Cricket News: ರೋಹಿತ್ ಶರ್ಮ ರವರಿಗಿಂತ ಚೆನ್ನಾಗಿ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುವ ಟಾಪ್ ಮೂವರು ಯಾರ್ಯಾರು ಗೊತ್ತೇ?
Cricket News: ರೋಹಿತ್ ಶರ್ಮ ರವರಿಗಿಂತ ಚೆನ್ನಾಗಿ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುವ ಟಾಪ್ ಮೂವರು ಯಾರ್ಯಾರು ಗೊತ್ತೇ?
Cricket News: ಭಾರತ ಕ್ರಿಕೆಟ್ ತಂಡಕ್ಕೆ ರೋಹಿತ್ ಶರ್ಮಾ (Rohit Sharma) ಅವರು ಕ್ಯಾಪ್ಟನ್ ಆಗಿದ್ದು 2021ರ ಟಿ20 ವಿಶ್ವಕಪ್ ನಂತರ. ಈ ಟೂರ್ನಿಯಲ್ಲಿ ಭಾರತ ತಂಡ ಲೀಗ್ ಹಂತದಲ್ಲೇ ಸೋತ ಕಾರಣ, ಐದು ಸಾರಿ ಐಪಿಎಲ್ (IPL) ಟ್ರೋಫಿ ಗೆದ್ದಿರುವ ಎಂಐ ತಂಡದ ಕ್ಯಾಪ್ಟನ್ ರೋಹಿತ್ ಶರ್ಮ ಅವರನ್ನು ಭಾರತ ತಂಡಕ್ಕೆ ಕ್ಯಾಪ್ಟನ್ ಆಗಿ ಮಾಡಲಾಯಿತು. ರೋಹಿತ್ ಶರ್ಮಾ ಅವರ ಉತ್ತಮ ಕ್ಯಾಪ್ಟನ್ಸಿಯಲ್ಲಿ ಹಲವು ಸೀರೀಸ್ ಗಳನ್ನು ಭಾರತ ತಂಡ ಗೆದ್ದಿದ್ದರು ಸಹ, ವಿಶ್ವಕಪ್ ನಲ್ಲಿ ಮತ್ತು ಇತ್ತೀಚೆಗೆ ನಡೆದ ಏಷ್ಯಾಕಪ್ (Asiacup) ಅಂತಹ ಮುಖ್ಯ ಸೀರೀಸ್ ಗಳಲ್ಲಿ ಸೋತಿದೆ. ಮುಂದಿನ ವಿಶ್ವಕಪ್ ನಡೆಯುವುದು 2024ಕ್ಕೆ, ಅಲ್ಲಿಯವರೆಗೂ ರೋಹಿತ್ ಶರ್ಮಾ ಅವರಿಗೆ 37 ವರ್ಷವಾಗಿರುತ್ತದೆ, ಹಾಗಾಗಿ ಅವರು ವಿಶ್ವಕಪ್ (T20 World Cup) ತಂಡದ ಕ್ಯಾಪ್ಟನ್ ಆಗಿ ಮುಂದುವರೆಯುವ ಬಗ್ಗೆ ಖಚಿತ ಮಾಹಿತಿ ಇಲ್ಲ.. ರೋಹಿತ್ ಅವರನ್ನು ಹೊರತುಪಡಿಸಿ, ಭಾರತ ತಂಡದ ಕ್ಯಾಪ್ಟನ್ ಆಗುವ ಅರ್ಹತೆ ಇರುವ ಮೂವರು ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..
ಹಾರ್ದಿಕ್ ಪಾಂಡ್ಯ (Hardik Pandya) :- ಇವರು ಈಗಾಗಲೇ ಕ್ಯಾಪ್ಟನ್ ಆಗಿ ಐಪಿಎಲ್ ನಲ್ಲಿ ಟ್ರೋಫಿ ಗೆದ್ದು, ಪ್ರೂವ್ ಮಾಡಿಕೊಂಡಿದ್ದಾರೆ. ಭಾರತ ತಂಡದಲ್ಲಿ ಸ್ಟಾರ್ ಆಲ್ ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಭಾರತ ತಂಡದ ಕ್ಯಾಪ್ಟನ್ ಆಗಿ ಕೆಲವು ಐರ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಸೀರೀಸ್ ಗಳನ್ನು ಹಾರ್ದಿಕ್ ಪಾಂಡ್ಯ ಅವರು ಮುನ್ನಡೆಸಿ ಗೆಲುವುಡ ಸಾಧಿಸಿದ್ದಾರೆ. ಇವರು ಧೋನಿ (MS Dhoni), ವಿರಾಟ್ ಕೋಹ್ಲಿ ಮತ್ತು ರೋಹಿತ್ ಶರ್ಮಾ ಅವರ ಕ್ಯಾಪ್ಟನ್ಸಿಯಲ್ಲಿ ಆಡಿರುವುದರಿಂದ, ಅವರ ಶೈಲಿಯಲ್ಲಿ ತಂಡ ಮುನ್ನಡೆಸುವುದನ್ನು ಸಹ ಕಲಿತಿದ್ದಾರೆ. ಹಾಗಾಗಿ, ಮುಂದಿನ ಕ್ಯಾಪ್ಟನ್ ಆಗಲು ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳು ಹೆಚ್ಚಾಗಿದೆ. ಇದನ್ನು ಓದಿ.. T20 World Cup: K L ರಾಹುಲ್ ಅನ್ನು ತೆಗೆಯುತ್ತಿರೋ ಬಿಡುತ್ತೀರೋ, ಮೊದಲು ಇವರಿಬ್ಬರನ್ನು ತೆಗೆಯಿರಿ ಎಂದ ಫ್ಯಾನ್ಸ್. ವಿಶ್ವಕಪ್ ಸೋಲಿಗೆ ನೇರ ಕಾರಣ ಯಾರು ಅಂತೇ ಗೊತ್ತೆ?
ಕೆ.ಎಲ್.ರಾಹುಲ್ (K L Rahul) :- ಕ್ಯಾಪ್ಟನ್ ಸ್ಥಾನಕ್ಕೆ ಮುಂದಿನ ಆಯ್ಕೆ ಕೆ.ಎಲ್.ರಾಹುಲ್ ಅವರು, ಪ್ರಸ್ತುತ ಇವರು ಟೀಮ್ ಇಂಡಿಯಾದ (Team India) ವೈಸ್ ಕ್ಯಾಪ್ಟನ್ ಆಗಿದ್ದಾರೆ. ಐಪಿಎಲ್ ನಲ್ಲಿ ಎರಡು ವರ್ಷಗಳ ಕಾಲ ಪಂಜಾಬ್ ಸೂಪರ್ ಕಿಂಗ್ಸ್ (PBKS) ತಂಡದ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ್ದಾರೆ. ಪ್ರಸ್ತುತ ಲಕ್ನೌ ಸೂಪರ್ ಜೈಂಟ್ಸ್ ತಂಡದ ಕ್ಯಾಪ್ಟನ್ ಆಗಿದ್ದಾರೆ ರಾಹುಲ್. ಕ್ಯಾಪ್ಟನ್ಸಿಯಲ್ಲಿ ಇವರ ಬ್ಯಾಟಿಂಗ್ ಪರ್ಫಾರ್ಮೆನ್ಸ್ ಕೂಡ ಚೆನ್ನಾಗಿರುತ್ತದೆ. ಹಾಗಾಗಿ ರಾಹುಲ್ ಅವರನ್ನು ಸಹ ಕ್ಯಾಪ್ಟನ್ ಆಗಿ ಆಯ್ಕೆ ಮಾಡುವ ಸಾಧ್ಯತೆಗಳು ಹೆಚ್ಚಾಗಿದೆ. ಇದನ್ನು ಓದಿ.. T20 World Cup: ಹೀನಾಯವಾಗಿ ವಿಶ್ವಕಪ್ ನಿಂದ ಹೊರ ಬಿದ್ದ ಬಳಿಕ ದ್ರಾವಿಡ್ ಪರೋಕ್ಷ ಆರೋಪ ಹೊರಿಸಿದ್ದು ಯಾರಮೇಲೆ ಗೊತ್ತೇ?? ಅಭಿಮಾನಿಗಳು ಮತ್ತಷ್ಟು ಗರಂ.
ರಿಷಬ್ ಪಂತ್ (Rishab Pant) :- ಇವರು ಈಗಾಗಲೇ ಸೌತ್ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಸೀರಿಸ್ ಅನ್ನು ಕ್ಯಾಪ್ಟನ್ ಆಗಿ ಮುನ್ನಡೆಸಿದ್ದಾರೆ. ಕ್ಯಾಪ್ಟನ್ ಆಗಿ ಇವರ ಸ್ಕಿಲ್ಸ್ ಚೆನ್ನಾಗಿದೆ. ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಆಗಿ, ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರಸ್ಥಾನಕ್ಕೆ ಬರುವ ಹಾಗೆ ಮಾಡಿದ್ದರು. ಇವರು ಕೂಡ ಧೋನಿ, ವಿರಾಟ್ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಅವರ ಕ್ಯಾಪ್ಟನ್ಸಿಯಲ್ಲಿ ಆದಿರುವುದರಿಂದ, ಉತ್ತಮ ಅನುಭವವಿದೆ. ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಲು, ಇವರು ಕೂಡ ಒಂದು ಒಳ್ಳೆಯ ಆಯ್ಕೆಯಾಗಿದ್ದಾರೆ. ಇದನ್ನು ಓದಿ.. Business Idea: ಅತಿ ಕಡಿಮೆ ಸಮಯದಲ್ಲಿ ಕೋಟಿ ಕೋಟಿ ಗಳಿಸುವ ರಿಸ್ಕ್ ಇಲ್ಲದೆ, ಬಂಡವಾಳ ಇಲ್ಲದೆ ಮಾಡಬಹುದಾದ ಬಿಸಿನೆಸ್ ಯಾವುದು ಗೊತ್ತೇ??