Cricket News: ರಾಹುಲ್ ಬಿಟ್ಟರೆ ಅದ್ಭುತ ಆರಂಭಿಕನಾಗುವ ಆಟಗಾರ ಯಾರು ಗೊತ್ತೇ?? ಈತ ಬಂದರೆ ಮತ್ತೊಬ್ಬ ಸೆಹ್ವಾಗ್ ಬಂದ ಹಾಗೆ. ಯಾರು ಗೊತ್ತೇ ಆ ಟಾಪ್ ಬ್ಯಾಟ್ಸಮನ್??

Cricket News: ರಾಹುಲ್ ಬಿಟ್ಟರೆ ಅದ್ಭುತ ಆರಂಭಿಕನಾಗುವ ಆಟಗಾರ ಯಾರು ಗೊತ್ತೇ?? ಈತ ಬಂದರೆ ಮತ್ತೊಬ್ಬ ಸೆಹ್ವಾಗ್ ಬಂದ ಹಾಗೆ. ಯಾರು ಗೊತ್ತೇ ಆ ಟಾಪ್ ಬ್ಯಾಟ್ಸಮನ್??

Cricket News: ಟಿ20 ವಿಶ್ವಕಪ್ (T20 World Cup) ನ ಸೆಮಿಫೈನಲ್ಸ್ ನಲ್ಲಿ ಭಾರತ ತಂಡ (Team India) ಸೋತ ನಂತರ, ತೀವ್ರವಾದ ಟೀಕೆಗಳು ವ್ಯಕ್ತವಾಗುತ್ತಿದೆ. ಬಹುಮುಖ್ಯವಾಗಿದ್ದ ಇಂಗ್ಲೆಂಡ್ ಪಂದ್ಯದಲ್ಲಿ ಭಾರತದ ಬೌಲಿಂಗ್ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಇಂಗ್ಲೆಂಡ್ ತಂಡದ ಒಂದು ವಿಕೆಟ್ ಕೂಡ ಪಡೆಯಲು ಸಾಧ್ಯವಾಗದೆ, ಹೀನಾಯವಾದ ಸೋಲು ಕಂಡಿತು ಭಾರತ. ಬೌಲಿಂಗ್ ಮಾತ್ರವಲ್ಲದೆ ಆರಂಭಿಕ ಬ್ಯಾಟ್ಸ್ಮನ್ ಗಳ ಪ್ರದರ್ಶನ ಸಹ ಉತ್ತಮವಾಗಿಲ್ಲ. ರೋಹಿತ್ ಶರ್ಮಾ (Rohit Sharma) ಮತ್ತು ಕೆ.ಎಲ್.ರಾಹುಲ್ (K L Rahul) ಅವರು ಯಾವ ಪಂದ್ಯದಲ್ಲೂ ಸಹ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಅದರಲ್ಲು ಕೆ.ಎಲ್.ರಾಹುಲ್ ಅವರ ಮೇಲೆ ಎಲ್ಲರಿಗೂ ನಿರಾಶೆಯಾಗಿದೆ.

ಇಂಡಿಯಾ ವರ್ಸಸ್ ಇಂಗ್ಲೆಂಡ್ (India vs England) ಪಂದ್ಯದಲ್ಲಿ ಕೆ.ಎಲ್.ರಾಹುಲ್ ಅವರು ಸಿಂಗಲ್ ಡಿಜಿಟ್ ರನ್ ಗಳಿಸಿ ಔಟ್ ಆದರು. ಟಿ20 ವಿಶ್ವಕಪ್ ನ ಬಹುತೇಕ ಎಲ್ಲಾ ಪಂದ್ಯಗಳಲ್ಲು ಇದೇ ರೀತಿ ಔಟ್ ಆಗಿದ್ದಾರೆ ಕೆ.ಎಲ್.ರಾಹುಲ್. ಈ ಕಾರಣದಿಂದ ಕೆ.ಎಲ್.ರಾಹುಲ್ ಅವರು ಭಾರಿ ಟೀಕೆಗೆ ಒಳಗಾಗಿದ್ದಾರೆ. ನೆಟ್ಟಿಗರು ಕೆ.ಎಲ್.ರಾಹುಲ್ ಅವರನ್ನು ತೆಗೆದುಹಾಕಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆರಂಭಿಕ ಆಟಗಾರರು ಉತ್ತಮವಾಗಿ ರನ್ಸ್ ಗಳಿಸಿದರೆ, ಮಾತ್ರ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳಿಗೆ ಸುಲಭವಾಗುತ್ತದೆ. ಆದರೆ ಈ ಜವಾಬ್ದಾರಿಯನ್ನು ಕೆ.ಎಲ್.ರಾಹುಲ್ ಅವರು ಉತ್ತಮವಾಗಿ ನಿಭಾಯಿಸಿಲ್ಲ. ಐದರಲ್ಲಿ 3 ಪಂದ್ಯಗಳಲ್ಲಿ ಸಿಂಗಲ್ ಡಿಜಿಟ್ ರನ್ಸ್ ಗಳಿಸಲು ಕೂಡ ಕಷ್ಟಪಟ್ಟು ಔಟ್ ಆಗುತ್ತಿದ್ದರು. ಇದನ್ನು ಓದಿ.. Cricket News: ಭಾರತದ ಸೋಲಿಗೆ ಅದೊಂದು ಕಾರಣ ಎಂದ ಪಾಕ್ ಕ್ರಿಕೆಟಿಗರು. ಹೌದು ಎಂದು ಒಪ್ಪಿಕೊಂಡ ಭಾರತೀಯ ಫ್ಯಾನ್ಸ್. ಕಾರಣ ಏನಂತೆ ಗೊತ್ತೇ??

ಈ ಕಾರಣದಿಂದ ಕೆ.ಎಲ್.ರಾಹುಲ್ ಅವರ ಬದಲಾಗಿ ಮತ್ತೊಬ್ಬ ಯುವ ಆಟಗಾರ ಇಶಾನ್ ಕಿಶನ್ (Ishan Kishan) ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಇಶಾನ್ ಕಿಶನ್ ಅವರು ಉತ್ತಮ ಫಾರ್ಮ್ ನಲ್ಲಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ ಸ್ಫೋಟಕವಾಗಿ ಬ್ಯಾಟಿಂಗ್ ಮಾಡುತ್ತಾರೆ. ಗ್ರೌಂಡ್ ನ ಯಾವುದೇ ಮೂಲೆಗೆ ಸ್ಟ್ರೋಕ್ ಮಾಡುತ್ತಾರೆ. ಫಾರ್ಮ್ ನಲ್ಲಿದ್ದಾಗ ಇಶಾನ್ ಕಿಶನ್ ಅವರು ಎದುರಾಳಿ ಬೌಲರ್ ಯಾರೇ ಆದರು, ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ. ರೋಹಿತ್ ಶರ್ಮಾ (Rohit Sharma) ಅವರು ಇಲ್ಲದೆ ಇದ್ದಾಗ, ಆ ಜವಾಬ್ದಾರಿಯನ್ನು ಇಶಾನ್ ಕಿಶನ್ ಅವರು ಉತ್ತಮವಾಗಿ ನಿಭಾಯಿಸಬಲ್ಲರು. ಇಶಾನ್ ಕಿಶನ್ ಅವರು ತಂಡಕ್ಕೆ ಬಂದರೆ, ಮತ್ತೊಬ್ಬ ಸೆಹವಾಗ್ ಬಂದ ಹಾಗೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.. ನ್ಯೂಜಿಲೆಂಡ್ ತಂಡದ ವಿರುದ್ಧದ ಪಂದ್ಯಕ್ಕೆ ಈಗ ಇಶಾನ್ ಕಿಶನ್ ಅವರು ಆಯ್ಕೆಯಾಗಿದ್ದು, ಅದರಲ್ಲಿ ಹೇಗೆ ಆಡುತ್ತಾರೆ ಎಂದು ನೋಡಬೇಕಿದೆ. ಇದನ್ನು ಓದಿ.. ಬಿಗ್ ನ್ಯೂಸ್: ಸೆಮಿ ಫೈನಲ್ ಸೋಲಿನ ಬೆನ್ನಲ್ಲೇ ಎಚ್ಚೆತ್ತ ಬಿಸಿಸಿಐ. ಮೊದಲ ಹೆಜ್ಜೆಯಲ್ಲಿ ಗೇಟ್ ಪಾಸ್ ನೀಡುತ್ತಿರುವುದು ಯಾರಿಗೆ ಗೊತ್ತೇ?