Cricket News: ಸೆಮಿ ಫೈನಲ್ ತಲುಪಿರುವ ಭಾರತಕ್ಕೆ ಇರುವ ಏಕೈಕ ಸಮಸ್ಯೆ ಯಾವುದು ಗೊತ್ತೇ?? ಈ ಸಮಸ್ಯೆ ತೀರಿದರೆ ಭಾರತವನ್ನು ಟಚ್ ಮಾಡೋಕೆ ಕೂಡ ಆಗಲ್ಲ.

Cricket News: ಸೆಮಿ ಫೈನಲ್ ತಲುಪಿರುವ ಭಾರತಕ್ಕೆ ಇರುವ ಏಕೈಕ ಸಮಸ್ಯೆ ಯಾವುದು ಗೊತ್ತೇ?? ಈ ಸಮಸ್ಯೆ ತೀರಿದರೆ ಭಾರತವನ್ನು ಟಚ್ ಮಾಡೋಕೆ ಕೂಡ ಆಗಲ್ಲ.

Cricket News: ಟಿ20 ವಿಶ್ವಕಪ್ (T20 World Cup) ನಲ್ಲಿ ಭಾರತ ತಂಡ ಯಶಸ್ವಿಯಾಗಿ ಸೆಮಿಫೈನಲ್ ಹಂತಕ್ಕೆ ತಲುಪಿದೆ. ಸೂಪರ್ 12 ಹಂತದಲ್ಲಿ ನಡೆದ 5 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದ ಭಾರತ ತಂಡ, ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ ದೊಡ್ಡ ಅಂತರದಲ್ಲಿ ಜಯ ಸಾಧಿಸಿ, ವಿಶ್ವಕಪ್ ನಲ್ಲಿ ಸ್ಟ್ರಾಂಗ್ ತಂಡ ಎನ್ನಿಸಿಕೊಂಡಿದೆ. ಭಾರತ ತಂಡ (Team India) ಉತ್ತಮ ಫಾರ್ಮ್ ನಲ್ಲಿ, ಬ್ಯಾಟ್ಸ್ಮನ್ ಗಳು ಮತ್ತು ಬೌಲರ್ ಗಳು ಎಲ್ಲರು ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಭಾರತ ತಂಡಕ್ಕೆ ಬಂದೊದಗಿರುವುದು ಒಂದೇ ಒಂದು ಸಮಸ್ಯೆ ಆಗಿದೆ. ಅದೊಂದು ಸಮಸ್ಯೆಯನ್ನು ಸರಿಮಾಡಿಕೊಂಡರೆ, ಭಾರತ ತಂಡ ಇನ್ನೆರಡು ಪಂದ್ಯಗಳಲ್ಲು ಗೆಲ್ಲುವುದು ಖಂಡಿತ.

ಭಾರತ ತಂಡಕ್ಕೆ ಚಿಂತೆ ಆಗಿರುವುದು, ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರ ಫಾರ್ಮ್ ಬಗ್ಗೆ. ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ (K L Rahul) ಅವರ ಆರಂಭಿಕ ಜೋಡಿ ಟಿ20 ವಿಶ್ವಕಪ್ ನಲ್ಲಿ 5 ಪಂದ್ಯಗಳಲ್ಲಿ ಕೂಡ ಉತ್ತಮ ಜೊತೆಯಾಟ ನೀಡಿಲ್ಲ. ಎಲ್ಲಾ ಪಂದ್ಯಗಳಲ್ಲಿ ಈ ಜೋಡಿ ಬೇಗ ಔಟ್ ಆಗಿದೆ. ಕೆ.ಎಲ್.ರಾಹುಲ್ ಮತ್ತು ರೋಹಿತ್ ಶರ್ಮಾ ಅವರ ಜೊತೆಯಾಟದಲ್ಲಿ ಭಾರತ ತಂಡಕ್ಕೆ ಐದು ಪಂದ್ಯಕ್ಕೆ ಸಿಕ್ಕಿರುವುದು ಕೇವಲ 52 ರನ್ ಗಳು ಮಾತ್ರ. ಅದರಲ್ಲೂ ರೋಹಿತ್ ಶರ್ಮಾ ಅವರು ಈ ಐದು ಪಂದ್ಯಗಳಲ್ಲಿ ಅವರು ಔಟ್ ಆಗದೆ ಇದ್ದದ್ದು ಒಂದೇ ಒಂದು ಪಂದ್ಯದಲ್ಲಿ..

ಅದು ನೆದರ್ಲ್ಯಾಂಡ್ (Netherlands) ವಿರುದ್ಧದ ಪಂದ್ಯದಲ್ಲಿ. ಇನ್ನುಳಿದ ನಾಲ್ಕು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅವರು ಗಳಿಸಿರುವುದು ಕೇವಲ 89 ರನ್ ಗಳು ಮಾತ್ರ. ಕೆ.ಎಲ್.ರಾಹುಲ್ ಅವರು ಕೂಡ ಕಳಪೆ ಫಾರ್ಮ್ ನಲ್ಲಿದ್ದರು, ಮೊದಲ ಮೂರು ಪಂದ್ಯಗಳಲ್ಲಿ ಸಿಂಗಲ್ ಡಿಜಿಟ್ ಸ್ಕೋರ್ ಗಳನ್ನೇ ಮಾಡುತ್ತಿದ್ದರು. ಆದರೆ ನಾಲ್ಕನೇ ಪಂದ್ಯದಲ್ಲಿ ಫಾರ್ಮ್ ಗೆ ಬಂದ ಕೆ.ಎಲ್.ರಾಹುಲ್ ಅವರು ಈಗ ಎರಡು ಬಾರಿ ಅರ್ಧಶತಕ ಗಳಿಸಿ ಒಳ್ಳೆಯ ಫಾರ್ಮ್ ಗೆ ಮರಳಿ ಬಂದಿದ್ದು, ಭಾರತ ತಂಡಕ್ಕೆ ಇದು ಒಳ್ಳೆಯ ವಿಚಾರ ಆಗಿದೆ. ಆದರೆ ರೋಹಿತ್ ಶರ್ಮಾ ಅವರು ಫಾರ್ಮ್ ನಲ್ಲಿ ಇಲ್ಲದೆ ಇರುವುದೇ ಈಗ ಆತಂಕವಾಗಿದೆ. ರೋಹಿತ್ ಶರ್ಮಾ ಅವರು ಫಾರ್ಮ್ ಗೆ ಬಂದರೆ, ತಂಡಕ್ಕೆ ಇನ್ನು ಸಹಾಯವಾಗಿ, ಇನ್ನೆರಡು ಪಂದ್ಯ ಗೆಲ್ಲಲು ಸಹಾಯವಾಗುತ್ತದೆ..