Cricket News: ಫೈನಲ್ ತಲುಪುವ ನೆಚ್ಚಿನ ತಂಡಗಳನ್ನು ಆಯ್ಕೆ ಮಾಡಿದ ರಿಕ್ಕಿ ಪಾಂಟಿಂಗ್: ಆಯ್ಕೆ ಮಾಡಿದ ತಂಡಗಳು ಯಾವ್ಯಾವು ಗೊತ್ತೇ??

Cricket News: ಫೈನಲ್ ತಲುಪುವ ನೆಚ್ಚಿನ ತಂಡಗಳನ್ನು ಆಯ್ಕೆ ಮಾಡಿದ ರಿಕ್ಕಿ ಪಾಂಟಿಂಗ್: ಆಯ್ಕೆ ಮಾಡಿದ ತಂಡಗಳು ಯಾವ್ಯಾವು ಗೊತ್ತೇ??

Cricket News: ಟಿ20ವಿಶ್ವಕಪ್ (T20 World Cup) ನಲ್ಲಿ ಸೂಪರ್ 12 ಹಂತದ ಪಂದ್ಯಗಳು ಭರದಿಂದ ನಡೆಯುತ್ತಿದ್ದು, ಇನ್ನೇನು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈ ಹಂತದಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಎರಡರಲ್ಲೂ ಸಹ ಯಾವ ತಂಡವು ಸೆಮಿ ಫೈನಲ್ಸ್ ಗೆ ತಮ್ಮ ಸ್ಥಾನವನ್ನು ಖಾತ್ರಿ ಪಡಿಸಿಕೊಂಡಿಲ್ಲ. ಗ್ರೂಪ್ ಎ ಮತ್ತು ಗ್ರೂಪ್ ಬಿ ತಂಡಗಳ ನಡುವೆ ಪೈಪೋಟಿ ನಡೆಯುತ್ತಿದೆ. ಹೀಗಿರುವಾಗ ಆಸ್ಟ್ರೇಲಿಯಾ ತಂಡದ ಮಾಜಿ ಶ್ರೇಷ್ಠ ಆಟಗಾರ, ಎರಡು ಸಾರಿ ಆಸ್ಟ್ರೇಲಿಯಾ ತಂಡ ಏಕದಿನ ವಿಶ್ವಕಪ್ ಗೆಲ್ಲುವ ಹಾಗೆ ಮಾಡಿದ್ದ ಕ್ಯಾಪ್ಟನ್ ರಿಕ್ಕಿ ಪಾಂಟಿಂಗ್ (Ricky Ponting) ಅವರು ಫೈನಲ್ಸ್ ತಲುಪಬಹುದಾದ ಎರಡು ತಂಡಗಳನ್ನು ಹೆಸರಿಸಿದ್ದಾರೆ.

2007 ರಲ್ಲಿ ಟಿ20 ವಿಶ್ವಕಪ್ ಶುರುವಾದ ಮೊದಲ ವರ್ಷ ಭಾರತ ತಂಡ ಎಂಎಸ್ ಧೋನಿ (M S Dhoni) ಅವರ ನೇತೃತ್ವದಲ್ಲಿ ಆಡಿತ್ತು, ಮೊದಲ ಸೀಸನ್ ನಲ್ಲಿ ಗೆದ್ಧ ಭಾರತ, ನಂತರ ಮತ್ತೊಮ್ಮೆ ಗೆದ್ದಿಲ್ಲ, ಈ ವರ್ಷ ರೋಹಿತ್ ಶರ್ಮಾ (Rohit Sharma) ಅವರ ನೇತೃತ್ವದಲ್ಲಿ ಗೆಲ್ಲುವ ಉತ್ಸಾಹದಲ್ಲಿದೆ. 2021ರಲ್ಲಿ ಮೊದಲ ಸಾರಿ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್ ಗೆದ್ದಿತು, ಈ ವರ್ಷ ಆಸ್ಟ್ರೇಲಿಯಾದಲ್ಲೇ ಟಿ20 ವಿಶ್ವಕಪ್ ನಡೆಯುತ್ತಿರುವುದರಿಂದ ಮತ್ತೊಂದು ಸಾರಿ ಗೆಲ್ಲುವ ವಿಶ್ವಾಸದಲ್ಲಿದೆ ಆಸ್ಟ್ರೇಲಿಯಾ. ನವೆಂಬರ್ 13ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಎಂಸಿಜಿಯಲ್ಲಿ ಫೈನಲ್ಸ್ ನಡೆಯಲಿದ್ದು, ಬೆರಳೆಣಿಕೆಯ ದಿನಗಳಷ್ಟೇ ಉಳಿದಿದೆ. ಫೈನಲ್ಸ್ ತಲುಪಬಹುದಾದ ತಂಡಗಳು ಯಾವುವು ಎಂದು ಚರ್ಚೆ ಶುರುವಾಗಿದ್ದು, ರಿಕ್ಕಿ ಪಾಂಟಿಂಗ್ ಅವರು ಎರಡು ತಂಡಗಳನ್ನು ಆಯ್ಕೆ ಮಾಡಿದ್ದಾರೆ. ಇದನ್ನು ಓದಿ.. IPL 2023: ಶುರುವಾಗುತ್ತಿದೆ ಐಪಿಎಲ್ ಹರಾಜು: ಆರ್ಸಿಬಿ ಕಣ್ಣಿಟ್ಟಿರುವ ಮೂವರು ಟಾಪ್ ಯುವ ಆಟಗಾರರು ಯಾರ್ಯಾರು ಗೊತ್ತೇ?? ಇವರು ಬಂದ್ರೆ ಕಪ್ ನಮ್ದೇನಾ??

ರಿಕ್ಕಿ ಅವರು ಹೇಳಿದ್ದು ಹೀಗೆ.. “ಸತ್ಯ ಹೇಳುವುದಾದರೆ, ಫೈನಲ್ಸ್ ಗೆ ಯಾರು ಬರುತ್ತಾರೆ ಎಂದು ಹೇಳಲು ಆಗುವುದಿಲ್ಲ. ಗ್ರೂಪ್ ಎ ಇಂದ ಆಸ್ಟ್ರೇಲಿಯಾ ತಂಡ ಕ್ವಾಲಿಫೈ ಆಗಬಹುದು ಎಂದು ಅನ್ನಿಸುತ್ತದೆ. ದಕ್ಷಿಣ ಆಫ್ರಿಕಾ ಸ್ಟ್ರಾಂಗ್ ಆಗಿದೆ. ಶುರುವಿನಲ್ಲೇ ಆಸ್ಟ್ರೇಲಿಯಾ ಮತ್ತು ಭಾರತ ತಂಡ (Team India) ಫೈನಲ್ಸ್ ನಲ್ಲಿ ಆಡುತ್ತೆ ಎಂದು ಹೇಳಿದ್ದೆ, ಅದೇ ಮಾತಿನ ಮೇಲೆ ನಿಲ್ಲುತ್ತೇನೆ..” ಎಂದು ರಿಕ್ಕಿ ಪಾಂಟಿಂಗ್ ಹೇಳಿದ್ದಾರೆ. ನವೆಂವರ್ 6ರಂದು ಭಾರತ ತಂಡ ಜಿಂಬಾಬ್ವೆ ವಿರುದ್ಧ ಸೂಪರ್ 12 ಹಂತದ ಕೊನೆಯ ಪಂದ್ಯ ಆಡಲಿದ್ದು, ಅದರಲ್ಲಿ ಸಾಮಾನ್ಯವಾಗಿ ಗೆದ್ದರು, ಅಥವ ಮಳೆಯ ಕಾರಣದಿಂದ ಪಾಯಿಂಟ್ಸ್ ಹಂಚಿಕೆ ಆದರೂ ಕೂಡ ಭಾರತ ತಂಡ ಸೆಮಿ ಫೈನಲ್ಸ್ ತಲುಪುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಇದನ್ನು ಓದಿ.. IPL 2023: ಶುರುವಾಗುತ್ತಿದೆ ಐಪಿಎಲ್ ಹರಾಜು: ಆರ್ಸಿಬಿ ಕಣ್ಣಿಟ್ಟಿರುವ ಮೂವರು ಟಾಪ್ ಯುವ ಆಟಗಾರರು ಯಾರ್ಯಾರು ಗೊತ್ತೇ?? ಇವರು ಬಂದ್ರೆ ಕಪ್ ನಮ್ದೇನಾ??