T20 Worldcup: ಭಾರತ ಜಿಂಬಾಬ್ವೆ ವಿರುದ್ಧ ಗೆದ್ದು ಬೀಗಿದ ಮೇಲೆ ರಾಹುಲ್ ಹೇಳಿದ್ದೇನು ಗೊತ್ತೇ?? ಸೆಮೀಸ್ ಗು ಮೊದಲೇ ಫುಲ್ ಕುಶ್.
T20 Worldcup: ಭಾರತ ಜಿಂಬಾಬ್ವೆ ವಿರುದ್ಧ ಗೆದ್ದು ಬೀಗಿದ ಮೇಲೆ ರಾಹುಲ್ ಹೇಳಿದ್ದೇನು ಗೊತ್ತೇ?? ಸೆಮೀಸ್ ಗು ಮೊದಲೇ ಫುಲ್ ಕುಶ್.
T20 Worldcup: ನಿನ್ನೆ ನಡೆದ ಭಾರತ ವರ್ಸಸ್ ಜಿಂಬಾಬ್ವೆ (India vs Zimbabwe) ಸೂಪರ್12 ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡವು (Team India) ಅದ್ಭುತ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಗೆದ್ದಿದೆ. ಜಿಂಬಾಬ್ವೆ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿತು ಭಾರತ, ರೋಹಿತ್ ಶರ್ಮಾ (Rohit Sharma) ಅವರು 15 ರನ್ ಗಳಿಸಿ ಔಟ್ ಆದರು, ವಿರಾಟ್ ಕೋಹ್ಲಿ (Virat Kohli) ಅವರು 26 ರನ್ ಗಳಿಸಿ ಔಟ್ ಆದರು, ನಿನ್ನೆಯ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ (K L Rahul) ಭರ್ಜರಿ ಅರ್ಧಶತಕ ಸಿಡಿಸಿದರು. ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲೂ ಅರ್ಧಶತಕ ಸಿಡಿಸಿದ್ದ ರಾಹುಲ್ ಅವರು ನಿನ್ನೆಯ ಪಂದ್ಯದಲ್ಲು ಅದೇ ಫಾರ್ಮ್ ಮುಂದುವರೆಸಿದ್ದಾರೆ.
ನಿನ್ನೆ 35 ಎಸೆತಗಳಲ್ಲಿ 51 ರನ್ ಭಾರಿಸಿದರು, 3 ಬೌಂಡರಿ ಮತ್ತು 3 ಸಿಕ್ಸರ್ ಗಳು ಇದರಲ್ಲಿ ಸೇರಿತ್ತು. ಕೆ.ಎಲ್. ರಾಹುಲ್ ಅವರು ಆರಂಭಿಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದರೆ, ಈಗ ಸೆಮಿ ಫೈನಲ್ಸ್ ಮತ್ತು ಫೈನಲ್ಸ್ ತಲುಪುವ ಸಮಯದಲ್ಲಿ ಕೆ.ಎಲ್.ರಾಹುಲ್ ಅವರು ಫಾರ್ಮ್ ಗೆ ಮರಳಿ ಬಂದಿದ್ದು, ಬ್ಯಾಕ್ ಟು ಬ್ಯಾಕ್ ಅರ್ಧಶತಕ ಗಳಿಸಿರುವುದು ಬಹಳ ಸಂತೋಷದ ವಿಚಾರ ಆಗಿದೆ. ಇದರ ಬಗ್ಗೆ ಸ್ವತಃ ರಾಹುಲ್ ಆವರಿಗೂ ಸಂತೋಷ ಇದೆ. ಮುಂದಿನ ಸೆಮಿ ಫೈನಲ್ಸ್ ಪಂದ್ಯದಲ್ಲಿ ಇನ್ನು ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ ಎಂದಿದ್ದಾರೆ. ಇದನ್ನು ಓದಿ..T20 World Cup: ವಿನೂತನ ಶಾಟ್ ಕಂಡು ಹಿಡಿದ ಭಾರತ ಏಕೈಕ 360 ಆಟಗಾರ. ಹೇಗಿದೆ ಗೊತ್ತಾ ವಿಡಿಯೋ? ನೀವೇ ನೋಡಿ.
ಭಾರತ ತಂಡ ನಿನ್ನೆಯ ಪಂದ್ಯ ಗೆದ್ದು, ಗ್ರೂಪ್ 2 ಪಾಯಿಂಟ್ಸ್ ಟೇಬಲ್ ನಲ್ಲಿ ಮೊದಲ ಸ್ಥಾನಕ್ಕೆ ಬಂದಿದೆ. ಟಿ20 ವಿಶ್ವಕಪ್ ಗೆಲ್ಲಲು ಭಾರತ ತಂಡಕ್ಕೆ ಉಳಿದಿರುವುದು ಇನ್ನು ಎರಡು ಹೆಜ್ಜೆ ಮಾತ್ರ. ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ಸ್ ಪಂದ್ಯ ಮತ್ತು ಫೈನಲ್ಸ್ ಮಾತ್ರ ಬಾಕಿ ಇದೆ. ಇದಕ್ಕಾಗಿ ಭಾರತ ತಂಡ ಶತಯಾ ಗತಾಯ ಪ್ರಯತ್ನ ಪಡುತ್ತಿದೆ. ಸೂರ್ಯಕುಮಾರ್ ಯಾದವ್ (Suryakumar Yadav), ವಿರಾಟ್ ಕೋಹ್ಲಿ (Virat Kohli), ಈಗ ಕೆ.ಎಲ್.ರಾಹುಲ್ ಅವರು ಉತ್ತಮ ಫಾರ್ಮ್ ನಲ್ಲಿದ್ದು, ಬೌಲಿಂಗ್ ನಲ್ಲಿ ರವಿಚಂದ್ರನ್ ಅಶ್ವಿನ್ (Ravichandran Ashwin), ಅರ್ಷದೀಪ್ ಸಿಂಗ್ (Arshdeep Singh), ಭುವನೇಶ್ವರ್ ಕುಮಾರ್ (Bhuvneshwar Kumar) , ಹಾರ್ದಿಕ್ ಪಾಂಡ್ಯ (Hardik Pandya) ಎಲ್ಲರೂ ಉತ್ತಮ ಫಾರ್ಮ್ ನಲ್ಲಿದ್ದು, ಮಂದಿನ ಎರಡು ಪಂದ್ಯಗಳು ಹೇಗೆ ನಡೆಯುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. T20 World Cup: ಇದು ನಿಜಕ್ಕೂ ಒಳ್ಳೆಯದಲ್ಲ, ಟೀಮ್ ಇಂಡಿಯಾಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ ಹರ್ಭಜನ್, ಹೇಳಿದ್ದೇನು ಗೊತ್ತೇ??