ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ಭಾರತದ ಸೋಲಿಗೆ ಅದೊಂದು ಕಾರಣ ಎಂದ ಪಾಕ್ ಕ್ರಿಕೆಟಿಗರು. ಹೌದು ಎಂದು ಒಪ್ಪಿಕೊಂಡ ಭಾರತೀಯ ಫ್ಯಾನ್ಸ್. ಕಾರಣ ಏನಂತೆ ಗೊತ್ತೇ??

11,005

Get real time updates directly on you device, subscribe now.

Cricket News: ಈ ವರ್ಷ ಟಿ20 ವಿಶ್ವಕಪ್ (T20 World Cup) ಗೆಲ್ಲಬೇಕು ಎಂದು ಉತ್ಸಾಹದಿಂದ ಶುರುವಾದ ಟೀಮ್ ಇಂಡಿಯಾ (Team India) ಜರ್ನಿ ನಿನ್ನೆಗೆ ಅಂತ್ಯವಾಗಿದೆ. ಸೂಪರ್ 12 ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ ತಂಡ, ಸೆಮಿಫೈನಲ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತು (India vs England), ಟೀಕೆಗೆ ಗುರಿಯಾಗಿದೆ. ಪ್ರತಿಯೊಬ್ಬರು ಕೂಡ ಭಾರತ ತಂಡದ ಸೋಲಿಗೆ ಕಾರಣ ಏನಿರಬಹುದು ಎಂದು ವಿಮರ್ಶೆ ಮಾಡಲು ಶುರು ಮಾಡಿದ್ದಾರೆ. ಇದೀಗ ಪಾಕಿಸ್ತಾನದ ಮಾಜಿ ಆಟಗಾರರು ಸಹ ಭಾರತದ ಸೋಲಿಗೆ ಕಾರಣ ಏನು ಎಂದು ಚರ್ಚೆ ಮಾಡುತ್ತಿದ್ದಾರೆ.

ಪಾಕಿಸ್ತಾನದ ಮಾಜಿ ಆಟಗಾರರು ಹೇಳುವ ಹಾಗೆ, ಐಪಿಎಲ್ (IPL) ಇಂದಾಗಿ ಭಾರತ ತಂಡ ಟಿ20 ವಿಶ್ವಕಪ್ ನಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತಿಲ್ಲ. 2007ರಲ್ಲಿ ಟಿ20 ವಿಶ್ವಕಪ್ ಮೊದಲ ಸಾರಿ ಶುರುವಾದಾಗ, ಫೈನಲ್ಸ್ ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ ತಂಡ ಕಪ್ ಗೆದ್ದಿತ್ತು, 2008ರಲ್ಲಿ ಐಪಿಎಲ್ ಶುರುವಾಯಿತು. ಐಪಿಎಲ್ ನಂತರ ಭಾರತ ತಂಡ ಟಿ20 ವಿಶ್ವಕಪ್ ನಲ್ಲಿ ಯಶಸ್ವಿಯಾಗಿಲ್ಲ, ಐಪಿಎಲ್ ನಲ್ಲಿ ಭಾರತ ತಂಡದ ಆಟಗಾರರಿಗೆ ಒತ್ತಡ ಹೆಚ್ಚಾಗುತ್ತಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಇದರ ಬಗ್ಗೆ ಪಾಕಿಸ್ತಾನ್ ನ ಮಾಜಿ ಆಟಗಾರರಾದ ಶೋಯೆಬ್ ಮಲಿಕ್ (Shoaib Malik), ವಾಸಿಂ ಅಕ್ರಮ್ (Wasim Akram) ಮತ್ತು ಮಿಸ್ಬಾ ಉಲ್ ಹಕ್ ಅವರು ಅಲ್ಲಿನ ವಾಹಿನಿಯೊಂದರಲ್ಲಿ ಮಾತನಾಡಿದ್ದಾರೆ.. ಇದನ್ನು ಓದಿ.. ಬಿಗ್ ನ್ಯೂಸ್: ಸೆಮಿ ಫೈನಲ್ ಸೋಲಿನ ಬೆನ್ನಲ್ಲೇ ಎಚ್ಚೆತ್ತ ಬಿಸಿಸಿಐ. ಮೊದಲ ಹೆಜ್ಜೆಯಲ್ಲಿ ಗೇಟ್ ಪಾಸ್ ನೀಡುತ್ತಿರುವುದು ಯಾರಿಗೆ ಗೊತ್ತೇ?

“ಐಪಿಎಲ್ ಒಂದು ದೊಡ್ಡ ಇವೆಂಟ್ ಆಗಿರುವುದರಿಂದ, ಅದರಲ್ಲಿ ಹಲವು ದೊಡ್ಡ ದೊಡ್ಡ ಕಂಪನಿಗಳು ಹಣ ಹೂಡುತ್ತದೆ..ಹಾಗಾಗಿ ಅದರಲ್ಲಿ ಆಡುವ ಆಟಗಾರರು ಉತ್ತಮವಾದ ಪ್ರದರ್ಶನ ಕೊಡಲೇಬೇಕು ಎನ್ನುವ ಒತ್ತಡ ಇರುತ್ತದೆ. ಈ ಕಾರಣದಿಂದ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡುವಾಗ, ಅವರ ಮೇಲೆ ಇನ್ನು ಹೆಚ್ಚು ಒತ್ತಡ ಆಗುವುದರಿಂದ, ಮುಕ್ತವಾಗಿ ಆಡಲು ಸಾಧ್ಯವಾಗುತ್ತಿಲ್ಲ. ಕೆ.ಎಲ್.ರಾಹುಲ್ (K L Rahul), ರೋಹಿತ್ ಶರ್ಮಾ (Rohit Sharma) ಅವರು ಟಿ20 ಯಲ್ಲಿ ಶತಕ ಸಿಡಿಸುವುದನ್ನು ನೀವು ನೋಡುತ್ತೀರಿ ಆದರೆ ಅದಕ್ಕೆ ಇನ್ನು ಫಲ ಸಿಕ್ಕಿಲ್ಲ..”ಎಂದಿದ್ದಾರೆ. ಐಪಿಎಲ್ ಇಂದ ಬ್ಯುಸಿನೆಸ್ ಗೆ ಒಳ್ಳೆಯದಾಗುತ್ತದೆ, ಆದರೆ ಆಟಗಾರರ ಮೇಲೆ ಅದು ಪ್ರಭಾವ ಬೀರುತ್ತದೆ ಎನ್ನುವುದು ಪಾಕ್ ಆಟಗಾರರ ಅಭಿಪ್ರಾಯ ಆಗಿದೆ. ಇದನ್ನು ಓದಿ.. Cricket News: ರೋಹಿತ್ ಶರ್ಮ ರವರಿಗಿಂತ ಚೆನ್ನಾಗಿ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುವ ಟಾಪ್ ಮೂವರು ಯಾರ್ಯಾರು ಗೊತ್ತೇ?

Get real time updates directly on you device, subscribe now.