T20 World Cup: ಇಷ್ಟು ದಿವಸ ಮಿಂಚದ ರಾಹುಲ್, ಈ ಬಾರಿ ಮಿಂಚಲು ಕಾರಣವೇನು ಗೊತ್ತೇ?? ಹಿಂದಿರುವ ಖತರ್ನಾಕ್ ಪ್ಲಾನ್ ಯಾರದ್ದು ಗೊತ್ತೇ?

T20 World Cup: ಇಷ್ಟು ದಿವಸ ಮಿಂಚದ ರಾಹುಲ್, ಈ ಬಾರಿ ಮಿಂಚಲು ಕಾರಣವೇನು ಗೊತ್ತೇ?? ಹಿಂದಿರುವ ಖತರ್ನಾಕ್ ಪ್ಲಾನ್ ಯಾರದ್ದು ಗೊತ್ತೇ?

T20 World Cup: ಕೆ.ಎಲ್.ರಾಹುಲ್ (K L Rahul) ನಮ್ಮ ಕರ್ನಾಟಕದ ಆಟಗಾರ, ಯುವ ಆಟಗಾರನಾಗಿ ಕ್ರಿಕೆಟ್ ನಲ್ಲಿ ಅದ್ಭುತ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿದ್ದ ಕೆ.ಎಲ್.ರಾಹುಲ್ ಅವರು ಇಂಜುರಿ ಬಳಿಕ ಲಯ ಕಂಡುಕೊಳ್ಳಲು ಬಹಳ ಕಷ್ಟಪಡುತ್ತಿದ್ದರು. ರಾಹುಲ್ ಅವರು ಟಿ20 ವಿಶ್ವಕಪ್ (T20 World Cup) ನಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಸಹ ಕಳಪೆ ಪ್ರದರ್ಶನ ನೀಡಿದ್ದರು, ಸಿಂಗಲ್ ಡಿಜಿಟ್ ಸ್ಕೋರ್ ಮಾಡುತ್ತಾ, ಬೇಗ ಔಟ್ ಆದ ಕಾರಣ ಸಾಕಷ್ಟು ಟೀಕೆಗೆ ಒಳಗಾಗಿದ್ದ ರಾಹುಲ್ ಅವರು ಇಂದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ರಾಹುಲ್ ಅವರ ಈ ಕಂಬ್ಯಾಕ್ ಗೆ ಅಸಲಿ ಕಾರಣ ಯಾರು ಗೊತ್ತಾ?

ಕೆ.ಎಲ್.ರಾಹುಲ್ ಅವರು ಮೂರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದರಿಂದ, ಇಂದು ನಡೆಯುವ ಪಂದ್ಯದಲ್ಲಿ ಉತ್ತಮ ಪ್ರದರ್ಶನ ಕೊಡಲೇಬೇಕಾದ ಅವಶ್ಯಕತೆ ಅವರಿಗೆ ಇತ್ತು, ಸೌತ್ ಆಫ್ರಿಕಾ (India vs South Africa) ಪಂದ್ಯದ ಬಳಿಕ ಕೆ.ಎಲ್.ರಾಹುಲ್ ಅವರು ನೆಟ್ಸ್ ನಲ್ಲಿ ಪ್ರಾಕ್ಟೀಸ್ ಮಾಡುವ ಮೊದಲು ವಿರಾಟ್ ಕೋಹ್ಲಿ (Virat Kohli) ಅವರ ಜೊತೆಗೆ ಬಹಳಷ್ಟು ಸಮಯ ಚರ್ಚೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ರಾಹುಲ್ ಅವರ ಕಂಬ್ಯಾಕ್ ಬಗ್ಗೆ ಕಾಳಜಿ ವಹಿಸಿದ್ದ ವಿರಾಟ್ ಅವರು, ಯುವ ಆಟಗಾರನಿಗೆ ಬಹಳಷ್ಟು ಸಲಹೆಗಳನ್ನು ಸಹ ನೀಡಿದ್ದಾರೆ. ವಿರಾಟ್ ಅವರು ಆಫ್ ಸ್ಟಂಪ್ ಬೌಲಿಂಗ್ ಆದಾಗ ಅವುಗಳನ್ನು ಹೇಗೆ ಫೇಸ್ ಮಾಡಬೇಕು ಎನ್ನುವುದರ ಬಗ್ಗೆ ರಾಹುಲ್ ಅವರಿಗೆ ಸಲಹೆ ನೀಡಿದ್ದಾರೆ.

ಈ ರೀತಿಯ ಎಸೆತಗಳು ಬಂದಾಗ, ರಾಹುಲ್ (K L Rahul) ಅವರು ಔಟ್ ಆಗಿದ್ದಾರೆ, ಹಾಗಾಗಿ ವಿರಾಟ್ ಅವರು ಸಲಹೆ ನೀಡಿದ್ದು, ಅದನ್ನು ಅಳವಡಿಸಿಕೊಂಡ ಕೆ.ಎಲ್.ರಾಹುಲ್ ಅವರು ಇಂದು ನಡೆದ ಇಂಡಿಯಾ ವರ್ಸಸ್ ಬಾಂಗ್ಲಾದೇಶ್ (India Vs Bangladesh) ಪಂದ್ಯದಲ್ಲಿ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿ, ಮಿಂಚಿದ್ದಾರೆ ಬ್ಯಾಟಿಂಗ್ ನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ ವಿರಾಟ್ ಕೆ.ಎಲ್.ರಾಹುಲ್. ನಾಲ್ಕು ಸಿಕ್ಸರ್ ಸಿಡಿಸಿದ್ದಾರೆ. ಅಷ್ಟೇ ಅಲ್ಲದೆ, ಫೀಲ್ಡಿಂಗ್ ನಲ್ಲಿ ಸಹ ಉತ್ತಮ ಪ್ರದರ್ಶನ ನೀಡಿ, ತಮ್ಮ ಚಾಕಚಕ್ಯತೆ ಇಂದ ಸ್ಟಂಪ್ಸ್ ಗೆ ಡೈರೆಕ್ಟ್ ಹಿಟ್ ಮಾಡಿ, ರನ್ ಔಟ್ ಮಾಡಿದ್ದಾರೆ. ರಾಹುಲ್ ಅವರ ಈ ಆಟದ ವೈಖರಿ ಭಾರತ ತಂಡದ ಬಲವನ್ನು ಹೆಚ್ಚಿಸಿದೆ. ಮುಂದಿನ ಪಂದ್ಯಗಳನ್ನು ರಾಹುಲ್ ಅವರು ಹೀಗೆ ಆಡಲಿ ಎನ್ನುತ್ತಿದ್ದಾರೆ ಕ್ರಿಕೆಟ್ ಪ್ರಿಯರು.