ಕರುನಾಡ ವಾಣಿ
ಇದು ನಿಮ್ಮ ಧ್ವನಿ

T20 World Cup: ರೋಹಿತ್, ಕಾರ್ತಿಕ್ ಇಬ್ಬರದ್ದು ಅಲ್ಲದೇ ಭಾರತಕ್ಕೆ ಮತ್ತೊಬ್ಬರ ಚಿಂತೆ ಶುರು, ಈತನ ಆಟವಿಲ್ಲದೆ ಕಪ್ ಗೆಲ್ಲಲು ಸಾಧ್ಯವೇ??

1,041

Get real time updates directly on you device, subscribe now.

T20 World Cup: ಟಿ20 ವರ್ಲ್ಡ್ ಕಪ್ ನಲ್ಲಿ ಭಾರತ ತಂಡ ಈಗ ಸೆಮಿ ಫೈನಲ್ಸ್ ಗೆ ಲಗ್ಗೆ ಇಟ್ಟಿದೆ. ನಾಳೆ ನಡೆಯುವ ಸೆಮಿ ಫೈನಲ್ಸ್ ಪಂದ್ಯದಲ್ಲಿ ಭಾರತ ವರ್ಸಸ್ ಇಂಗ್ಲೆಂಡ್ ಪಂದ್ಯ ನಡೆಯಲಿದೆ. ನಾಳಿನ ಪಂದ್ಯದಲ್ಲಿ ಗೆದ್ದು, ಭಾರತ ತಂಡವು ಫೈನಲ್ಸ್ ತಲುಪುವ ಯೋಜನೆ ಹಾಕಿಕೊಂಡಿದೆ. ಆದರೆ ಅದಕ್ಕಿಂತ ಮೊದಲು ಭಾರತ ತಂಡವು ತಮ್ಮಲ್ಲಿರುವ ಕೆಲವು ನೂನ್ಯತೆಗಳನ್ನು ಸರಿಪಡಿಸಿಕೊಳ್ಳಬೇಕಿದೆ. ಈಗ ಭಾರತ ತಂಡದಲ್ಲಿ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿರುವವರು ರೋಹಿತ್ ಶರ್ಮಾ (Rohit Sharma) ಮತ್ತು ಕೆ.ಎಲ್.ರಾಹುಲ್ (K L Rahul) ಅವರು ಮಾತ್ರವಲ್ಲ.

ಹಾರ್ದಿಕ್ ಪಾಂಡ್ಯ (Hardik Pandya) ಅವರು ಕೂಡ ಸಂಪೂರ್ಣವಾಗಿ ಫಾರ್ಮ್ ನಲ್ಲಿರುವ ಹಾಗೆ ಕಾಣುತ್ತಿಲ್ಲ. ಈಗ ನಡೆದಿರುವ 5 ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಅವರು ಪಾಕಿಸ್ತಾನ್ ವಿರುದ್ದುದ ಪಂದ್ಯದಲ್ಲಿ ಮಾತ್ರ, ಉತ್ತಮ ಪ್ರದರ್ಶನ ನೀಡಿದರು. ಆದರೆ ಅವರು ಆಡಿದ ಇನ್ನುಳಿದ ಪಂದ್ಯಗಳಲ್ಲಿ ನಿರೀಕ್ಷೆಯ ಮಟ್ಟದಲ್ಲಿ ರನ್ಸ್ ಗಳು ಬಂದಿಲ್ಲ. ಪಾಂಡ್ಯ ಅವರು ಐಪಿಎಲ್ (IPL) ನಲ್ಲಿ ಗುಜರಾತ್ ಟೈಟನ್ಸ್ (Gujarat Titans) ತಂಡದ ನಾಯಕನಾಗಿ ಅದ್ಭುತ ಪ್ರದರ್ಶನ ನೀಡಿ, ಭಾರತ ತಂಡಕ್ಕೆ ವಾಪಸ್ ಬಂದರು. ಟಿ20 ವಿಶ್ವಕಪ್ ನಲ್ಲಿ ಫಿನಿಷರ್ ಪಾತ್ರ ನಿರ್ವಹಿಸುತ್ತಿರುವ ಹಾರ್ದಿಕ್ ಪಾಂಡ್ಯ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿಲ್ಲ.

ಕಳಪೆಗಿಂತ ಒಂದು ಪಟ್ಟು ಎತ್ತರದ ಪ್ರದರ್ಶನ ಎಂದು ಮಾತ್ರ ಹೇಳಬಹುದು. ಹಾರ್ದಿಕ್ ಪಾಂಡ್ಯ ಅವರು ಈಗ ಬೌಲಿಂಗ್ ನಲ್ಲಿ 7.46 ಎಕಾನಮಿಯಲ್ಲಿ 8 ವಿಕೆಟ್ಸ್ ಪಡೆದಿದ್ದಾರೆ. ಆದರೆ ಬ್ಯಾಟಿಂಗ್ ನಲ್ಲಿ 101.56 ಸ್ಟ್ರೈಕ್ ರೇಟ್ ನಲ್ಲಿ ಹಾರ್ದಿಕ್ ಪಾಂಡ್ಯ ಅವರು ಗಳಿಸಿರುವುದು 65 ರನ್ ಗಳು ಮಾತ್ರ. ದಿನೇಶ್ ಕಾರ್ತಿಕ್ (Dinesh Karthik) ಅವರು ಮತ್ತು ಅಕ್ಷರ್ ಪಟೇಲ್ (Axar Patel) ಅವರು ವಿಫಲರಾದರೆ, ಫಿನಿಶರ್ ಪಾತ್ರವನ್ನು ಹಾರ್ದಿಕ್ ಪಾಂಡ್ಯ ಅವರೇ ನಿರ್ವಹಿಸಬೇಕು, ಆದರೆ ಅವರ ಫಾರ್ಮ್ ಹೀಗಿರುವುದು ಭಾರತ ತಂಡಕ್ಕೆ ಆತಂಕಕಾರಿಯಾಗಿದ್ದು, ನಾಳಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನ ಹೇಗಿರುತ್ತದು ಎಂದು ಕಾದು ನೋಡಬೇಕಿದೆ.

Get real time updates directly on you device, subscribe now.