Cricket: ಭಾರತದ ಈ ಆಟಗಾರನೇ ವಿಶ್ವಕಪ್ ನಲ್ಲಿ ಬೆಸ್ಟ್ ಆಟಗಾರ ಎಂದ ವಿನ್ನಿಂಗ್ ಕ್ಯಾಪ್ಟನ್ ಬಟ್ಲರ್. ಅಚ್ಚರಿಯಾಗಿ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??
Cricket: ಭಾರತದ ಈ ಆಟಗಾರನೇ ವಿಶ್ವಕಪ್ ನಲ್ಲಿ ಬೆಸ್ಟ್ ಆಟಗಾರ ಎಂದ ವಿನ್ನಿಂಗ್ ಕ್ಯಾಪ್ಟನ್ ಬಟ್ಲರ್. ಅಚ್ಚರಿಯಾಗಿ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??
Cricket: ನಮ್ಮ ಭಾರತ ತಂಡ (Team India) ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಟಿ20 ವಿಶ್ವಕಪ್ ನಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಸೆಮಿಫೈನಲ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ ಸೋತು ಹೋಯಿತು. ನಿನ್ನೆ ಭಾನುವಾರ ಇಂಗ್ಲೆಂಡ್ ವರ್ಸಸ್ ಪಾಕಿಸ್ತಾನ್ (England vs Pakistan) ವಿಶ್ವಕಪ್ ನ ಫಿನಾಲೆ ಪಂದ್ಯ ನಡೆಯಿತು, ಇದರಲ್ಲಿ ಇಂಗ್ಲೆಂಡ್ ತಂಡವು ಪಾಕಿಸ್ತಾನ್ ಅನ್ನು ಸೋಲಿಸಿ ವಿಶ್ವಕಪ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ. ವಿಶ್ವಕಪ್ ನ ಫೈನಲ್ಸ್ ನಡೆಯುವುದಕ್ಕಿಂತ ಮೊದಲು, ಶುಕ್ರವಾರದ ದಿನ ಐಸಿಸಿ (ICC) ಯು ಬಹುಮಾನ ಪಡೆಯುವ 9 ಆಟಗಾರರ ಹೆಸರನ್ನು ಪ್ರಕಟಣೆ ಮಾಡಿತು.
ಈ ಲಿಸ್ಟ್ ನಲ್ಲಿ ಅಗ್ರ ರನ್ ಸ್ಕೊರರ್ ಆಗಿರುವ ಭಾರತ ತಂಡದ ವಿರಾಟ್ ಕೊಹ್ಲಿ (Virat Kohli) ಅವರು ಮತ್ತು ಸೂರ್ಯಕುಮಾರ್ ಯಾದವ್ (Suryakumar Yadav) ಅವರಿದ್ದಾರೆ. ವಿರಾಟ್ ಅವರು 6 ಇನ್ನಿಂಗ್ಸ್ ಗಳಲ್ಲಿ ಬರೋಬ್ಬರಿ 296 ರನ್ಸ್ ಚಚ್ಚಿದರು. ಇನ್ನು ಈ ಲಿಸ್ಟ್ ನಲ್ಲಿ ಸೂರ್ಯಕುಮಾರ್ ಯಾದವ್, ಪಾಕಿಸ್ತಾನ್ ತಂಡದ ಆಲ್ ರೌಂಡರ್ ಶಾದಾಬ್ ಖಾನ್ (Shadab Khan), ಪಾಕಿಸ್ತಾನ್ ತಂಡದ ವೇಗಿ ಶಾಹಿನ್ ಶಾ ಆಫ್ರಿದಿ (Shaheen Shah Afridi), ಇಂಗ್ಲೆಂಡ್ ತಂಡದ ಆಲ್ ರೌಂಡರ್ ಸ್ಯಾಮ್ ಕರನ್ (Sam Curran), ಇಂಗ್ಲೆಂಡ್ ನ ಆರಂಭಿಕ ಆಟಗಾರರಾದ ಜೋಸ್ ಬಟ್ಲರ್ (Jos Buttler) ಮತ್ತು ಅಲೆಕ್ಸ್ ಹೇಲ್ಸ್ (Alex Hales), ಜಿಂಬಾಬ್ವೆ ತಂಡದ ಆಲ್ ರೌಂಡರ್ ಸಿಕಂದರ್ ರಜಾ, ಮತ್ತು ಶ್ರೀಲಂಕಾ ಆಲ್ ರೌಂಡರ್ ವನಿಂದು ಹಸರಂಗ (Vanindu Hasaranga) ಈ ಲಿಸ್ಟ್ ನಲ್ಲಿದ್ದಾರೆ. ಇದನ್ನು ಓದಿ.. Cricket news: ಟೂರ್ನಿಯಲ್ಲಿ ಬೆಸ್ಟ್ ಆಟಗಾರರನ್ನು ಆಯ್ಕೆ ಮಾಡಿ, 11 ಆಟಗಾರರನ್ನು ಆಯ್ಕೆ ಮಾಡಿದ ಐಸಿಸಿ: ಭಾರತೀಯರದ್ದೇ ಪಾರುಪತ್ಯ. ಸ್ಥಾನ ಪಡೆದವರು ಯಾರ್ಯಾರು ಗೊತ್ತೇ?
ಇದೆಲ್ಲವೂ ಒಂದು ಕಡೆಯಾದರೆ ವಿಶ್ವಕಪ್ ನ ಸೆಮಿ ಫೈನಲ್ಸ್ ನಲ್ಲಿ ಭಾರತ ತಂಡದ ತಂಡದ ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಪ್ರದರ್ಶನದ ಬಗ್ಗೆ ಇಂಗ್ಲೆಂಡ್ ನ ಒಪಿನಿಂಗ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ, “ಮ್ಯಾನ್ ಆಫ್ ದಿ ಟೂರ್ನಮೆಂಟ್ ಸೂರ್ಯಕುಮಾರ್ ಯಾದವ್ ಅವರು ಎಂದು ನಾನು ಭಾವಿಸುತ್ತೇನೆ. ನನ್ನ ಪಾಲಿಗೆ ಅವರು ಬಹಳ ಫ್ರೀಡಂ ಇಂದ ಆಡಿದ ಆಟಗಾರ ಎಂದು ಅನ್ನಿಸುತ್ತದೆ. ಅಂತಹ ಸ್ಟಾರ್ ಸ್ಟಡ್ ಲೈನಪ್ ನಲ್ಲಿ ಸೂರ್ಯಕುಮಾರ್ ಯಾದವ್ ಅವರು ಅದ್ಭುತ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ..” ಎಂದಿದ್ದಾರೆ ಜೋಸ್ ಬಟ್ಲರ್. ಸೂರ್ಯಕುಮಾರ್ ಅವರು ಈ ಟೂರ್ನಮೆಂಟ್ ನಲ್ಲಿ ಅತಿಹೆಚ್ಚು ರನ್ಸ್ ಗಳಿಸಿದ ಮೂರನೇ ಆಟಗಾರ ಎನ್ನಿಸಿಕೊಂಡಿದ್ದಾರೆ. ಇದನ್ನು ಓದಿ.. Cricket News: ನಾಯಕನಾಗಿದ್ದಕ್ಕೆ ತಂಡದಲ್ಲಿ ಉಳಿದುಕೊಂಡಿದ್ದ ರೋಹಿತ್ ಶರ್ಮ ಗೆ ಇದೊಂದೇ ಸವಾಲು. ಯಾಮಾರಿದರೆ ತಂಡದಿಂದ ಔಟ್. ಏನಾಗುತ್ತಿದೆ ಗೊತ್ತೇ?