Cricket news: ದಿಡೀರ್ ಎಂದು ಜಿಂಬಾಬ್ವೆ ವಿರುದ್ದದ ಪಂದ್ಯಕ್ಕೆ DK ರವರನ್ನು ಕೈ ಬಿಟ್ಟಿದ್ದು ಯಾಕೆ ಗೊತ್ತೇ?? ರೋಹಿತ್ ಕೊಟ್ಟ ಕಾರಣ ಏನು ಗೊತ್ತೇ??
Cricket news: ದಿಡೀರ್ ಎಂದು ಜಿಂಬಾಬ್ವೆ ವಿರುದ್ದದ ಪಂದ್ಯಕ್ಕೆ DK ರವರನ್ನು ಕೈ ಬಿಟ್ಟಿದ್ದು ಯಾಕೆ ಗೊತ್ತೇ?? ರೋಹಿತ್ ಕೊಟ್ಟ ಕಾರಣ ಏನು ಗೊತ್ತೇ??
Cricket News: ಟಿ20 ವಿಶ್ವಕಪ್ (T20 World Cup) ನಲ್ಲಿ ಸೂಪರ್ 12 ಹಂತದ ಕೊನೆಯ ಪಂದ್ಯವನ್ನು ಭಾರತ ತಂಡ (Team India) ನಿನ್ನೆ ಆಡಿತು, ಭಾರತ ವರ್ಸಸ್ ಜಿಂಬಾಬ್ವೆ (India vs Zimbabwe) ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡಿದ ಭಾರತ ತಂಡ 71 ರನ್ ಗಳ ವಿಜಯ ಸಾಧಿಸಿತು. ನಿನ್ನೆಯ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ (Rohit Sharma) ಅವರು ಬ್ಯಾಟಿಂಗ್ ಆಯ್ಕೆಮಾಡಿಕೊಂಡರು. ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ಕೆ.ಎಲ್.ರಾಹುಲ್ (K L Rahul) ಅವರ ಅಬ್ಬರದ ಬ್ಯಾಟಿಂಗ್ ನಲ್ಲಿ ಭಾರತ ತಂಡ ಬರೋಬ್ಬರಿ 186 ರನ್ ಗಳಿಸಿತು. ಈ ಸ್ಕೋರ್ ಬೆನ್ನಟ್ಟಿದ ಜಿಂಬಾಬ್ವೆ, 17.2 ಓವರ್ ಗೆ ಆಲ್ ಔಟ್ ಆಯಿತು.
ನಿನ್ನೆಯ ಪಂದ್ಯದಲ್ಲಿ ಎಲ್ಲರ ಪರ್ಫಾರ್ಮೆನ್ಸ್ ಚೆನ್ನಾಗಿದ್ದರು, ಸಹ ಒಂದು ಬದಲಾವಣೆ ಮಾಡಲಾಗಿತ್ತು, ಅದೇನೆಂದರೆ, ನಿನ್ನೆಯ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ (Dinesh Karthik) ಅವರನ್ನು ಪ್ಲೇಯಿಂಗ್ 11 ಇಂದ ಕೈಬಿಟ್ಟು, ಅವರ ಬದಲಾಗಿ, ರಿಷಬ್ ಪಂತ್ (Rishab Pant) ಅವರಿಗೆ ಆಡುವ ಅವಕಾಶ ಕೊಡಲಾಯಿತು. ಸೌತ್ ಆಫ್ರಿಕಾ ವಿರುದ್ಧ ನಡೆದ ಮೂರನೇ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ಬೆನ್ನು ನೋವಿನ ಸಮಸ್ಯೆ ಉಂಟಾದರು ಸಹ, ಅದರಿಂದ ಚೇತರಿಸಿಕೊಂಡು, ನಾಲ್ಕನೇ ಪಂದ್ಯವನ್ನಾಡಿದರು. ಆದರೆ ಐದನೇ ಪಂದ್ಯಕ್ಕೆ ದಿನೇಶ್ ಕಾರ್ತಿಕ್ ಅವರನ್ನು ಪ್ಲೇಯಿಂಗ್ 11 ಗೆ ತೆಗೆದುಕೊಳ್ಳದೆ ಇರಲು ಕಾರಣ ಏನು ಎಂದು ಕ್ಯಾಪ್ಟನ್ ರೋಹಿತ್ ಶರ್ಮಾ ತಿಳಿಸಿದ್ದಾರೆ. ಇದನ್ನು ಓದಿ.. T20 World Cup: ಸೂರ್ಯ ಕುಮಾರ್ ಬ್ಯಾಟಿಂಗ್ ಮಾಡುತ್ತಿರುವ ರೀತಿ ನೋಡಿ, ಭಾರತಕ್ಕೆ ಎಚ್ಚರಿಕೆ ಕೊಟ್ಟ ಸುನಿಲ್ ಗವಾಸ್ಕರ್. ಯಾಕೆ ಗೊತ್ತೇ?
ರೋಹಿತ್ ಅವರು ಹೇಳಿರುವ ಹಾಗೆ, “ರಿಷಬ್ ಪಂತ್ ಅವರಿಗೆ ಇಡೀ ಟೂರ್ನಿಯಲ್ಲಿ ಒಂದು ಪಂದ್ಯವನ್ನು ಕೂಡ ಆಡುವ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಈ ಪಂದ್ಯದಲ್ಲಿ ಪಂತ್ ಅವರಿಗೆ ಆಡುವ ಅವಕಾಶ ಅವರಿಗೆ ನೀಡಿದೆವು..” ಎಂದು ಹೇಳಿದ್ದಾರೆ ರೋಹಿತ್ ಶರ್ಮಾ. ದಿನೇಶ್ ಕಾರ್ತಿಕ್ ಅವರು ವಿಶ್ವಕಪ್ ಪಂದ್ಯಗಳಲ್ಲಿ ಒಳ್ಳೆಯ ಫಾರ್ಮ್ ನಲ್ಲಿ ಕೂಡ ಇರಲಿಲ್ಲ. ನಿನ್ನೆಯ ಪಂದ್ಯದಲ್ಲಿ 25 ವರ್ಷದ ಯುವ ಆಟಗಾರ ರಿಷಬ್ ಪಂತ್ ಅವರು ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡದೆ ಹೋದರು ಸಹ, ವಿಕೆಟ್ ಕೀಪಿಂಗ್ ಚೆನ್ನಾಗಿ ಮಾಡಿದರು. ಇದನ್ನು ಓದಿ.. T20 Worldcup: ಭಾರತ ಜಿಂಬಾಬ್ವೆ ವಿರುದ್ಧ ಗೆದ್ದು ಬೀಗಿದ ಮೇಲೆ ರಾಹುಲ್ ಹೇಳಿದ್ದೇನು ಗೊತ್ತೇ?? ಸೆಮೀಸ್ ಗು ಮೊದಲೇ ಫುಲ್ ಕುಶ್.