T20 World Cup: ಸೆಮಿಫೈನಲ್ ನಲ್ಲಿ ರಿಷಬ್-ದಿನೇಶ್ ರಲ್ಲಿ ಯಾರು ಆಡಬೇಕು ಎಂಬುದನ್ನು ತಿಳಿಸಿದ ರವಿಶಾಸ್ತ್ರಿ. ಅಚ್ಚರಿಯಾಗಿ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?

T20 World Cup: ಸೆಮಿಫೈನಲ್ ನಲ್ಲಿ ರಿಷಬ್-ದಿನೇಶ್ ರಲ್ಲಿ ಯಾರು ಆಡಬೇಕು ಎಂಬುದನ್ನು ತಿಳಿಸಿದ ರವಿಶಾಸ್ತ್ರಿ. ಅಚ್ಚರಿಯಾಗಿ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?

T20 World Cup: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು (Team India) ಈಗ 2ನೇ ಅಗ್ರಸ್ತಾನದಲ್ಲಿ ಸೆಮಿಫೈನಲ್ಸ್ ಗೆ ಎಂಟ್ರಿ ಕೊಟ್ಟಿದೆ. ಸೂಪರ್ 12 ಹಂತದಲ್ಲಿ ಭಾರತ ತಂಡ ಜಿಂಬಾಬ್ವೆ ವಿರುದ್ಧ 5ನೇ ಪಂದ್ಯ ಆಡುವ ಮೊದಲೇ, ಸೆಮಿಫೈನಲ್ಸ್ ಗೆ ಅರ್ಹತೆ ಪಡೆದಿತ್ತು. ನವೆಂಬರ್ 6ರಂದು ನಡೆದ ಪಂದ್ಯದಲ್ಲಿ ಜಿಂಬಾಬ್ವೆ (India vs Zimbabwe) ವಿರುದ್ಧ ಬರೋಬ್ಬರಿ 71 ರನ್ ಗಳ ಭರ್ಜರಿ ಗೆಲುವು ಸಾಧಿಸಿತು ಭಾರತ ತಂಡ. ನವೆಂಬರ್ 10ರಂದು ಅಡಿಲೇಡ್ ನಲ್ಲಿ ಭಾರತ ವರ್ಸಸ್ ಇಂಗ್ಲೆಂಡ್ (India vs England) ನಡುವೆ ಸೆಮಿಫೈನಲ್ಸ್ ಪಂದ್ಯ ನಡೆಯಲಿದೆ. ಈಗಾಗಲೇ ಭಾರತ ತಂಡ ಅಡಿಲೇಡ್ ನಲ್ಲಿ ಅಭ್ಯಾಸ ನಡೆಸುತ್ತಿದೆ. ಈ ಸೆಮಿಫೈನಲ್ಸ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ (Dinesh Karthik) ಅಥವಾ ರಿಷಬ್ ಪಂತ್ (Rishab Pant) ಇಬ್ಬರಲ್ಲಿ ಯಾರು ಆಡಬೇಕು ಎನ್ನುವ ಪ್ರಶ್ನೆಯೊಂದು ಶುರುವಾಗಿದೆ.

ಸೂಪರ್ 12 ಹಂತದ ಐದು ಪಂದ್ಯಗಳಲ್ಲಿ 4 ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಅವರು ಆಡಿದರು, ಜಿಂಬಾಬ್ವೆ (Zimbabwe) ವಿರುದ್ಧ ನಡೆದ 5ನೇ ಪಂದ್ಯದಲ್ಲಿ ರಿಷಬ್ ಪಂತ್ ಅವರಿಗೆ ಆಡುವ ಅವಕಾಶ ಸಿಕ್ಕಿತು, ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದ ಪಂತ್ ಅವರು, 5 ಎಸೆತಕ್ಕೆ ಮೂರು ರನ್ ಗಳಿಸಿ ಔಟ್ ಆದರು, ಇದು ಭಾರತ ಕ್ರಿಕೆಟ್ ಪ್ರಿಯರಿಗೆ ಬೇಸರ ತಂದಿತು ಎಂದರೆ ತಪ್ಪಲ್ಲ. ಆದರೆ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರು, ರಿಷಬ್ ಪಂತ್ ಅವರ ಮೇಲೆ ನಮಗೆ ನಂಬಿಕೆ ಇದೆ ಎಂದಿದ್ದರು. ನಾಳೆ ನಡೆಯಲಿರುವ ಸೆಮಿಫೈನಲ್ಸ್ ಪಂದ್ಯದಲ್ಲಿ ಇವರಿಬ್ಬರಲ್ಲಿ ಯಾರು ಆಡಬೇಕು ಎನ್ನುವ ಚರ್ಚೆಯೊಂದು ನಡೆಯುತ್ತಿದ್ದು, ಭಾರತ ತಂಡದ ಮಾಜಿ ಆಟಗಾರ ರವಿಶಾಸ್ತ್ರಿ (Ravi Shastri) ಅವರು ಇದರ ಬಗ್ಗೆ ಮಾತನಾಡಿದ್ದಾರೆ.. ಇದನ್ನು ಓದಿ.. Cricket News: ಕೊನೆ ಕ್ಷಣದಲ್ಲಿ ಭಾರತಕ್ಕೆ ಮತ್ತೊಂದು ಶಾಕ್. ಸೆಮಿ ಫೈನಲ್ ಪಂದ್ಯಕ್ಕೂ ಮುನ್ನವೇ ಭಾರತಕ್ಕೆ ಡಬಲ್ ಆಘಾತ. ಏನಾಗಿದೆ ಗೊತ್ತೇ??

“ದಿನೇಶ್ ಕಾರ್ತಿಕ್ ಅವರು ಅತ್ಯುತ್ತಮವಾದ ಆಟಗಾರ. ಆದರೆ ಇಂಗ್ಲೆಂಡ್ (England) ಮತ್ತು ನ್ಯೂಜಿಲೆಂಡ್ (New Zealand) ತಂಡವನ್ನು, ಅವರ ಬೌಲರ್ ಗಳ ಪ್ರದರ್ಶನ ನೋಡಿದರೆ, ಧೃಡವಾಗಿ ಆಡುವ ಎಡಗೈ ಆಟಗಾರನ ಆವಶ್ಯಕತೆ ಹೆಚ್ಚಿದೆ ಎಂದು ನನಗೆ ಅನ್ನಿಸುತ್ತದೆ. ಇದಕ್ಕಾಗಿ ಎಡಗೈ ಬ್ಯಾಟ್ಸ್ಮನ್ ರಿಷಬ್ ಪಂತ್ ಅವರು ಫೈನಲ್ಸ್ ನಲ್ಲಿ ಆಡಲು ಸೂಕ್ತವಾದ ಆಟಗಾರ. ಇಂಗ್ಲೆಂಡ್ ವಿರುದ್ಧ ರಿಷಬ್ ಪಂತ್ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ, ಗೆಲ್ಲುವ ಇನ್ನಿಂಗ್ಸ್ ಆಡಿದ್ದಾರೆ. ಹಾಗಾಗಿ ನಾನು ದಿನೇಶ್ ಕಾರ್ತಿಕ್ ಅವರಿಗಿಂತ ರಿಷಬ್ ಪಂತ್ ಅವರನ್ನು ಆಯ್ಕೆ ಮಾಡುತ್ತೇನೆ. ಇದಕ್ಕಿಂತ ಮೊದಲೇ ಅವರು ಈ ಇಂಗ್ಲೆಂಡ್ ವಿರುದ್ಧ ಆಡಿರುವುದರಿಂದ, ತಂಡಕ್ಕೆ ಒಳ್ಳೆಯದು. ಟೀಮ್ ಇಂಡಿಯಾಗೆ ಎಡಗೈ ಬ್ಯಾಟ್ಸ್ಮನ್ ಅವಶ್ಯಕತೆ ಇದೆ. ಅವರ ಅಪಾಯಕಾರಿಯಾಗಬಹುದು, ಮೊದಲ 3 ಅಥವಾ 4 ವಿಕೆಟ್ ಕಳೆದುಕೊಂಡರು, ಕೊನೆಯ ಓವರ್ ಗಳಲ್ಲಿ ಪಂದ್ಯ ಗೆಲ್ಲಬಹುದು..” ಎಂದಿದ್ದಾರೆ ರವಿ ಶಾಸ್ರ್ತೀ ಅವರು. ಇದನ್ನು ಓದಿ.. Cricket News: ಸೆಮಿ ಫೈನಲ್ ತಲುಪಿರುವ ಭಾರತಕ್ಕೆ ಇರುವ ಏಕೈಕ ಸಮಸ್ಯೆ ಯಾವುದು ಗೊತ್ತೇ?? ಈ ಸಮಸ್ಯೆ ತೀರಿದರೆ ಭಾರತವನ್ನು ಟಚ್ ಮಾಡೋಕೆ ಕೂಡ ಆಗಲ್ಲ.