T20 World Cup: ಸೂರ್ಯ ಕುಮಾರ್ ಬ್ಯಾಟಿಂಗ್ ಮಾಡುತ್ತಿರುವ ರೀತಿ ನೋಡಿ, ಭಾರತಕ್ಕೆ ಎಚ್ಚರಿಕೆ ಕೊಟ್ಟ ಸುನಿಲ್ ಗವಾಸ್ಕರ್. ಯಾಕೆ ಗೊತ್ತೇ?

T20 World Cup: ಸೂರ್ಯ ಕುಮಾರ್ ಬ್ಯಾಟಿಂಗ್ ಮಾಡುತ್ತಿರುವ ರೀತಿ ನೋಡಿ, ಭಾರತಕ್ಕೆ ಎಚ್ಚರಿಕೆ ಕೊಟ್ಟ ಸುನಿಲ್ ಗವಾಸ್ಕರ್. ಯಾಕೆ ಗೊತ್ತೇ?

T20 World Cup: ಭಾರತ ತಂಡ (Team India) ಈಗ ಟಿ20 ವಿಶ್ವಕಪ್ ನ ಸೂಪರ್ 12 ಹಂತದ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು, ಸೆಮಿಫೈನಲ್ಸ್ ಗೆ ಆಯ್ಕೆಯಾಗಿದೆ. ಭಾರತ ತಂಡ ಕಪ್ ಗೆಲ್ಲಲು ಇನ್ನು ಉಳಿದಿರುವುದು ಎರಡು ಹೆಜ್ಜೆಗಳು ಮಾತ್ರ. ಪ್ರಸ್ತುತ ಭಾರತ ತಂಡ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲೂ ಸುಧಾರಿಸಿಕೊಂಡಿದೆ. ಈ ಟೂರ್ನಿಯಲ್ಲಿ ಭಾರತದ ಆ ಒಬ್ಬ ಆಟಗಾರ ಸ್ಥಿರವಾಗಿ ಅದ್ಭುತ ಪ್ರದರ್ಶನ ಕೊಡುತ್ತಾ ಬಂದಿದ್ದಾರೆ, ಅವರು ಮತ್ಯಾರು ಅಲ್ಲ, ಸೂರ್ಯಕುಮಾರ್ ಯಾದವ್ (Suryakumar Yadav), ಆಡಿರುವ 5 ಪಂದ್ಯಗಳಲ್ಲಿ ಬಹುತೇಕ ಎಲ್ಲಾ ಪಂದ್ಯಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ವಿಷಯವಾಗಿ ಹಿರಿಯ ಆಟಗಾರ ಸುನೀಲ್ ಗವಾಸ್ಕರ್ (Sunil Gavaskar) ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾರತ ತಂಡಕ್ಕೆ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

ಆಡುತ್ತಿರುವ ಬಹುತೇಕ ಎಲ್ಲಾ ಪಂದ್ಯಗಳಲ್ಲು ಸೂರ್ಯಕುಮಾರ್ ಯಾದವ್ ಅವರು ಅರ್ಧಶತಕ ಸಿಡಿಸುತ್ತಾ ಉತ್ತಮ ಪ್ರದರ್ಶನ ನೀಡುತ್ತಾ, ಟಿ20 ವಿಶ್ವಕಪ್ ನಲ್ಲಿ ಅತಿಹೆಚ್ಚು ರನ್ಸ್ ಸಿಡಿಸಿದ ಆಟಗಾರ ಎಂದು ಖ್ಯಾತಿ ಪಡೆದಿದ್ದಾರೆ. ಈ ವರ್ಷ ಆಡಿರುವ ಐದು ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಅವರು 225 ರನ್ಸ್ ಗಳಿಸಿದ್ದು, ಇವರ ಸ್ಟ್ರೈಕ್ ರೇಟ್ 193 ಇದೆ. ನಿನ್ನೆ ನಡೆದ ಭಾರತ ವರ್ಸಸ್ ಜಿಂಬಾಬ್ವೆ (India vs Zimbabwe) ಪಂದ್ಯದಲ್ಲಿ ಸೂರ್ಯಕುಮಾರ್ ಅವರು ಕೇವಲ 25 ಎಸೆತಗಳಲ್ಲಿ ಭರ್ಜರಿಯಾಗಿ 61 ರನ್ಸ್ ಸಿಡಿಸಿ, ಭಾರತ ತಂಡದ ಮೊತ್ತ ಹೆಚ್ಚಾಗುವ ಹಾಗೆ ಮಾಡಿದರು. ಸೂರ್ಯಕುಮಾರ್ ಯಾದವ್ ಅವರಿಗೆ ಎಲ್ಲರಿಂದ ಮೆಚ್ಚುಗೆ ಸಿಗುತ್ತಿದೆ.. ಇದನ್ನು ಓದಿ.. T20 Worldcup: ಭಾರತ ಜಿಂಬಾಬ್ವೆ ವಿರುದ್ಧ ಗೆದ್ದು ಬೀಗಿದ ಮೇಲೆ ರಾಹುಲ್ ಹೇಳಿದ್ದೇನು ಗೊತ್ತೇ?? ಸೆಮೀಸ್ ಗು ಮೊದಲೇ ಫುಲ್ ಕುಶ್.

ಇದೀಗ ಭಾರತ ತಂಡದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಅವರು ಭಾರತ ತಂಡ ಸೂಪರ್ 12 ಹಂತದಿಂದ ಸೆಮಿ ಫೈನಲ್ಸ್ ಹಂತಕ್ಕೆ ತಲುಪಿರುವ ಭಾರತ ತಂಡದ ಬಗ್ಗೆ ಸುನೀಲ್ ಗವಾಸ್ಕರ್ ಅವರು ಸಂತೋಷದಿಂದ ಮಾತನಾಡಿದ್ದು, ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜೊತೆಗೆ ಸೂರ್ಯಕುಮಾರ್ ಯಾದವ್ ಅವರು ಭಾರತ ತಂಡದ ಹೊಸ ಮಿ.360 ಎಂದು ಹೇಳಿದ್ದಾರೆ ಸುನೀಲ್ ಗವಾಸ್ಕರ್. ಒಂದು ವೇಳೆ ಸೂರ್ಯಕುಮಾರ್ ಯಾದವ್ ಅವರು ಮೈದಾನದಲ್ಲಿ ವಿಫಲರಾದರೆ, ಭಾರತ ತಂಡ ಬ್ಯಾಟಿಂಗ್ ನಲ್ಲಿ 140 ರಿಂದ 150 ಫ್ಯಾನ್ ಗಳನ್ನು ಗಳಿಸಲು ಸಹ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ತಂಡದ ಬೇರೆ ಆಟಗಾರರಿಗೆ ಎಚ್ಚರಿಕೆ ಕೊಟ್ಟಿದ್ದಾರೆ, ಎಲ್ಲರೂ ಚೆನ್ನಾಗಿ ಆಡಿದರೆ ಮಾತ್ರ, ಉತ್ತಮ ಪ್ರದರ್ಶನ ನೀಡಲು ಸಾಧ್ಯ ಎನ್ನುವುದನ್ನು ಅರ್ಥ ಮಾಡಿಸಿದ್ದಾರೆ.. ಇದನ್ನು ಓದಿ.. T20 World Cup: ವಿನೂತನ ಶಾಟ್ ಕಂಡು ಹಿಡಿದ ಭಾರತ ಏಕೈಕ 360 ಆಟಗಾರ. ಹೇಗಿದೆ ಗೊತ್ತಾ ವಿಡಿಯೋ? ನೀವೇ ನೋಡಿ.