Cricket: ಕೊಹ್ಲಿ ನಾಯಕನಾಗಿದ್ದಾಗ ಇದ್ದಂತೆ ಈಗ ತಂಡ ಇಲ್ಲ ಎಂದ ಮಾಜಿ ಕ್ರಿಕೆಟಿಗ. ರೋಹಿತ್ ಮಾಡುತ್ತಿರುವ ತಪ್ಪೇನು ಅಂತೇ ಗೊತ್ತೇ??

Cricket: ಕೊಹ್ಲಿ ನಾಯಕನಾಗಿದ್ದಾಗ ಇದ್ದಂತೆ ಈಗ ತಂಡ ಇಲ್ಲ ಎಂದ ಮಾಜಿ ಕ್ರಿಕೆಟಿಗ. ರೋಹಿತ್ ಮಾಡುತ್ತಿರುವ ತಪ್ಪೇನು ಅಂತೇ ಗೊತ್ತೇ??

Cricket: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ (T20 World Cup) ನಲ್ಲಿ ಟೀಮ್ ಇಂಡಿಯಾ ಉತ್ತಮ ಆರಂಭವನ್ನೇ ಪಡೆದುಕೊಂಡಿತು. ಪಾಕಿಸ್ತಾನ್ (Pakistan) ವಿರುದ್ಧ ಮತ್ತು ನೆದರ್ಲ್ಯಾಂಡ್ (Netherlands) ವಿರುದ್ಧ ಅತ್ಯುತ್ತಮ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಪ್ರದರ್ಶನ ನೀಡಿ, ಗೆಲುವಿನ ನಗೆ ಬೀರಿದ ಟೀಮ್ ಇಂಡಿಯಾ (Team India), ಸೌತ್ ಆಫ್ರಿಕಾ (Team India) ಪಂದ್ಯದಲ್ಲಿ ಮಂಕಾಯಿತು. ಭಾನುವಾರ ನಡೆದ ಈ ಪಂದ್ಯದಲ್ಲಿ ಭಾರತ ತಂಡ ಹೀನಾಯವಾಗಿ ಸೋತಿತು. ಮೊದಲಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ, ಸೌತ್ ಆಫ್ರಿಕಾ ವೇಗಿ ಬೌಲರ್ ಗಳ ದಾಳಿಗೆ ಪವರ್ ಪ್ಲೇ ನಲ್ಲೇ 4 ವಿಕೆಟ್ ಕಳೆದುಕೊಂಡಿತು. ಅಂದಿನ ಪಂದ್ಯದ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಸೂರ್ಯಕುಮಾರ್ ಯಾದವ್ (Suryakumar Yadav) ಒಬ್ಬರೇ. ಕೊನೆಗೆ 20 ಓವರ್ ಗಳಲ್ಲಿ 9 ವಿಕೆಟ್ಸ್ ಕಳೆದುಕೊಂಡ ಭಾರತ ತಂಡ 133 ರನ್ ಸ್ಕೋರ್ ಮಾಡಿತು.

ಎರಡನೇ ಇನ್ನಿಂಗ್ಸ್ ಆರಂಭದಲ್ಲಿ ಮೊಹಮ್ಮದ್ ಶಮಿ (Mohammad Shami) ಅವರು ಮತ್ತು ಅರ್ಷದೀಪ್ ಸಿಂಗ್ (Arshdeep Singh) ಅವರು ಉತ್ತಮ ಪ್ರದರ್ಶನ ನೀಡಿ, 2 ವಿಕೆಟ್ಸ್ ಪಡೆದರು. ನಂತರ ಬಂದ ಏಡನ್ ಮಾರ್ಕ್ರಂ ಉತ್ತಮ ಪ್ರದರ್ಶನ ನೀಡುತ್ತಿರುವಾಗ ಇವರನ್ನು ಔಟ್ ಮಾಡುವ ಅವಕಾಶವನ್ನು ಟೀಮ್ ಇಂಡಿಯಾ ಕೈಚೆಲ್ಲಿತು, ವಿರಾಟ್ ಕೋಹ್ಲಿ (Virat Kohli) ಅವರು ಒಂದು ಸಾರಿ ಕ್ಯಾಚ್ ಬಿಟ್ಟರೆ, ರೋಹಿತ್ ಶರ್ಮಾ (Rohit Sharma) ಅವರು ರನ್ ಔಟ್ ಮಾಡುವ ಅವಕಾಶ ಮಿಸ್ ಮಾಡಿಕೊಂಡರು. ಹೀಗೆ ಕಳಪೆ ಫೀಲ್ಡಿಂಗ್ ಪ್ರದರ್ಶನದಿಂದ ಸೌತ್ ಆಫ್ರಿಕಾ ವಿರುದ್ಧದ ಮ್ಯಾಚ್ ಸೋತಿತು ಟೀಮ್ ಇಂಡಿಯಾ. ಫೀಲ್ಡಿಂಗ್ ನಲ್ಲಿ ಭಾರತ ತಂಡ ಸುಧಾರಿಸಬೇಕು ಎಂದು, ವಿರಾಟ್ ಕೋಹ್ಲಿ ಮತ್ತು ರೋಹಿತ್ ಶರ್ಮಾ ಅವರು ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳದ ಕಾರಣ ಟೀಕೆಗೆ ಒಳಗಾಗಿದ್ದಾರೆ. ಇದನ್ನು ಓದಿ.. Dinesh Karthik RCB: ದಿನೇಶ್ ಕಾರ್ತಿಕ್ ಬಗ್ಗೆ ಅಸಮಾಧಾನ ಹೊರಹಾಕಿದ ಆರ್ಸಿಬಿ ಕೋಚ್. ಹೇಳಿದ್ದೇನು ಗೊತ್ತೇ??

ಇನ್ನು ಭಾರತ ತಂಡದ ಮಾಜಿ ಆಟಗಾರ ಅಜಯ್ ಜಡೇಜಾ (Ajay Jadeja) ಅವರು ಕೂಡ ಇದರ ಅಸಮಾಧಾನ ವ್ಯಕ್ತಪಡಿಸಿದ್ದು, ಕೋಹ್ಲಿ ಅವರು ನಾಯಕತ್ವದಿಂದ ಕೆಳಗಿಳಿದ ಮೇಲೆ, ಫೀಲ್ಡಿಂಗ್ ಬಗ್ಗೆ ಗಮನ ಹರಿಸುತ್ತಿಲ್ಲ ಎಂದಿದ್ದಾರೆ, “ಈಗ ಏಷ್ಯಾ ಟೀಮ್ ಗಳು ಫೀಲ್ಡಿಂಗ್ ಹೆಚ್ಚು ಪ್ರಮುಖ್ಯತೆ ನೀಡುತ್ತಿಲ್ಲ, ಫೀಲ್ಡಿಂಗ್ ಗೆ ಪ್ರಾಮುಖ್ಯತೆ ನೀಡುತ್ತಿರುವುದನ್ನು ಕಳೆದ ಸಾರಿ ನಾನು ಕೇಳಿದ್ದು ವಿರಾಟ್ ಕೋಹ್ಲಿ (Virat Kohli) ಅವರರು ಕ್ಯಾಪ್ಟನ್ ಆಗಿದ್ದಾಗ. ಕೋಹ್ಲಿ ಅವರು ಉತ್ತಮವಾಗಿ ಫೀಲ್ಡ್ ಮಾಡುವ ಆಟಗಾರರನ್ನು ಆಯ್ಕೆ ಮಾಡುತ್ತಿದ್ದರು. ಈಗ ಕೋಚ್ ಮತ್ತು ಕ್ಯಾಪ್ಟನ್ ಇಬ್ಬರು ಕೂಡ ಬದಲಾಗಿದ್ದಾರೆ. ಈಗಿರುವ ನಾಯಕ ಫೀಲ್ಡಿಂಗ್ ಗಿಂತ ಬ್ಯಾಟಿಂಗ್ ಮತ್ತು ಬೌಲಿಂಗ್ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ಈ ಕಾರಣದಿಂದ ಪ್ರಸ್ತುತ ಭಾರತ ತಂಡ ಅಥ್ಲೆಟಿಕ್ ಆಗಿಲ್ಲ. ಟೀಮ್ ಇಂಡಿಯಾದಲ್ಲಿ ಶ್ರೇಷ್ಠ ಬೌಲರ್ ಗಳಾದ ಶಮಿ (Mohammad Shami) ಮತ್ತು ಅಶ್ವಿನ್ (Ravichandran Ashwin) ಇದ್ದಾರೆ, ಆದರೆ ಅತ್ಯುತ್ತಮ ಫೀಲ್ಡರ್ ಯಾರಿದ್ದಾರೆ? ತಂಡಕ್ಕೆ ಏನು ಬೇಕು ಎಂದು ತಿಳಿದಿರಬೇಕು. ಫೀಲ್ಡಿಂಗ್ ಕಡೆಗೆ ಅವರು ಗಮನ ನೀಡಿಲ್ಲ..” ಎಂದಿದ್ದಾರೆ ಅಜಯ್ ಜಡೇಜಾ. ಇದನ್ನು ಓದಿ.. Cricket News: ವಿಶ್ವಕಪ್ ಮುಗಿದ ಮೇಲೆ ರೋಹಿತ್ ನಾಯಕತ್ವ ಕಸಿದುಕೊಳ್ಳುವುದು ಪಕ್ಕ. ಭಾರತದ ಭವಿಷ್ಯದ ನಾಯಕ ಆತನೊಬ್ಬನೇ. ಯಾರು ಗೊತ್ತೇ??