Cricket News: ಇದ್ದಕ್ಕಿದ್ದ ಹಾಗೆ ದ್ರಾವಿಡ್ ಕೋಚಿಂಗ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಹರ್ಭಜನ್ ಸಿಂಗ್: ಹೇಳಿದ್ದೇನು ಗೊತ್ತೆ??

Cricket News: ಇದ್ದಕ್ಕಿದ್ದ ಹಾಗೆ ದ್ರಾವಿಡ್ ಕೋಚಿಂಗ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಹರ್ಭಜನ್ ಸಿಂಗ್: ಹೇಳಿದ್ದೇನು ಗೊತ್ತೆ??

Cricket News: ಟಿ20 ವಿಶ್ವಕಪ್ (T20 World Cup) ನಲ್ಲಿ ಭಾರತ ತಂಡವು (Team India) ಉತ್ತಮ ಪ್ರದರ್ಶನ ನೀಡದೆ ಸೆಮಿಫೈನಲ್ಸ್ ಹಂತದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಸೋತು ಮನಗೆ ಬಂದತು. ಶುರುವಿನಲ್ಲಿ ಸೂಪರ್ 12 ಹಂತದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ಗ್ರೂಪ್ 2 ಅಂಕಪಟ್ಟಿಯಲ್ಲಿ ಅಗ್ರಸ್ತಾನದಲ್ಲಿದ್ದ ಭಾರತ ತಂಡವು ಸೆಮಿಫೈನಲ್ಸ್ ನಲ್ಲಿ ಸೋತು ಹೋಯಿತು. ಈ ಘಟನೆ ನಂತರ ಟೀಮ್ ಇಂಡಿಯಾದ ಆಟಗಾರರು ಮತ್ತು ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಮೇಲೆ ಭಾರಿ ಟೀಕೆಗಳು ವ್ಯಕ್ತವಾಗುತ್ತಿದೆ.

ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ (Rohit Sharma) ಅವರು ತೆಗೆದುಕೊಂಡ ನಿರ್ಧಾರಗಳ ಮೇಲೆ ಪ್ರಶ್ನೆಗಳು ಉದ್ಭವವಾಗುತ್ತಿದೆ. ಅಷ್ಟೇ ಅಲ್ಲದೆ, ರೋಹಿತ್ ಶರ್ಮಾ ಅವರು ಫಾರ್ಮ್ ಕಳೆದುಕೊಂಡಿರುವ ಬಗ್ಗೆ ಕೂಡ ಟೀಕೆಗಳು ವ್ಯಕ್ತವಾಗುತ್ತಿದೆ. ಇನ್ನು ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಬಗ್ಗೆ ಕೂಡ ಟೀಕೆಗಳು ವ್ಯಕ್ತವಾಗುತ್ತಿದ್ದು, ಅವರನ್ನು ಮ್ಯಾನೇಜ್ಮೆಂಟ್ ಇಂದ ತೆಗೆದುಹಾಕಬೇಕು ಎನ್ನಲಾಗುತ್ತಿದೆ. ಹಲವು ಮಾಜಿ ಆಟಗಾರರು, ಕ್ರಿಕೆಟ್ ತಜ್ಞರು ಇದರ ಬಗ್ಗೆ ಮಾತನಾಡುತ್ತಿದ್ದು, ಇದೀಗ ಭಾರತ ತಂಡದ ಮಾಜಿ ಆಟಗಾರ ಹರ್ಭಜನ್ ಸಿಂಗ್ (Harbhajan Singh) ಅವರು ಕೂಡ ರಾಹುಲ್ ದ್ರಾವಿಡ್ ಅವರ ಬಗ್ಗೆ ಸೆನ್ಸೇಷನಲ್ ಕಮೆಂಟ್ಸ್ ಬರೆದಿದ್ದಾರೆ. ಇದನ್ನು ಓದಿ.. Cricket: ಭಾರತದ ಈ ಆಟಗಾರನೇ ವಿಶ್ವಕಪ್ ನಲ್ಲಿ ಬೆಸ್ಟ್ ಆಟಗಾರ ಎಂದ ವಿನ್ನಿಂಗ್ ಕ್ಯಾಪ್ಟನ್ ಬಟ್ಲರ್. ಅಚ್ಚರಿಯಾಗಿ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?? 

“ಇಲ್ಲಿ ಕ್ಯಾಪ್ಟನ್ ತಪ್ಪು ಮಾತ್ರವಲ್ಲ. ಇತ್ತೀಚೆಗೆ ನಿವೃತ್ತಿ ಹೊಂದಿದವರನ್ನು ನೀವು ಕರೆದುತರಬೇಕು. ಟಿ20 ಕ್ರಿಕೆಟ್ ಅರ್ಥ ಆಗುವವರನ್ನು ನೇಮಕ ಮಾಡಬೇಕು. ರಾಹುಲ್ ದ್ರಾವಿಡ್ ಅವರು ನನ್ನ ಸಹೋದ್ಯೋಗಿ ಕೂಡ ಹೌದು, ಅವರೊಡನೆ ನಾನು ಕೆಲಸ ಮಾಡಿದ್ದೇನೆ, ಅವರ ಜಾಣ್ಮೆ, ಆಟದ ವೈಖರಿ ಎಲ್ಲವೂ ಗೊತ್ತಿದೆ. ಅವರನ್ನು ತೆಗೆದುಹಾಕಲು ನಿಮಗೆ ಇಷ್ಟವಿಲ್ಲದೆ ಹೋದರೆ, ಅವರಿಗೆ ಸಹಾಯ ಮಾಡಿ. ಉತ್ತಮ ಬುದ್ಧಿ ಚಾಕಚಕ್ಯತೆ ಹೊಂದಿರುವ ಆಟಗಾರ ಆಗಿರುವ ಆಶಿಷ್ ನೆಹ್ರಾ (Ashish Nehra) ಅವರಂತಹ ಆಟಗಾರರನ್ನು ಕರೆತನ್ನಿ. ಗುಜರಾತ್ ಟೈಟನ್ಸ್ ತಂಡದ ಕೋಚ್ ಆಗಿ ಅವರ ಕೊಡುಗೆ ಹೇಗಿದೆ ಎಂದು ನಮಗೆ ಗೊತ್ತಿದೆ. ಆಶಿಷ್ ನೆಹ್ರಾ ಅವರು ಮಾತ್ರ ಎಂದು ನಾನು ಹೇಳುತ್ತಿಲ್ಲ, ಟಿ20 ಅರ್ಥಮಾಡಿಕೊಂಡಿರುವ ಯಾರನ್ನಾದರೂ ನೇಮಿಸಿ..” ಎಂದಿದ್ದಾರೆ ಹರ್ಭಜನ್ ಸಿಂಗ್. ಇದನ್ನು ಓದಿ.. Cricket news: ಟೂರ್ನಿಯಲ್ಲಿ ಬೆಸ್ಟ್ ಆಟಗಾರರನ್ನು ಆಯ್ಕೆ ಮಾಡಿ, 11 ಆಟಗಾರರನ್ನು ಆಯ್ಕೆ ಮಾಡಿದ ಐಸಿಸಿ: ಭಾರತೀಯರದ್ದೇ ಪಾರುಪತ್ಯ. ಸ್ಥಾನ ಪಡೆದವರು ಯಾರ್ಯಾರು ಗೊತ್ತೇ?