ಕರುನಾಡ ವಾಣಿ
ಇದು ನಿಮ್ಮ ಧ್ವನಿ

T20 World Cup: ಒಂದು ಕಡೆ ಸೂರ್ಯಕುಮಾರ್ ನಂಬರ್ 1: ಮತ್ತೊಂದೆಡೆ ವಿಶ್ವಕಪ್ ನಲ್ಲಿ ಕೊಹ್ಲಿ ನೇ ನಂಬರ್ 1. ದಾಖಲೆ ಪುಡಿ ಪುಡಿ ಮಾಡಿದ ಕೊಹ್ಲಿ.

1,035

Get real time updates directly on you device, subscribe now.

T20 World Cup: ಟಿ20 ವಿಶ್ವಕಪ್ ನಲ್ಲಿ ನಮ್ಮ ಭಾರತ ತಂಡದ ಆಟಗಾರರು ದಾಖಲೆಗಳ ಮೇಲೆ ದಾಖಲೆ ಬರೆಯುತ್ತಲಿದ್ದಾರೆ. ಒಂದು ಕಡೆ ಕಿಂಗ್ ಕೋಹ್ಲಿ ಅವರು ನಂಬರ್1 ಸ್ಥಾನಕ್ಕೆ ಏರಿದ್ದಾರೆ, ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ ಅವರು ಸಹ ನಂಬರ್1 ಸ್ಥಾನಕ್ಕೆ ಏರಿದ್ದಾರೆ. ಈ ಇಬ್ಬರು ಶ್ರೇಷ್ಠ ಆಟಗಾರರು ಇಂದಿನ ಪಂದ್ಯದ ಮೂಲಕ ಮಾಡಿರುವ ಸಾಧನೆ ಏನು ಎಂದು ತಿಳಿಸುತ್ತೇವೆ ನೋಡಿ..ಇಂದು ಭಾರತ ವರ್ಸಸ್ ಬಾಂಗ್ಲಾದೇಶ್ ಪಂದ್ಯದಲ್ಲಿ ಕಿಂಗ್ ಕೋಹ್ಲಿ ಅವರು ಭರ್ಜರಿ ಅರ್ಧಶತಕ ಗಳಿಸಿದರು, ಬರೋಬ್ಬರಿ 62 ರನ್ ಗಳಿಸಿದರು ಕೋಹ್ಲಿ. ಇಂದಿನ ಪಂದ್ಯದಲ್ಲಿ ಕೋಹ್ಲಿ ಅವರು 16 ರನ್ ಗಳಿಸದಾಗಲೇ ಹೊಸದೊಂದು ದಾಖಲೆ ಬರೆದರು, ಟಿ20 ವಿಶ್ವಕಪ್ ನಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಗಳ ಪೈಕಿ ಅಗ್ರಸ್ಥಾನಕ್ಕೆ ಏರಿದರು ಕೋಹ್ಲಿ.

ಇವರಿಗಿಂತ ಮೊದಲ ಶ್ರೀಲಂಕಾ ತಂಡದ ಮಹೇಲಾ ಜಯವರ್ಧನೆ ಅವರು 1016 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರು. ಈಗ ಕೋಹ್ಲಿ ಅವರು ತಮ್ಮ 23ನೇ ಇನ್ನಿಂಗ್ಸ್ ನಲ್ಲಿ ಈ ದಾಖಲೆಯನ್ನು ಮುರಿದಿದ್ದಾರೆ. ಕಿಂಗ್ ಕೋಹ್ಲಿ ಅವರ ದಾಖಲೆಗಳ ಪಟ್ಟಿಗೆ ಇದೊಂದು ಹೊಸ ಸೇರ್ಪಡೆ ಆಗಿದೆ. ಕೋಹ್ಲಿ ಅವರು ಈ ಸಾರಿ ಟಿ20 ವಿಶ್ವಕಪ್ ನಲ್ಲಿ ಆಡಿದ 4 ಪಂದ್ಯಗಳಲ್ಲಿ ಮೂರು ಅರ್ಧಶತಕ ಸಿಡಿಸಿದ್ದಾರೆ. ಇದರಲ್ಲಿ ಮೂರು ಇನ್ನಿಂಗ್ಸ್ ಗಳಲ್ಲಿ ಸಹ ಕೋಹ್ಲಿ ಅವರು ಅಜೇಯರಾಗಿ ಉಳಿದರು. ಇಂದಿನ ಇನ್ನಿಂಗ್ಸ್ ನಲ್ಲಿ ವಿರಾಟ್ ಕೋಹ್ಲಿ ಅವರ ವಿರಾಟ ರೂಪದಿಂದ ಭಾರತ ತಂಡ ಗೆಲ್ಲಲು ಸಹಾಯವಾಯಿತು ಎಂದು ಹೇಳಬಹದು. ಇಂದಿನ ಪಂದ್ಯದಲ್ಲಿ ಕೋಹ್ಲಿ ಅವರ 62 ರನ್ ಗಳಿಂದ, ಈ ಸಾಲಿನ ಟಿ20 ವಿಶ್ವಕಪ್ ನಲ್ಲಿ ಕೋಹ್ಲಿ ಅವರು 214 ರನ್ ಸಿಡಿಸಿದ್ದಾರೆ. ಕೋಹ್ಲಿ ಅವರ ದಾಖಲೆ ಒಂದು ಕಡೆಯಾದರೆ, ಸೂರ್ಯಕುಮಾರ್ ಯಾದವ್ ಅವರು ಮತ್ತೊಂದು ದಾಖಲೆ ಬರೆದಿದ್ದಾರೆ. ಇದನ್ನು ಓದಿ.. T20 World Cup: ಜೀವನ ಶ್ರೇಷ್ಠ ಫೀಲ್ಡಿಂಗ್ ಮಾಡಿದ ರಾಹುಲ್ ರವರು ಬಾಂಗ್ಲಾದೇಶ್ ರವರನ್ನು ರನ್ ಔಟ್ ಮಾಡಿದ ವಿಡಿಯೋ ಹೇಗಿದೆ ಗೊತ್ತೇ?? ನೀವೇ ನೋಡಿ.

ಟಿ20 ಕ್ರಿಕೆಟ್ ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡುತ್ತಾ, ಸ್ಥಿರತೆಯನ್ನು ಕಾಪಾಡಿಕೊಂಡು ಬಂದಿರುವ ಸೂರ್ಯಕುಮಾರ್ ಯಾದವ ಅವರು ಈಗ ಐಸಿಸಿ ಬಿಡುಗಡೆ ಮಾಡಿರುವ ಟಾಪ್ ಕ್ರಿಕೆಟಿಗರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದ್ದಾರೆ, ಈ ಸ್ಥಾನದಲ್ಲಿ ಪಾಕಿಸ್ತಾನ್ ಆಟಗಾರ ಮೊಹಮ್ಮದ್ ರಿಜ್ವಾನ್ ಇದ್ದರು, ಇದೀಗ ಅವರನ್ನು ಹಿಂದಿಕ್ಕಿ ಸೂರ್ಯಕುಮಾರ್ ಯಾದವ್ ಅವರು ಮೊದಲ ಸ್ಥಾನಕ್ಕೆ ಏರಿದ್ದಾರೆ. ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ 863 ಪಾಯಿಂಟ್ಸ್ ಪಡೆದು ಮೊದಲ ಸ್ಥಾನಕ್ಕೆ ಬಂದಿದ್ದಾರೆ ಸೂರ್ಯಕುಮಾರ್ ಯಾದವ್. ಮೊಹಮ್ಮದ್ ರಿಜ್ವಾನ್ 842 ಅಂಕ ಪಡೆದು ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ, 792 ಅಂಕ ಪಡೆದು ನ್ಯೂಜಿಲೆಂಡ್ ಆಟಗಾರ ಡಿವೊನ್ ಕಾನ್ವೆ 3ನೇ ಸ್ಥಾನದಲ್ಲಿದ್ದಾರೆ. ಇದನ್ನು ಓದಿ.. T20 World Cup: ಇಷ್ಟು ದಿವಸ ಮಿಂಚದ ರಾಹುಲ್, ಈ ಬಾರಿ ಮಿಂಚಲು ಕಾರಣವೇನು ಗೊತ್ತೇ?? ಹಿಂದಿರುವ ಖತರ್ನಾಕ್ ಪ್ಲಾನ್ ಯಾರದ್ದು ಗೊತ್ತೇ?

ಪ್ರಸ್ತುತ ಟಿ20 ವಿಶ್ವಕಪ್ ನಲ್ಲಿ ಸೂರ್ಯಕುಮಾರ್ ಯಾದವ್ ಅವರು 164 ರನ್ ಗಳಿಸಿ, ಪ್ರತಿ ಪಂದ್ಯದಲ್ಲೂ ಬಿರುಸಿನ ಪ್ರದರ್ಶನ ನೀಡುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ 30 ರನ್ ಗಳಿಸಿದರು. 4 ಪಂದ್ಯಗಳಲ್ಲಿ ಎರಡು ಅರ್ಧ ಶತಕ ಸಿಡಿಸಿ ವಿಶ್ವಕಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ವರ್ಷ ನ್ಯಾಷನಲ್ ಟೀಮ್ ಗೆ ಎಂಟ್ರಿ ಕೊಟ್ಟ ಸೂರ್ಯಕುಮಾರ್ ಯಾದವ್ ಅವರು ಅಂದಿನಿಂದ ಇಂದಿನವರೆಗೂ ಸ್ಥಿರ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಭಾರತ ತಂಡಕ್ಕೆ ಇವರು ಅತ್ಯುತ್ತಮವಾದ ಅಸೆಟ್ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಇದನ್ನು ಓದಿ.. Cricket: ಕೊಹ್ಲಿ ನಾಯಕನಾಗಿದ್ದಾಗ ಇದ್ದಂತೆ ಈಗ ತಂಡ ಇಲ್ಲ ಎಂದ ಮಾಜಿ ಕ್ರಿಕೆಟಿಗ. ರೋಹಿತ್ ಮಾಡುತ್ತಿರುವ ತಪ್ಪೇನು ಅಂತೇ ಗೊತ್ತೇ??

Get real time updates directly on you device, subscribe now.