Cricket News: ಬಿಗ್ ನ್ಯೂಸ್: ಟಿ 20 ವಿಶ್ವಕಪ್ ಹೀನಾಯ ಸೋಲಿನ ಬಳಿಕ ಹೊರಬೀಳುತ್ತಿರುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ?? ಇದು ತೆಗೆದುಕೊಳ್ಳಬೇಕಾದ ನಿರ್ಧಾರ.
Cricket News: ಬಿಗ್ ನ್ಯೂಸ್: ಟಿ 20 ವಿಶ್ವಕಪ್ ಹೀನಾಯ ಸೋಲಿನ ಬಳಿಕ ಹೊರಬೀಳುತ್ತಿರುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ?? ಇದು ತೆಗೆದುಕೊಳ್ಳಬೇಕಾದ ನಿರ್ಧಾರ.
Cricket News: ಟಿ20 ವಿಶ್ವಕಪ್ (T20 World Cup 2022) ನಲ್ಲಿ ಭಾರತ ತಂಡವು ಸೆಮಿಫೈನಲ್ಸ್ ಹಂತದಲ್ಲಿ ಇಂಗ್ಲೆಂಡ್ (India vs England) ವಿರುದ್ಧ ಹೀನಾಯವಾಗಿ ಸೋತ ನಂತರ ಹಲವು ವಿಷಯಗಳು ಚರ್ಚೆಯಾಗುತ್ತಿದೆ, ಭಾರತ ತಂಡದ ಬಗ್ಗೆ ಟೀಕೆಗಳು ಕೂಡ ವ್ಯಕ್ತವಾಗುತ್ತಿದೆ. ಹೆಚ್ಚಾಗಿ, ಬಿಸಿಸಿಐ ಆಯ್ಕೆ ಮಾಡಿದ ಪ್ಲೇಯಿಂಗ್ 11 ಸಮರ್ಥವಾಗಿ ಇರಲಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ. ಸ್ಪಿನ್ ಮಾಂತ್ರಿಕ ಯುಜವೇಂದ್ರ ಚಾಹಲ್ (Yuzvendra Chahal) ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಜೊತೆಗೆ ಒಂದು ವರ್ಷದಿಂದ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡದೆ ಇದ್ದ ರವಿಚಂದ್ರನ್ ಅಶ್ವಿನ್ ಮತ್ತು ಮೊಹಮ್ಮದ್ ಶಮಿ ಅವರಿಗೆ ಅವಕಾಶ ಕೊಟ್ಟಿದ್ದಕ್ಕೆ ಪ್ರಶ್ನೆಗಳು ಕೇಳುಬರುತ್ತಿದೆ. ಅಲ್ಲದೆ, ಮುಂದಿನ ಟಿ20 ಮ್ಯಾಚ್ ಗಳಲ್ಲಿ ಟೀಮ್ ಇಂಡಿಯಾ ಇಂದ ಹೊರಗುಳಿಯಬಹುದಾದ ಆಟಗಾರರು ಯಾರು ಎನ್ನುವ ಚರ್ಚೆ ಸಹ ಶುರುವಾಗಿದ್ದು, ಆ ಐವರು ಆಟಗಾರರು ಯಾರಿರಬಹುದು ಎಂದು ತಿಳಿಸುತ್ತೇವೆ ನೋಡಿ..
ಅಕ್ಷರ್ ಪಟೇಲ್ (Axar Patel) :- ರವೀಂದ್ರ ಜಡೇಜಾ (Ravindra Jadeja) ಅವರಿಗೆ ಇಂಜುರಿ ಆದ ಕಾರಣ ಅಕ್ಷರ್ ಪಟೇಲ್ ಅವರನ್ನು ಟೀಮ್ ಇಂಡಿಯಾಗೆ ಆಯ್ಕೆ ಮಾಡಿಕೊಳ್ಳಲಾಯಿತು. ಆಸ್ಟ್ರೇಲಿಯಾ ಸೀರಿಸ್ ನಲ್ಲಿ 8 ವಿಕೆಟ್ ಪಡೆದು 6.30 ಎಕಾನಮಿಯಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ್ದ ಈ ಆಟಗಾರ, ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ವಿಶ್ವಕಪ್ ನಲ್ಲಿ 8.62 ಎಕಾನಮಿಯಲ್ಲಿ ಪಡೆದದ್ದು 3 ವಿಕೆಟ್ ಮಾತ್ರ. ಬ್ಯಾಟಿಂಗ್ ನಲ್ಲಿ ಸಹ ಇವರು ಉತ್ತಮ ಪ್ರದರ್ಶನ ನೀಡಿಲ್ಲ. ಹಾಗಾಗಿ ಮುಂಬರುವ ನ್ಯೂಜಿಲೆಂಡ್ ಸೀರೀಸ್ (New Zealand) ನಲ್ಲಿ ಸಹ ಇವರಿಗೆ ಅವಕಾಶ ನೀಡಿಲ್ಲ. ಇಲ್ಲಿಗೆ ಇವರ ಕೆರಿಯರ್ ಅಂತ್ಯವಾಯಿತೆ ಎನ್ನುವ ಅನುಮಾನ ಶುರುವಾಗಿದೆ. ಇದನ್ನು ಓದಿ.. Cricket News: ರಾಹುಲ್ ಬಿಟ್ಟರೆ ಅದ್ಭುತ ಆರಂಭಿಕನಾಗುವ ಆಟಗಾರ ಯಾರು ಗೊತ್ತೇ?? ಈತ ಬಂದರೆ ಮತ್ತೊಬ್ಬ ಸೆಹ್ವಾಗ್ ಬಂದ ಹಾಗೆ. ಯಾರು ಗೊತ್ತೇ ಆ ಟಾಪ್ ಬ್ಯಾಟ್ಸಮನ್??
ಮೊಹಮ್ಮದ್ ಶಮಿ (Mohammad Shami) :- ಜಸ್ಪ್ರೀತ್ ಬುಮ್ರ (Jaspreet Bumrah) ಅವರಿಗೆ ಇಂಜುರಿ ಆದ ಕಾರಣ ಇವರನ್ನು ವಿಶ್ವಕಪ್ ಗೆ ಆಯ್ಕೆ ಮಾಡಿತು ಬಿಸಿಸಿಐ. ಕಳೆದ ವರ್ಷ ನಡೆದ ವಿಶ್ವಕಪ್ ಪಂದ್ಯಗಳಲ್ಲಿ ಶಮಿ ಅವರು ಕಳಪೆ ಪ್ರದರ್ಶನ ನೀಡಿದ ಕಾರಣದಿಂದಲೇ ತಂಡದಿಂದ ಹೊರಗುಳಿದಿದ್ದರು. ಒಂದು ವರ್ಷದ ಬಳಿಕ ಮತ್ತೆ ಕಂಬ್ಯಾಕ್ ಮಾಡಿದ ಶಮಿ ಅವರು, ನಿರೀಕ್ಷೆಯ ಮಟ್ಟದ ಪ್ರದರ್ಶನ ನೀಡಲಿಲ್ಲ. 7.15 ಎಕಾನಮಿಯಲ್ಲಿ ಬೌಲಿಂಗ್ ಮಾಡುತ್ತಿದ್ದ ಇವರು, ಪಡೆದದ್ದು 7 ವಿಕೆಟ್ಸ್ ಮಾತ್ರ, ಹಾಗಾಗಿ ಶಮಿ ಅವರನ್ನು ಮುಂದಿನ ಟೂರ್ನಿಗಳಿಗೆ ಆಯ್ಕೆ ಮಾಡುವುದು ಕಷ್ಟವಾಗಿದೆ.
ರವಿಚಂದ್ರನ್ ಅಶ್ವಿನ್ (Ravichandran Ashwin) :- ಟೆಸ್ಟ್ ಕ್ರಿಕೆಟ್ ನಲ್ಲಿ ಲೆಜೆಂಡ್ ಎನ್ನಿಸಿಕೊಂಡಿರುವ ರವಿಚಂದ್ರನ್ ಅಶ್ವಿನ್ ಅವರು ಟಿ20 ಮಾದರಿಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಇವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡು, ಬಿಸಿಸಿಐ (BCCI) ಶಾಕ್ ನೀಡಿತ್ತು. ಅಶ್ವಿನ್ ಅವರು ಟಿ20 ಮಾದರಿಯ ಪಂದ್ಯಗಳು ತಮಗೆ ಸೂಕ್ತವಲ್ಲ ಎಂದು ಮತ್ತೊಮ್ಮೆ ಸಾಬೀತು ಮಾಡಿದರು. ವಿಶ್ವಕಪ್ (T20 World Cup) ನಲ್ಲಿ ಆಡಿದ ಪಂದ್ಯಗಳಲ್ಲಿ ಅಶ್ವಿನ್ ಅವರು ಪಡೆದದ್ದು ಕೇವಲ 6 ವಿಕೆಟ್ಸ್ ಮಾತ್ರ. ಹಾಗಾಗಿ ಇವರು ಕೂಡ ಮುಂದಿನ ಪಂದ್ಯಗಳಿಗೆ ಆಯ್ಕೆಯಾಗುವುದು ಕಷ್ಟವೇ ಇದೆ. ಇದನ್ನು ಓದಿ.. Cricket News: ಭಾರತದ ಸೋಲಿಗೆ ಅದೊಂದು ಕಾರಣ ಎಂದ ಪಾಕ್ ಕ್ರಿಕೆಟಿಗರು. ಹೌದು ಎಂದು ಒಪ್ಪಿಕೊಂಡ ಭಾರತೀಯ ಫ್ಯಾನ್ಸ್. ಕಾರಣ ಏನಂತೆ ಗೊತ್ತೇ??
ದಿನೇಶ್ ಕಾರ್ತಿಕ್ (Dinesh Karthik) :- ನ್ಯಾಷನಲ್ ಟೀಮ್ ಇಂದ ದೂರವಾಗಿದ್ದ ದಿನೇಶ್ ಕಾರ್ತಿಕ್ ಅವರು ಆಯ್ಕೆಯಾಗಿದ್ದು, ಐಪಿಎಲ್ (IPL) ನಲ್ಲಿ ನೀಡಿದ ಅದ್ಭುತ ಪ್ರದರ್ಶನದ ಮೂಲಕ. ಆರ್ಸಿಬಿ (RCB) ತಂಡದ ಪರವಾಗಿ, ಆಪತ್ಬಾಂಧವ ಆಗಿದ್ದ ಡಿಕೆ ಅವರು 2022ರ ಐಪಿಎಲ್ ನಲ್ಲಿ 330 ರನ್ಸ್ ಚಚ್ಚಿದರು. ಬಳಿಕ ಆದರೆ ವಿಶ್ವಕಪ್ ನಲ್ಲಿ ಡಿಕೆ ಅವರು ಉತ್ತಮ ಪ್ರದರ್ಶನ ನೀಡಲಿಲ್ಲ. ಇವರಿಗೆ ಸಿಕ್ಕ ಅವಕಾಶಗಳು ಕಡಿಮೆ ಆಗಿದ್ದವು, ಜೊತೆಗೆ ಕಾರ್ತಿಕ್ ಅವರು ಸಿಕ್ಕ ಅವಕಾಶದಲ್ಲಿ 66.63 ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡಿದ ಕಾರ್ತಿಕ್ ಅವರು ಕೇವಲ 14 ರನ್ ಗಳಿಸಿದರು, ಹಾಗಾಗಿ ಮುಂದಿನ ಟೂರ್ನಿಗೆ ಇವರು ಆಯ್ಕೆಯಾಗುವುದು ಕಷ್ಟ ಎನ್ನಲಾಗುತ್ತಿದೆ.
ರೋಹಿತ್ ಶರ್ಮಾ (Rohit Sharma) :- ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಈಗ ಭಾರತ ತಂಡದ (Team India) ಪರವಾಗಿ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಈ ಹಿಂದೆ ಟಿ20 ಪಂದ್ಯಗಳಲ್ಲಿ 4 ಶತಕ ಗಳಿಸಿರುವ ರೋಹಿತ್ ಅವರು ಈ ವರ್ಷ ಟಿ20 ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ ನೀಡಿದರು. ಆಡಿದ 6 ಪಂದ್ಯಗಳಲ್ಲಿ ಇವರು ಗಳಿಸಿದ್ದು ಕೇವಲ 116 ರನ್ ಗಳು, ಅದರಲ್ಲಿ ಒಂದು ಅರ್ಧಶತಕ ಸೇರಿದೆ. ಸೆಮಿಫೈನಲ್ಸ್ ನಲ್ಲಿ ಕಡಿಮೆ ರನ್ ಗಳಿಸಿ ಪೆವಿಲಿಯನ್ ಗೆ ತೆರಳಿದರು ರೋಹಿತ್ ಶರ್ಮಾ, ಇವರ ವಿಂಟೇಜ್ ಆಟ ಕಾಣಿಸುತ್ತಿಲ್ಲ. ಜೊತೆಗೆ ಭಾರ್ಸ್ಟಾ ತಂಡವು ಸೋಲುತ್ತಿರುವ ಕಾರಣ ರೋಹಿತ್ ಶರ್ಮ ಅವರು ತಂಡದಿಂದ ಹೊರಗಿಡಬಹುದು ಎನ್ನಲಾಗುತ್ತಿದೆ. ಇದನ್ನು ಓದಿ.. ಬಿಗ್ ನ್ಯೂಸ್: ಸೆಮಿ ಫೈನಲ್ ಸೋಲಿನ ಬೆನ್ನಲ್ಲೇ ಎಚ್ಚೆತ್ತ ಬಿಸಿಸಿಐ. ಮೊದಲ ಹೆಜ್ಜೆಯಲ್ಲಿ ಗೇಟ್ ಪಾಸ್ ನೀಡುತ್ತಿರುವುದು ಯಾರಿಗೆ ಗೊತ್ತೇ?