ಕರುನಾಡ ವಾಣಿ
ಇದು ನಿಮ್ಮ ಧ್ವನಿ

T20 World Cup: K L ರಾಹುಲ್ ಅನ್ನು ತೆಗೆಯುತ್ತಿರೋ ಬಿಡುತ್ತೀರೋ, ಮೊದಲು ಇವರಿಬ್ಬರನ್ನು ತೆಗೆಯಿರಿ ಎಂದ ಫ್ಯಾನ್ಸ್. ವಿಶ್ವಕಪ್ ಸೋಲಿಗೆ ನೇರ ಕಾರಣ ಯಾರು ಅಂತೇ ಗೊತ್ತೆ?

T20 World Cup: K L ರಾಹುಲ್ ಅನ್ನು ತೆಗೆಯುತ್ತಿರೋ ಬಿಡುತ್ತೀರೋ, ಮೊದಲು ಇವರಿಬ್ಬರನ್ನು ತೆಗೆಯಿರಿ ಎಂದ ಫ್ಯಾನ್ಸ್. ವಿಶ್ವಕಪ್ ಸೋಲಿಗೆ ನೇರ ಕಾರಣ ಯಾರು ಅಂತೇ ಗೊತ್ತೆ?

5,726

T20 World Cup: ಭಾರತದ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಈ ವರ್ಷ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಗೆದ್ದು, ಕಪ್ ತರುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಇಂದು ನಡೆದ, ಭಾರತ ವರ್ಸಸ್ ಇಂಗ್ಲೆಂಡ್ (India vs England) ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ ನಮ್ಮ ಭಾರತ ತಂಡ ಇಂಗ್ಲೆಂಡ್ ಎದುರು ಹೀನಾಯವಾಗಿ ಸೋಲು ಕಂಡಿದೆ. ಬ್ಯಾಟಿಂಗ್ ನಲ್ಲಿ ಉತ್ತಮ ಆರಂಭ ಪಡೆದು, 168 ರನ್ ಗಳ ಟಾರ್ಗೆಟ್ ನೀಡಿದರು ಸಹ, ಬೌಲಿಂಗ್ ನಲ್ಲಿ ಒಂದು ವಿಕಟ್ ಅನ್ನು ಸಹ ಪಡೆಯಲಾಗದೆ, ಸೋತಿದೆ ಭಾರತ. ಈ ಸೋಲಿನಿಂದ ಭಾರತ ಮನೆಗೆ ವಾಪಸ್ ಬರುತ್ತಿದೆ.

Follow us on Google News

ಭಾನುವಾರ ನಡೆಯಲಿರುವ ಟಿ20 ವಿಶ್ವಕಪ್ ಫಿನಾಲೆಯಲ್ಲಿ ಪಾಕಿಸ್ತಾನ್ ಮತ್ತು ಇಂಗ್ಲೆಂಡ್ ತಂಡ ಮುಖಾಮುಖಿಯಾಗಲಿದೆ. ಫೈನಲ್ಸ್ ನಲ್ಲಿ ಭಾರತ (Team India) ಮತ್ತು ಪಾಕಿಸ್ತಾನ್ (Pakistan) ತಂಡ ಮುಖಾಮುಖಿಯಾಗಬಹುದು ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ ಆ ನಿರೀಕ್ಷೆಯ ಹಾಗೆ ನಡೆಯದೆ ಟೀಮ್ ಇಂಡಿಯಾ ಸೆಮಿಫೈನಲ್ಸ್ ಹಂತದಲ್ಲಿ ಸೋತಿದೆ. ವಿಶ್ವಕಪ್ ನಲ್ಲಿ ಆರಂಭದಿಂದಲೂ ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಾ, ಸೂಪರ್ 12 ಹಂತದಲ್ಲಿ 4 ಪಂದ್ಯಗಳಲ್ಲಿ ಗೆದ್ದು, ಗ್ರೂಪ್ ಬಿ ನಲ್ಲಿ ಮೊದಲ ಸ್ಥಾನದಲ್ಲಿ ಇದ್ದು, ವಿಶ್ವಕಪ್ ಗೆಲ್ಲುವ ಭರವಸೆ ಮೂಡಿಸಿದರು ಸಹ, ಭಾರತ ತಂಡ ಸೆಮಿಫೈನಲ್ಸ್ ನಲ್ಲಿ ನಿರಾಸೆ ಮೂಡಿಸಿ ಸೋತಿದೆ. ಇದನ್ನು ಓದಿ.. T20 World Cup: ಹೀನಾಯವಾಗಿ ವಿಶ್ವಕಪ್ ನಿಂದ ಹೊರ ಬಿದ್ದ ಬಳಿಕ ದ್ರಾವಿಡ್ ಪರೋಕ್ಷ ಆರೋಪ ಹೊರಿಸಿದ್ದು ಯಾರಮೇಲೆ ಗೊತ್ತೇ?? ಅಭಿಮಾನಿಗಳು ಮತ್ತಷ್ಟು ಗರಂ.

ಎಲ್ಲಾ ಅಭಿಮಾನಿಗಳ ನಿರೀಕ್ಷೆ ಸುಳ್ಳಾದಾಗ, ಭಾರತ ತಂಡದ ಅಭಿಮಾನಿಗಳು ಕೆ.ಎಲ್.ರಾಹುಲ್ (K L Rahul), ರೋಹಿತ್ ಶರ್ಮಾ (Rohit Sharma) ಮತ್ತು ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮೊದಲು ಕೆ.ಎಲ್.ರಾಹುಲ್ ಮತ್ತು ರೋಹಿತ್ ಶರ್ಮ ಅವರನ್ನು ತಂಡದಿಂದ ಹೊರಗೆ ಹಾಕಬೇಕು ಎನ್ನುತ್ತಿದ್ದಾರೆ ನೆಟ್ಟಿಗರು. ಅಷ್ಟೇ ಅಲ್ಲದೆ, Sack Rohit Sharma Rahul Dravid ಎನ್ನುವ ಹ್ಯಾಶ್ ಟ್ಯಾಗ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಇದೊಂದು ಹೀನಾಯ ಸೋಲು ಎಂದು ತಂಡಕ್ಕೆ ಛೀಮಾರಿ ಹಾಕುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ.. Business Idea: ಅತಿ ಕಡಿಮೆ ಸಮಯದಲ್ಲಿ ಕೋಟಿ ಕೋಟಿ ಗಳಿಸುವ ರಿಸ್ಕ್ ಇಲ್ಲದೆ, ಬಂಡವಾಳ ಇಲ್ಲದೆ ಮಾಡಬಹುದಾದ ಬಿಸಿನೆಸ್ ಯಾವುದು ಗೊತ್ತೇ??