T20 World Cup: ಕೊಹ್ಲಿ ಹಾಗೂ ಸೂರ್ಯ ಕುಮಾರ್ ರವರಿಗೆ ಎಚ್ಚರಿಕೆ ಕೊಟ್ಟ ಬೆನ್ ಸ್ಟೋಕ್ಸ್. ಹೇಳಿದ್ದೇನು ಗೊತ್ತೇ?? ಏನು ಮಾಡಿದ್ದರಂತೆ ಗೊತ್ತೇ??
T20 World Cup: ಕೊಹ್ಲಿ ಹಾಗೂ ಸೂರ್ಯ ಕುಮಾರ್ ರವರಿಗೆ ಎಚ್ಚರಿಕೆ ಕೊಟ್ಟ ಬೆನ್ ಸ್ಟೋಕ್ಸ್. ಹೇಳಿದ್ದೇನು ಗೊತ್ತೇ?? ಏನು ಮಾಡಿದ್ದರಂತೆ ಗೊತ್ತೇ??
T20 World Cup: ನಾಳೆ ಗುರುವಾರ ನವೆಂಬರ್ 10ರಂದು ಟಿ20 ವಿಶ್ವಕಪ್ ಸೆಮಿ ಫೈನಲ್ಸ್ (T20 World Cup Semi Finals) ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ (India vs England) ಎದುರು ಆಡಲಿದೆ. ರೋಹಿತ್ ಶರ್ಮಾ (Rohit Sharma) ನಾಯಕತ್ವದ ತಂಡ ಜೋಸ್ ಬಟ್ಲರ್ (Jos Butler) ನಾಯಕತ್ವದ ಇಂಗ್ಲೆಂಡ್ ವಿರುದ್ಧ ಆಡಲಿದೆ. ಇಂಗ್ಲೆಂಡ್ ಟೀಮ್ ಗೆ, ನಮ್ಮ ಭಾರತ ತಂಡದ ಇಬ್ಬರು ಆಟಗಾರರು ಅಪಾಯಕಾರಿ ಅನ್ನಿಸುವುದರಲ್ಲಿ ಸಂಶಯವಿಲ್ಲ. ಇದಕ್ಕೆ ಈಗ ಇಂಗ್ಲೆಂಡ್ ತಂಡ ಹೆದರಿರುವ ಹಾಗೆ ಕಾಣಿಸುತ್ತಿದ್ದು, ಇಂಗ್ಲೆಂಡ್ ಆಟಗಾರ ಬೆನ್ ಸ್ಟೋಕ್ಸ್ (Ben Stokes) ಅವರು ಭಾರತ ತಂಡದ ವಿರಾಟ್ ಕೋಹ್ಲಿ (Virat Kohli) ಮತ್ತು ಸೂರ್ಯಕುಮಾರ್ ಯಾದವ್ (Suryakumar Yadav) ಅವರಿಗೆ ಎಚ್ಚರಿಕೆ ರವಾನೆ ಮಾಡಿದ್ದಾರೆ.
ವಿರಾಟ್ ಕೋಹ್ಲಿ ಅವರು ಈಗ ಟಿ20 ವಿಶ್ವಕಪ್ ನಲ್ಲಿ ಐದು ಇನ್ನಿಂಗ್ಸ್ ನಲ್ಲಿ 246 ರನ್ ಗಳಿಸಿ, ಅತಿಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಎನ್ನಿಸಿಕೊಂಡಿದ್ದಾರೆ. ಇತ್ತ ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಹೆಚ್ಚು ಹೇಳುವ ಹಾಗೆಯೇ ಇಲ್ಲ. ಪ್ರತಿ ಪಂದ್ಯದಲ್ಲಿ ಕೂಡ ಅಬ್ಬರಿಸುತ್ತಿದ್ದಾರೆ ಸೂರ್ಯ. ಇವರ ಬಗ್ಗೆ ಈಗ ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್ ಅವರು ಮಾತನಾಡಿದ್ದಾರೆ, “ಯಾವುದೇ ಸಂಶಯ ಇಲ್ಲದೆ, ಸೂರ್ಯಕುಮಾರ್ ಯಾದವ್ ಅವರು ಬಹಳ ಒಳ್ಳೆಯ ಆಟಗಾರ. ಅವರು ಹೊಡೆಯುವ ಕೆಲವು ಶಾಟ್ಸ್ ನೋಡಿದರೆ ತಲೆ ಕೆರೆದುಕೊಳ್ಳುವ ಹಾಗೆ ಆಗುತ್ತದೆ. ಸೂರ್ಯಕುಮಾರ್ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ, ನಾವು ಅವರನ್ನು ಕಟ್ಟಿಹಾಕುವ ಪ್ರಯತ್ನ ಮಾಡುತ್ತೇವೆ. ವಿರಾಟ್ ಕೋಹ್ಲಿ ಅವರ ಬಗ್ಗೆ ಅವರು ಸ್ಕೋರ್ ಮಾಡಿರುವ ಸಂಖ್ಯೆಗಳೇ ಮಾತನಾಡುತ್ತವೆ. ಇದನ್ನು ಓದಿ.. T20 World Cup: ಸೆಮಿಫೈನಲ್ ನಲ್ಲಿ ರಿಷಬ್-ದಿನೇಶ್ ರಲ್ಲಿ ಯಾರು ಆಡಬೇಕು ಎಂಬುದನ್ನು ತಿಳಿಸಿದ ರವಿಶಾಸ್ತ್ರಿ. ಅಚ್ಚರಿಯಾಗಿ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?
ಎಲ್ಲಾ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಅದ್ಭುತ ಇನ್ನಿಂಗ್ಸ್ ಉತ್ತಮವಾಗಿರುತ್ತದೆ. ಅವರ ವಿರುದ್ಧ ಹೆಚ್ಚು ಆಡುವ ಆಟಗಾರರು ನಾವು, ವಿರಾಟ್ ಅವರನ್ನು ನಿಯಂತ್ರಿಸಲು ಯೋಜನೆ ಹಾಕಿಕೊಂಡಿದ್ದೇವೆ…” ಎಂದು ತಮ್ಮ ತಂಡದ ಪ್ಲಾನ್ ಅನ್ನು ತಿಳಿಸಿದ್ದಾರೆ ಬೆನ್ ಸ್ಟೋಕ್ಸ್.. “ಇಂಗ್ಲೆಂಡ್ ಉತ್ತಮವಾಗಿ ಆಡಿ ಸೆಮಿಫೈನಲ್ಸ್ ತಲುಪಿದೆ. ಅತಿಹೆಚ್ಚು ಬಲಿಷ್ಠವಾಗಿರುವ, ಭಾರತ ತಂಡವನ್ನು ಪರಿಗಣಿಸದೆ ಇರಲು ಆಗುವುದಿಲ್ಲ, ಅದಕ್ಕೆ ಭಾರತ ತಂಡ ಮತ್ತು ಅಲ್ಲಿರುವ ಆಟಗಾರರು ಕಾರಣ. ನಾವು ಈಗ ನಮ್ಮ ತಂಡದ ಕಡೆಗೆ ಗಮನ ಕೊಡುತ್ತೇವೆ, ಅವರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ..”ಎಂದು ಹೇಳಿದ್ದಾರೆ ಬೆನ್ ಸ್ಟೋಕ್ಸ್. ಇದನ್ನು ಓದಿ.. Cricket News: ಕೊನೆ ಕ್ಷಣದಲ್ಲಿ ಭಾರತಕ್ಕೆ ಮತ್ತೊಂದು ಶಾಕ್. ಸೆಮಿ ಫೈನಲ್ ಪಂದ್ಯಕ್ಕೂ ಮುನ್ನವೇ ಭಾರತಕ್ಕೆ ಡಬಲ್ ಆಘಾತ. ಏನಾಗಿದೆ ಗೊತ್ತೇ??