಇನ್ನುಳಿದವರನ್ನು ಬಿಡುಗಡೆ ಮಾಡಲು ನವೆಂಬರ್ 15ರ ವರೆಗು ಸಮಯ ನೀಡಲಾಗಿದೆ.
ಈಗಾಗಲೇ ಬಹುತೇಕ ಎಲ್ಲಾ ತಂಡಗಳು ತಾವು ಕೈಬಿಡುತ್ತಿರುವ ಆಟಗಾರರ ಲಿಸ್ಟ್ ಅನ್ನು ಹೊರಬಿಟ್ಟಿದ್ದಾರೆ. ನಮ್ಮ ಆರ್ಸಿಬಿ (RCB) ತಂಡ ಕೂಡ ಈ ವರ್ಷ ಬಿಡುಗಡೆ ಮಾಡುತ್ತಿರುವ ಆಟಗಾರರ ಲಿಸ್ಟ್ ಅನ್ನು ಹೊರಬಿಟ್ಟಿದೆ. ಈಗಾಗಲೇ ಈ ವರ್ಷ ಆರ್ಸಿಬಿ ತಂಡ ಖರೀದಿ ಮಾಡಿದ್ದ ಆಸ್ಟ್ರೇಲಿಯಾ ಆಟಗಾರ ಜೇಸನ್ ಬೆಹರೆಂಡಾರ್ಫ್ (Jason Behrendorff) ಅವರು ಆರ್ಸಿಬಿ ಇಂದ ಹೊರಹೋಗಿ ಮುಂಬೈ ತಂಡದ ಪಾಲಾಗಿದ್ದಾರೆ. ಪ್ಲೇಯರ್ ಗಳ ಟ್ರೇಡಿಂಗ್ ಮೂಲಕ ಜೇಸನ್ ಅವರು ಮುಂಬೈ (Mumbai Indians)ತಂಡವನ್ನು ಸೇರಿಕೊಂಡಿದ್ದಾರೆ. ಇನ್ನು ನಮ್ಮ ಆರ್ಸಿಬಿ ತಂಡ ನಾಲ್ವರು ಆಟಗಾರರನ್ನು ಬಿಡುಗಡೆ ಮಾಡಿರುವುದಾಗಿ ತಿಳಿದುಬಂದಿದೆ. ಇದನ್ನು ಓದಿ.. T20 World Cup: ವಿಶ್ವಕಪ್ ನಲ್ಲಿ ಬೆಸ್ಟ್ ಪ್ಲೇಯರ್ ಪ್ರಶಸ್ತಿ ಯಾರಿಗೆ ಸಿಗಬೇಕಿತ್ತು ಅಂತೇ ಗೊತ್ತೇ?? ರಿಕ್ಕಿ ಪಾಂಟಿಂಗ್ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೆ??
ಡೇವಿಡ್ ವಿಲ್ಲೆ (David Ville), ಸಿದ್ಧಾರ್ಥ್ ಕೌಲ್ (Siddharth Kaul), ಆಕಾಸ್ ದೀಪ್ (Akash Deep) ಮತ್ತು ಕರ್ಣ್ ಶರ್ಮ (Karn Sharma) ಅವರನ್ನು ಆರ್ಸಿಬಿ ತಂಡ ಹೊರಹಾಕಿದೆ. ತಂಡಕ್ಕೆ ಆಯ್ಕೆಯಾಗಿದ್ದ ಇವರೆಲ್ಲರೂ ಉತ್ತಮ ಪ್ರದರ್ಶನ ನೀಡಲಿಲ್ಲ, ಈ ಕಾರಣದಿಂದ ಆರ್ಸಿಬಿ ತಂಡ ಇವರನ್ನು ಹೊರಹಾಕಿದೆ. ಇನ್ನುಳಿದ ಹಾಗೆ, ವಿರಾಟ್ ಕೊಹ್ಲಿ (Virat Kohli), ಫಾಫ್ ಡು ಪ್ಲೆಸಿಸ್ (Faf du Plessis), ದಿನೇಶ್ ಕಾರ್ತಿಕ್ (Dinesh Karthik), ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell), ಹರ್ಷಲ್ ಪಟೇಲ್ (Harshal Patel), ಶಾಬಾಜ್ ಅಹ್ಮದ್ (Shahbaz Ahmed), ರಜತ್ ಪಟಿದಾರ್ (Rajath Patidar), ವನಿಂದು ಹಸರಂಗ (Vanindu Hasaranga) ಮತ್ತು ಮೊಹಮ್ಮದ್ ಸಿರಾಜ್ (Mohammad Siraj) ಅವರನ್ನು ಉಳಿಸಿಕೊಂಡಿದೆ ಆರ್ಸಿಬಿ. ಇದನ್ನು ಓದಿ.. Cricket News: ಸೋಲಿಗೆ ನಾನಾ ಕಾರಣಗಳನ್ನು ನೀಡುತ್ತಿರುವ ಭಾರತ ತಂಡಕ್ಕೆ ಖಡಕ್ ಪ್ರಶ್ನೆ ಎಸೆದ ಸುನಿಲ್ ಗವಾಸ್ಕರ್. ಎಲ್ಲಾ ಆಟಗಾರರು ಗಪ್ ಚುಪ್. ಏನು ಕೇಳಿದ್ದಾರೆ ಗೊತ್ತೇ??