ಬಿಗ್ ನ್ಯೂಸ್: ಸೆಮಿ ಫೈನಲ್ ಸೋಲಿನ ಬೆನ್ನಲ್ಲೇ ಎಚ್ಚೆತ್ತ ಬಿಸಿಸಿಐ. ಮೊದಲ ಹೆಜ್ಜೆಯಲ್ಲಿ ಗೇಟ್ ಪಾಸ್ ನೀಡುತ್ತಿರುವುದು ಯಾರಿಗೆ ಗೊತ್ತೇ?

ಬಿಗ್ ನ್ಯೂಸ್: ಸೆಮಿ ಫೈನಲ್ ಸೋಲಿನ ಬೆನ್ನಲ್ಲೇ ಎಚ್ಚೆತ್ತ ಬಿಸಿಸಿಐ. ಮೊದಲ ಹೆಜ್ಜೆಯಲ್ಲಿ ಗೇಟ್ ಪಾಸ್ ನೀಡುತ್ತಿರುವುದು ಯಾರಿಗೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಕ್ರಿಕೆಟ್ ತಂಡ ನಿನ್ನೆ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ದೇಶದ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿದೆ. ಸೆಮಿ ಫೈನಲ್ ನಲ್ಲಿ ಭಾರತ ಕ್ರಿಕೆಟ್ ತಂಡ ಗೆದ್ದು ಪಾಕಿಸ್ತಾನ ತಂಡವನ್ನು ಫೈನಲ್ ನಲ್ಲಿ ಸೋಲಿಸಿ ಭಾರತಕ್ಕೆ ವಿಶ್ವಕಪ್ ತಂದುಕೊಡುತ್ತದೆ ಎಂಬ ಭರವಸೆ ಇಟ್ಟಿದ್ದ ಇಡೀ ದೇಶದ ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ಕಳಪೆ ಪ್ರದರ್ಶನ ನೀಡುವ ಮೂಲಕ ಒಮ್ಮೆಲೇ ಭಾರತ ಕ್ರಿಕೆಟ್ ತಂಡ ಶಾಕ್ ನೀಡಿದೆ. ಕೋಟ್ಯಾಂತರ ಜನ ಭಾರತ ಈ ಬಾರಿ ಕಪ್ ಗೆಲ್ಲುತ್ತದೆ ಎಂಬ ಭರವಸೆ ಇಟ್ಟುಕೊಂಡಿದ್ದು ಇದೀಗ ಸುಳ್ಳಾಗಿರುವುದು ಅಭಿಮಾನಿಗಳಿಗೆ ಆರಗಿಸಿಕೊಳ್ಳಲಾಗದ ಸಂಗತಿ ಆಗಿರುವುದು ಸುಳ್ಳಲ್ಲ.

ಇನ್ನು ಸಾಕಷ್ಟು ದಿನಗಳಿಂದ ಭಾರತ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿದರೂ ಕೂಡ ಭಾರತ ಕ್ರಿಕೆಟ್ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿರುವುದು ಹಾಗೂ ಹಾಗೂ ಪ್ರಮುಖ ಟೂರ್ನಿಗಳಲ್ಲಿ ಅದರಲ್ಲಿಯೂ ನಾಕ್ ಔಟ್ ಪಂದ್ಯಗಳಲ್ಲಿ ಸೋತು ಹೊರ ಬೀಳುತ್ತಿರುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಟೂರ್ನಿಯ ಕೆಳಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಸೆಮಿಫೈನಲ್ ಹಾಗೂ ಫೈನಲ್ ತಲುಪಿದ ತಕ್ಷಣವೇ ಯಾರು ಊಹಿಸದ ರೀತಿಯಲ್ಲಿ ಬ್ಯಾಟಿಂಗ್ ಹಾಗೂ ಬೋಲಿಂಗ್ ಮಾಡಿ ಸೋಲನ್ನು ಕಾಣುತ್ತಿರುವುದು ನಿಜಕ್ಕೂ ವಿಷಾದಿಸಬೇಕಾದ ಸಂಗತಿ.

ಇದಕ್ಕೆ ಕಾರಣಗಳು ಹಲವಾರು ಆಗಿದ್ದರು ಕೂಡ ಪ್ರಮುಖವಾಗಿ ತಂಡದ ಆಯ್ಕೆ ಹಾಗೂ ತಂಡ ಆಯ್ಕೆಯಾದ ಬಳಿಕ 11ರ ಬಳಗ ರಚಿಸುವಲ್ಲಿ ನಾಯಕ ಹಾಗೂ ಕೋಚ್ ಎಡವುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇನ್ನು ನಾಯಕನಾದವನು ಬ್ಯಾಟಿಂಗ್ನಲ್ಲಿ ಸಂಪೂರ್ಣ ವಿಫಲವಾಗಿದ್ದು, ಅದರ ಜೊತೆಗೆ ಪದೇಪದೇ ಆಟಗಾರರು ವಿಫಲವಾಗುತ್ತಿದ್ದರೂ ಕೂಡ ಅವರಿಗೆ ಚಾನ್ಸ್ ನೀಡಿ ಉತ್ತಮ ಫಾರ್ಮ್ ನಲ್ಲಿ ಇರುವ ಆಟಗಾರರಿಗೆ ಮಣೆ ಹಾಕದೆ ತಪ್ಪು ಮಾಡುತ್ತಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನು 15ರ ಬಳಗವನ್ನು ಆಯ್ಕೆ ಮಾಡುವ ಆಯ್ಕೆ ಸಮಿತಿ ಅಂತೂ ಅದೆಷ್ಟು ಜನರನ್ನು ಕಡೆಗಣಿಸಿ ಪ್ರತಿ ಬಾರಿಯೂ ಯಾವ ಲೆಕ್ಕಾಚಾರದ ಮೇರೆಗೆ ತಂಡವನ್ನು ಆಯ್ಕೆ ಮಾಡುತ್ತಿದೆ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರಿಗೂ ಮೂಡುವಂತೆ ತಂಡವನ್ನು ಆಯ್ಕೆ ಮಾಡುತ್ತಿದ್ದಾರೆ.

ಯಾಕೆಂದರೆ ಭಾರತ ಕ್ರಿಕೆಟ್ ತಂಡದಲ್ಲಿ ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದು ಹಲವಾರು ಜನ ಟಿ 20 ವಿಶ್ವಕಪ್ ನಲ್ಲಿ ಸರಾಗವಾಗಿ ಬ್ಯಾಟಿಂಗ್ ಹಾಗೂ ಬೋಲಿಂಗ್ ಮಾಡುವ ತಾಕತ್ತು ಹೊಂದಿದ್ದರು, ಅದರಲ್ಲಿಯೂ ಹಲವಾರು ತಿಂಗಳುಗಳಿಂದ ಕಳಪೆ ಪ್ರದರ್ಶನ ನೀಡುತ್ತಿರುವ ರಾಹುಲ್, ಅಶ್ವಿನ್, ಭುವನೇಶ್ವರ ಕುಮಾರ್, ಮಹಮ್ಮದ್ ಶಮಿ ಹೀಗೆ ಹಲವಾರು ಆಟಗಾರರ ಸ್ಥಾನವನ್ನು ಸಮರ್ಥವಾಗಿ ತುಂಬಿ ಪಂದ್ಯವನ್ನು ಏಕಾಂಗಿಯಾಗಿ ಗೆಲ್ಲಿಸಿ ಕೊಡುವ ಸಾಮರ್ಥ್ಯವಿರುವ ಯುವ ಆಟಗಾರರು ಸಾಕಷ್ಟು ಜನ ಇದ್ದರು. ಇನ್ನು ಅಚ್ಚರಿ ಏನು ಎಂದರೆ ಕೆಲವರು ಹದಿನೈದರ ಬಳಗಕ್ಕೆ ಕೂಡ ಆಯ್ಕೆಯಾಗಿದ್ದರು ಒಂದು ಪಂದ್ಯ ಆಡದೆ ವಿಶ್ವ ಕಪ್ ನಲ್ಲಿ ಹಾಗೆ ಉಳಿದಿದ್ದಾರೆ

ಹೀಗೆ ಒಂದು ಕಡೆ ಆಯ್ಕೆ ಸಮಿತಿ ಎಡವಟ್ಟು ಮಾಡುತ್ತಿದ್ದರೆ ಮತ್ತೊಂದು ಕಡೆ ನಾಯಕನಾದ ರೋಹಿತ್ ಶರ್ಮ ಹಾಗೂ ಕೋಚ್ ಆಗಿರುವ ರಾಹುಲ್ ದ್ರಾವಿಡ್ ರವರು ಸದಾ ಅನಗತ್ಯವಾಗಿರುವ ಆಟಗಾರರನ್ನು ಆಯ್ಕೆ ಮಾಡಿ ಭಾರತದ ಸೋಲಿಗೆ ನೇರ ಕಾರಣವಾಗಿದ್ದಾರೆ ಎಂದರೆ ತಪ್ಪಾಗಲಾರದು. ಇದೀಗ ಇದೇ ಕಾರಣಕ್ಕಾಗಿ ಸೆಮಿಫೈನಲ್ ನಲ್ಲಿ ಸೋತು ತಕ್ಷಣ ಬಿಸಿಸಿಐ ಎಚ್ಚೆತ್ತುಕೊಂಡಿದ್ದು ಮೊದಲ ಹಂತವಾಗಿ ತಂಡದಲ್ಲಿ ಬದಲಾವಣೆ ಮಾಡಲು ಮುಂದಾಗಿದೆ. ಹೌದು ಸ್ನೇಹಿತರೆ, ಖಂಡಿತವಾಗಲೂ ಭಾರತ ಕ್ರಿಕೆಟ್ ತಂಡದಲ್ಲಿ ಬದಲಾವಣೆಗಳು ನಡೆಯುತ್ತಿದ್ದು ಆಯ್ಕೆ ಸಮಿತಿಯಿಂದ ಹಿಡಿದು ಆಟವಾರುವ 11ರ ಬಳಗದವರೆಗೂ ಬದಲಾವಣೆಗಳು ಖಚಿತವಾಗಿವೆ.

ಈ ಸಮಯದಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಅಧಿಕಾರಿ ಒಬ್ಬರು ತಂಡದ ಪ್ರಮುಖ ಆಟಗಾರರು ಇಂಜುರಿಯಾದಾಗ ಹಾಗೂ ಫಾರ್ಮ್ ಕಳೆದುಕೊಂಡಾಗ ಸಮರ್ಥವಾದ ಆಟಗಾರರನ್ನು ಆಯ್ಕೆ ಮಾಡುವಲ್ಲಿ ಮೊದಲ ಹಂತದಲ್ಲಿ ಆಯ್ಕೆ ಸಮಿತಿ ನೇರವಾಗಿ ವಿಫಲವಾಗಿದೆ, ಅಚ್ಚರಿಯೇನೆಂದರೆ ಆಯ್ಕೆ ಸಮಿತಿಯಲ್ಲಿರುವ ಯಾವೊಬ್ಬ ಆಟಗಾರರನ್ನು ಟಿ ಟ್ವೆಂಟಿ ಕ್ರಿಕೆಟ್ ಆಡಿಯೇ ಇಲ್ಲ, ಹೀಗಿರುವಾಗ ಬಿಸಿಸಿಐಸಿ ಮುಖ್ಯ ಆಯ್ಕೆದಾರರಾಗಿರುವ ಚೇತನ್ ಶರ್ಮಾ ರವರನ್ನು ಮೊದಲ ಹಂತದಲ್ಲಿ ಕೆಲಸದಿಂದ ತೆಗೆದುಹಾಕುವುದು ಬಹುತೇಕ ಖಚಿತವಾಗಿದ್ದು, ಮುಂದಿನ 2024ರ ವಿಶ್ವ ಕಪ್ ಅನ್ನು ಗಮನದಲ್ಲಿ ಇಟ್ಟುಕೊಂಡು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ, ಹಲವಾರು ಆಟಗಾರರು ಇಂಜುರಿ ಆಗಿರಬಹುದು ಆದರೆ ಆಯ್ಕೆ ಸಮಿತಿಗೆ ಸಂಪೂರ್ಣ ಜವಾಬ್ದಾರಿಯನ್ನು ವಹಿಸಲಾಗಿತ್ತು ಈಗ ಆಯ್ಕೆ ಸಮಿತಿ ಮೊದಲು ಉತ್ತರ ಕೊಡಬೇಕು ಖಂಡಿತ ಹೊಸ ಆಯ್ಕೆ ಸಮಿತಿ ಬಂದರೆ ಭಾರತ ಕ್ರಿಕೆಟ್ ತಂಡದಲ್ಲಿ ಬದಲಾವಣೆಗಳು ಆಗಲಿದೆ ಎಂದು ಬಿಸಿಸಿಐ ಹಿರಿಯ ಅಧಿಕಾರಿ ಖಚಿತಪಡಿಸಿದ್ದಾರೆ.