Cricket News: ಆಸ್ಟ್ರೇಲಿಯಾ ನೆಲದಲ್ಲಿ ಮಿಂಚಲು ಶಮಿ ಮಾಡಿದ ಕಠಿಣ ಪ್ರಾಕ್ಟೀಸ್ ಬಗ್ಗೆ ನಿಮಗೆ ಗೊತ್ತೇ?? ಯಾರು ಮಾಡದ ಪ್ಲಾನ್ ಮಾಡಿದ್ದೇನು ಗೊತ್ತೇ??

Cricket news: ಆಸ್ಟ್ರೇಲಿಯಾ ನೆಲದಲ್ಲಿ ಮಿಂಚಲು ಶಮಿ ಮಾಡಿದ ಕಠಿಣ ಪ್ರಾಕ್ಟೀಸ್ ಬಗ್ಗೆ ನಿಮಗೆ ಗೊತ್ತೇ?? ಯಾರು ಮಾಡದ ಪ್ಲಾನ್ ಮಾಡಿದ್ದೇನು ಗೊತ್ತೇ??

Cricket News: ಟಿ20 ವಿಶ್ವಕಪ್ ನಲ್ಲಿ (T20 World Cup) ವೇಗದ ಬೌಲರ್ ಆಗಿ ಮಿಂಚುತ್ತಿರುವ ಮೊಹಮ್ಮದ್ ಶಮಿ (Mohammad Shami) ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲು ಭಾರತತಂಡದ ಮ್ಯಾನೇಜ್ಮೆಂಟ್ ಗೆ ಇಷ್ಟವಿರಲಿಲ್ಲ. ಐಪಿಎಲ್ (IPL) ನಲ್ಲಿ ಉಮ್ರಾನ್ ಮಲಿಕ್ (Umran Malik), ಅರ್ಷದೀಪ್ ಸಿಂಗ್ (Arshdeep Singh), ಆವೇಶ್ ಖಾನ್ (Avesh Khan) ಅವರ ಪರ್ಫಾರ್ಮೆನ್ಸ್ ನೋಡಿ ಅವರನ್ನು. ವಿಶ್ವಕಪ್ ಗೆ ಆಯ್ಕೆ ಮಾಡಿಕೊಳ್ಳುವ ಯೋಜನೆ ಬಿಸಿಸಿಐಗೆ ಇತ್ತು, ಮೋಹಮ್ಮದ್ ಶಮಿ ಅವರಿಗೆ ಇದರಿಂದ ಕೋಪ ಮತ್ತು ಬೇಸರ ಎರಡು ಆಗಿದ್ದರು ಕೂಡ, ಪ್ರಾಕ್ಟೀಸ್ ಮಾಡುವುದನ್ನು ಮಾತ್ರ ಅವರು ಬಿಟ್ಟಿರಲಿಲ್ಲವಂತೆ.

ವಿಶ್ವಕಪ್ ಗೆ ಸೆಲೆಕ್ಟ್ ಆಗದೆ ಇದ್ದಾಗ ಶಮಿ ಅವರಿಗೆ ಕೋಪ ಕೂಡ ಇತ್ತಂತೆ, ಜಸ್ಪ್ರೀತ್ ಬುಮ್ರ (Jasprit Bumrah) ಅವರಿಗೆ ಇಂಜುರಿ ಆದ ಕಾರಣ, ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡುವಲ್ಲಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮನಸ್ಸು ಮಾಡಿತು. ವಿಶ್ವಕಪ್ ಗೆ ಆಯ್ಕೆ ಆಗುವುದಕ್ಕಿಂತ ಮೊದಲು ಶಮಿ ಅವರು ಎಷ್ಟು ಕಷ್ಟಪಟ್ಟಿದ್ದರು, ಹೇಗೆ ಪ್ರಾಕ್ಟೀಸ್ ಮಾಡಿದ್ದರು ಎನ್ನುವುದು ಹಲವರಿಗೆ ಗೊತ್ತಿರದ ವಿಚಾರ, ಇದರ ಬಗ್ಗೆ ಅವರ ಕೋಚ್ ಬಬ್ರುದ್ದೀನ್ (Mohammad Babruddin) ಅವರು ಮಾತನಾಡಿದ್ದಾರೆ, ಸಾಹಸ್ ಪುರ್ ಎನ್ನುವ ಗ್ರಾಮದಲ್ಲಿರುವ ಜ್ಯೋತಿಬಾ ಫುಲೆ ಜಿಲ್ಲೆಯಲ್ಲಿರುವ ಶಮಿ ಅವರ ಫಾರ್ಮ್ ಹೌಸ್ ನಲ್ಲಿ, ವಿಶ್ವಕಪ್ ಗೆ ಆಯ್ಕೆಯಾಗಿಲ್ಲ ಎಂದು ಬೇಸರ ಇದ್ದರು ಕೂಡ ಪ್ರತಿದಿನ ಯಾರ್ಕರ್ ಹಾಕುವುದನ್ನು ಪ್ರಾಕ್ಟೀಸ್ ಮಾಡುತ್ತಿದ್ದರಂತೆ ಮೊಹಮ್ಮದ್ ಶಮಿ. ಇದನ್ನು ಓದಿ.. Cricket news: ದಿಡೀರ್ ಎಂದು ಜಿಂಬಾಬ್ವೆ ವಿರುದ್ದದ ಪಂದ್ಯಕ್ಕೆ DK ರವರನ್ನು ಕೈ ಬಿಟ್ಟಿದ್ದು ಯಾಕೆ ಗೊತ್ತೇ?? ರೋಹಿತ್ ಕೊಟ್ಟ ಕಾರಣ ಏನು ಗೊತ್ತೇ??

“10 ವೆಟ್ ಬಾಲ್ ಗಳನ್ನು ಇಟ್ಟುಕೊಂಡು, ಪ್ರತಿದಿನ ಬಿಡುವಿಲ್ಲದ ಹಾಗೆ ಅಭ್ಯಾಸ ಮಾಡುತ್ತಿದ್ದರು. ವೆಟ್ ಬಾಲ್ ನ ಗ್ರಿಪ್ ಸಿಗುವುದು ಕಷ್ಟ, ಅದರಿಂದಲೇ ಸ್ಕಿಲ್ಸ್ ಬರುವುದು, ಅದನ್ನು ಕರಗತ ಮಾಡಿಕೊಳ್ಳುವ ಸಲುವಾಗಿ ಪ್ರತಿದಿನ ಆವರೇಜ್ ಆಗಿ ಶಮಿ ಅವರು 100ಕ್ಕಿಂತ ಹೆಚ್ಚು ಸಾರಿ ಪ್ರಾಕ್ಟೀಸ್ ಮಾಡುತ್ತಿದ್ದರು..” ಎಂದು ಶಮಿ ಅವರ ಕೋಚ್ ಮೊಹಮ್ಮದ್ ಬಬ್ರುದ್ದೀನ್ ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ನೆಲದಲ್ಲಿ, ಬೆಳೆ ಬೆಳೆಯುವ ಸಮಯ ಅಲ್ಲದೆ ಇದ್ದಾಗ, ಇಡೀ ಫಾರ್ಮ್ ನಲ್ಲಿ ರನ್ನಿಂಗ್ ಮಾಡುತ್ತಿದ್ದರು ಶಮಿ ಅವರಿಗೆ ಜಿಮ್ ಟ್ರೇನಿಂಗ್ ನಲ್ಲಿ ನಂಬಿಕೆ ಇರಲಿಲ್ಲ ಎನ್ನುವುದನ್ನು ಸಹ ತಿಳಿಸಿದ್ದಾರೆ ಅವರ ಕೋಚ್ ಮೊಹಮ್ಮದ್ ಬಬ್ರುದ್ದೀನ್. ಇದನ್ನು ಓದಿ.. T20 World Cup: ಸೂರ್ಯ ಕುಮಾರ್ ಬ್ಯಾಟಿಂಗ್ ಮಾಡುತ್ತಿರುವ ರೀತಿ ನೋಡಿ, ಭಾರತಕ್ಕೆ ಎಚ್ಚರಿಕೆ ಕೊಟ್ಟ ಸುನಿಲ್ ಗವಾಸ್ಕರ್. ಯಾಕೆ ಗೊತ್ತೇ?