Cricket News: ಗಂಭೀರ್ ಗೆ ಬೇರೆ ಯಾರು ಕಾಣುತ್ತಿಲ್ಲವೇ? ಕೊಹ್ಲಿ ಹೆಚ್ಚು ರನ್ ಗಳಿಸಿದ್ದರೂ ಕೂಡ ಸೂರ್ಯ ಬಗ್ಗೆ ಗಂಭೀರ್ ಹೇಳಿದ್ದೇನು ಗೊತ್ತೇ??

Cricket News: ಗಂಭೀರ್ ಗೆ ಬೇರೆ ಯಾರು ಕಾಣುತ್ತಿಲ್ಲವೇ? ಕೊಹ್ಲಿ ಹೆಚ್ಚು ರನ್ ಗಳಿಸಿದ್ದರೂ ಕೂಡ ಸೂರ್ಯ ಬಗ್ಗೆ ಗಂಭೀರ್ ಹೇಳಿದ್ದೇನು ಗೊತ್ತೇ??

Cricet News: ಟಿ20 ವರ್ಲ್ಡ್ ಕಪ್ (T20 World Cup) ನಲ್ಲಿ ಭಾರತ ತಂಡವು (Team India) ಈಗ ಸೆಮಿಫೈನಲ್ಸ್ ತಲುಪಿದೆ. ಭಾನುವಾರ ನಡೆದ ಭಾರತ ವರ್ಸಸ್ ಜಿಂಬಾಬ್ವೆ (India vs Zimbabwe) ಪಂದ್ಯದಲ್ಲಿ ತಂಡದ ಅಬ್ಬರದ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನಕ್ಕೆ ಜಿಂಬಾಬ್ವೆ ತಂಡ ಬೆಂಡಾಗಿ ಹೋಯಿತು, ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ಕೆ.ಎಲ್.ರಾಹುಲ್ (K L Rahul) ಅದ್ಭುತ ಬ್ಯಾಟಿಂಗ್ ಇಂದಾಗಿ, ಜಿಂಬಾಬ್ವೆ ತಂಡ 186 ರನ್ ಗಳ ಅಬ್ಬರದ ಗುರಿಯನ್ನು ಜಿಂಬಾಬ್ವೆ ತಂಡಕ್ಕೆ ನೀಡಿತು, ಇದರ ಬೆನ್ನಟ್ಟಿದ ಜಿಂಬಾಬ್ವೆ ತಂಡ, 17ನೇ ಓವರ್ ನಲ್ಲಿ 115 ರನ್ ಗಳಿಸಿ ಆಲ್ ಔಟ್ ಆಯಿತು. ಈ ಕಾರಣದಿಂದ ಭಾರತ ತಂಡವು, 71 ರನ್ ಗಳ ಭರ್ಜರಿ ಜಯ ಸಾಧಿಸಿತು.

ಮೊನ್ನೆಯ ಪಂದ್ಯದಲ್ಲಿ ಸ್ಟಾರ್ ಆಗಿ ನಿಂತದ್ದು ಸೂರ್ಯಕುಮಾರ್ ಯಾದವ್ ಅವರು ಎಂದೇ ಹೇಳಬೇಕು. ಈ ವರ್ಷ ಭಾರತ ತಂಡದ ಪರವಾಗಿ ಬಿರುಸಿನ ಪ್ರದರ್ಶನ ನೀಡುತ್ತಲೆ ಬಂದಿದ್ದಾರೆ ಸೂರ್ಯಕುಮಾರ್. ಈವರೆಗೂ ಟಿ20 ವಿಶ್ವಕಪ್ ಟೂರ್ನಿಯಲ್ಲಿ 225 ರನ್ಸ್ ಗಳಿಸಿ, 193 ಸ್ಟ್ರೈಕ್ ರೇಟ್ ನಲ್ಲಿ ಸೂರ್ಯ ಅವರು ಬ್ಯಾಟಿಂಗ್ ಮಾಡುತ್ತಿದ್ದಾರೆ, ಅತಿಹೆಚ್ಚು ರನ್ ಗಳಿಸಿದ ಎರಡನೇ ಆಟಗಾರನಾಗಿ ನಿಂತಿದ್ದಾರೆ. ಇತ್ತ ವಿರಾಟ್ ಕೋಹ್ಲಿ (Virat Kohli) ಅವರು ಈ ಟೂರ್ನಿಯಲ್ಲಿ 246 ರನ್ ಗಳಿಸಿ, ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ, ಆದರೆ ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ (Gautam Gambhir) ಅವರು ಮಾತ್ರ, ವಿರಾಟ್ ಅವರನ್ನು ಟೀಕೆ ಮಾಡುತ್ತಾ ಸೂರ್ಯಕುಮಾರ್ ಅವರಿಗೆ ಪ್ರಶಂಸೆ ನೀಡುವ ಕೆಲಸವನ್ನು ಮುಂದುವರೆಸಿದ್ದಾರೆ. ಮೊನ್ನೆಯ ಪಂದ್ಯ ಮುಗಿದ ನಂತರ ಸೂರ್ಯಾಕುಮಾರ್ ಯಾದವ್ ಅವರ ಬಗ್ಗೆ ಮಾತನಾಡಿದ ಗೌತಮ್ ಗಂಭೀರ್ ಅವರು.. ಇದನ್ನು ಓದಿ.. T20 Worldcup: ಭಾರತ ಜಿಂಬಾಬ್ವೆ ವಿರುದ್ಧ ಗೆದ್ದು ಬೀಗಿದ ಮೇಲೆ ರಾಹುಲ್ ಹೇಳಿದ್ದೇನು ಗೊತ್ತೇ?? ಸೆಮೀಸ್ ಗು ಮೊದಲೇ ಫುಲ್ ಕುಶ್.

“ಈಗಾಗಲೇ ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ಮಾತನಾಡಿದ್ದೇವೆ, ವಿರಾಟ್ ಕೋಹ್ಲಿ, ರೋಹಿತ್ ಶರ್ಮಾ (Rohit Sharma), ಕೆ.ಎಲ್.ರಾಹುಲ್ ಇವರೆಲ್ಲರೂ ಸಾಂಪ್ರದಾಯಿಕ ಆಟಗಾರರು ಆದರೆ ಸೂರ್ಯಕುಮಾರ್ ಯಾದವ್ ಭಿನ್ನವಾದ ಆಟಗಾರರು. ಅವರ ಥರದ ಒಬ್ಬ ಆಟಗಾರನನ್ನು ಭಾರತ ತಂಡ ಹೊಂದಿಲ್ಲ. ನಂಬರ್ 4 ನಲ್ಲಿ ವಿಶೇಷವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸೂರ್ಯಕುಮಾರ್ ಯಾದವ್ ಅವರು 3 ಅರ್ಧಶತಕ ಭಾರಿಸಿ 200ಕ್ಕಿಂತ ರನ್ಸ್ ಸಿಡಿಸಿದ್ದಾರೆ. ಭಾರತ ವಿಶ್ವಕಪ್ ಗೆಲ್ಲದೆ ಇದ್ದರು, ಮ್ಯಾನ್ ಆಫ್ ದಿ ಸೀರೀಸ್ (Man of the Series) ಸೂರ್ಯಕುಮಾರ್ ಯಾದವ್ ಅವರಿಗೆ ಬರಬೇಕು ಎಂದು ನನಗೆ ಅನ್ನಿಸುತ್ತದೆ..” ಎಂದಿದ್ದಾರೆ ಗಂಭೀರ್. ಈ ಮಾತು ಕೇಳಿದ ಕೋಹ್ಲಿ ಫ್ಯಾನ್ಸ್, ಸೂರ್ಯಕುಮಾರ್ ಯಾದವ್ ಅವರು ಅದ್ಭುತ ಆಟಗಾರ ಅವರನ್ನು ಹೊಗಳುವುದರಲ್ಲಿ ತಪ್ಪಿಲ್ಲ, ಆದರೆ ಆ ಭರದಲ್ಲಿ ವಿರಾಟ್ ಕೋಹ್ಲಿ ಅವರ ಪ್ರದರ್ಶನವನ್ನು ಕಡೆಗಣಿಸುವುದು ತಪ್ಪು ಎಂದು ಬೇಸರ ಹೊರಹಾಕುತ್ತಿದ್ದಾರೆ. ಇದನ್ನು ಓದಿ.. T20 World Cup: ವಿನೂತನ ಶಾಟ್ ಕಂಡು ಹಿಡಿದ ಭಾರತ ಏಕೈಕ 360 ಆಟಗಾರ. ಹೇಗಿದೆ ಗೊತ್ತಾ ವಿಡಿಯೋ? ನೀವೇ ನೋಡಿ.